ನವದೆಹಲಿ(ಜೂ.12): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ವೈರಸ್ ನಿಯಂತ್ರ ಕೈತಪ್ಪುತ್ತಿದೆ. ಆಸ್ಪತ್ರೆಗಳ ಪರಿಸ್ಥಿತಿ ಹೇಳ ತೀರದು. ಸೋಂಕಿತರಿಗೆ ಸರಿಯಾಗಿ ವ್ಯವಸ್ಥೆ ಇಲ್ಲ. ಇನ್ನು ಶವಗಳ ರಾಶಿ ರಾಶಿ...ಕೊರೋನಾ ವೈರಸ್‌ನ್ನು ನಿರ್ವಹಣೆ ಮಾಡುವಲ್ಲಿ ವಿಫಲವಾಗಿರುವ ರಾಜ್ಯಗಳ ವಿರುದ್ಧ ಸುಪ್ರೀಂ ಕೋರ್ಟ್ ಗರಂ ಆಗಿದೆ. ಅದರಲ್ಲೂ ದೆಹಲಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಲಾಕ್‌ಡೌನ್ ವೇಳೆ ನೌಕರರಿಗೆ ವೇತನ ಪಾವತಿಸದವರ ವಿರುದ್ಧ ಕ್ರಮ ಇಲ್ಲ; ಸುಪ್ರೀಂ ಕೋರ್ಟ್!

ದೆಹಲಿಯಲ್ಲಿನ ಪರಿಸ್ಥಿತಿಗೆ ಸುಪ್ರೀಂ ಕೋರ್ಟ್ ಸರ್ಕಾರದ ಕಿವಿ ಹಿಂಡಿದೆ. ಕೊರೋನಾ ಸೋಂಕಿತರನ್ನು ಆಸ್ಪತ್ರೆಗಳಲ್ಲಿ ಪ್ರಾಣಿಗಿಂತ ಕಡೆಯಾಗಿ ನೋಡಿಕೊಳ್ಳಲಾಗುತ್ತಿದೆ. ಒಂದು ಪ್ರಕರಣದಲ್ಲಿ ಸೋಂಕಿತರಿಗೆ ತುರ್ತು ಚಿಕಿತ್ಸೆಯ ಅಗತ್ಯವಿತ್ತು. ವೆಂಟಿಲೇಟರ್ ಹಾಗೂ ಸೂಕ್ತ ಚಿಕಿತ್ಸೆ ಸಿಗದಿದೆ ಸೋಂಕಿತ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರೆ, ಆ ಸೋಂಕಿತನನ್ನ ಆರೈಕೆ ಮಾಡಲು ಯಾರೂ ಇರಲಿಲ್ಲ. ಇತ್ತ ಕಸದ ತೊಟ್ಟಿಯಲ್ಲಿಕ ಕೊರೋನಾ ಸೋಂಕಿನಿಂದ ಮೃತಪಟ್ಟ ಶವವೊಂದು ಪತ್ತೆಯಾಗಿದೆ. ಈ ಎಲ್ಲಾ ಘಟನೆಗಳ ಆಧಾರದಲ್ಲಿ ಸುಪ್ರೀಂ ಕೋರ್ಟ್ ದೆಹಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದೆ.

ವಲಸಿಗ ಕಾರ್ಮಿಕರ ನೆರವಿಗೆ ಧಾವಿಸಲು ರಾಜ್ಯಗಳಿಗೆ ಗಡುವು!

ದೆಹಯಲ್ಲಿ ಯಾಕೆ ಹೀಗಾಗುತ್ತಿದೆ. ಸೋಂಕಿತರ ಆರೈಕೆಗೆ ಕಡೆಗಣನೆ ಯಾಕೆ? ಇಷ್ಟೇ ಅಲ್ಲ ಕೊರೋನಾ ಪರೀಕ್ಷೆ ಪ್ರತಿ ದಿನ 7,000ದಿಂದ 5,000ಕ್ಕೆ ಇಳಿಸಿದ್ದು ಯಾಕೆ? ಎಂದು ದೆಹಲಿ ಸರ್ಕಾರವನ್ನು ಪ್ರಶ್ನಿಸಿದೆ. ದೆಹಲಿಯಲ್ಲಿ ಸೋಂಕಿತರನ್ನು ನೋಡಿಕೊಳ್ಳುವ ರೀತಿ ಅತ್ಯಂತ ಅಮಾನವೀಯ ಹಾಗೂ ದೇಶದ ಇತಿಹಾಸದಲ್ಲೇ ಕಪ್ಪು ಚುಕ್ಕೆಯಂತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕೊರೋನಾ ರೋಗಿಗಳನ್ನು ಆಸ್ಪತ್ರೆ ದಾಖಲಿಸಲು ಕುಟುಂಬಸ್ಥರು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗಳು ಸೋಂಕಿತರ ಜೊತೆಗೆ ಕುಟುಂಸ್ಥರನ್ನು ಸಾಯಿಸುತ್ತಿದೆ. ಈ ಕುರಿತು ದೆಹಲಿ ಸರ್ಕಾರ ಯಾಕೆ ಮೌನವಹಿಸಿದೆ. ಕೇಂದ್ರ ಗೃಹ ಇಲಾಖೆ ಸೂಚಿಸಿದ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಅರವೀಂದ್ರ ಕೇಜ್ರಿವಾಲ್ ಸರ್ಕಾರವನ್ನು ಸುಪ್ರೀಂ ಕೋರ್ಟ್ ಹಿಂಡಿ ಹಿಪ್ಪೆ ಮಾಡಿದೆ.

ದೆಹಲಿ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಕೊರೋನಾ ನಿಯಂತ್ರಣ, ಸೋಂಕಿತರ ಚಿಕಿತ್ಸೆ, ಶವಗಳ ನಿರ್ವಹಣೆಗೆ ಯಾವ ಕ್ರಮ ಕೈಗೊಂಡಿದೆ. ಈ ಕುರಿತು ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.