* ಮನೆ ಮನೆಗೆ ತೆರಳಿ ಕೋವಿಡ್ 19 ಲಸಿಕೆ ನೀಡುವುದು ಕಾರ್ಯಸಾಧುವಲ್ಲ* ಈಗಿರುವ ಲಸಿಕಾ ನೀತಿಯನ್ನು ರದ್ಧುಗೊಳಿಸುವಂತೆ ಆದೇಶಿಸಲು ಸಾಧ್ಯವಿಲ್ಲ
ನವದೆಹಲಿ(ಸೆ.09): ದೇಶದ ವೈವಿಧ್ಯಮಯ ಸ್ಥಿತಿಗತಿಗಳನ್ನು ಗಮನಿಸಿದರೆ ಮನೆ ಮನೆಗೆ ತೆರಳಿ ಕೋವಿಡ್ 19 ಲಸಿಕೆ ನೀಡುವುದು ಕಾರ್ಯಸಾಧುವಲ್ಲ. ಈಗಿರುವ ಲಸಿಕಾ ನೀತಿಯನ್ನು ರದ್ಧುಗೊಳಿಸುವಂತೆ ಆದೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಅಂಗವಿಕಲರು ಮತು ಅಸಹಾಯಕರಿಗೆ ಮನೆ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡುವಂತೆ ಆದೇಶಿಸಬೇಕು ಎಂದು ಯುವ ವಕೀಲರ ಬಾರ್ ಅಸೋಸಿಯೇಷನ್ ಮನವಿ ಸಲ್ಲಿಸಿತ್ತು. ಈ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ ದೇಶಾದ್ಯಂತ ಲಸಿಕೆ ವಿತರಣೆ ಪ್ರಗತಿಯಲ್ಲಿದ್ದು ಶೇ.60ರಷ್ಟುಜನರಿಗೆ ಕನಿಷ್ಠ 1 ಡೋಸ್ ಲಸಿಕೆ ನೀಡಲಾಗಿದೆ. ಲಡಾಖ್‌ಗೆ ಹೋಲಿಸಿದರೆ ಕೇರಳದ ಸ್ಥಿತಿ ವಿಭಿನ್ನ, ಹಳ್ಳಿಗಳಿಗೆ ಹೋಲಿಸಿದರೆ ನಗರ ಪ್ರದೇಶಗಳ ಪರಿಸ್ಥಿತಿ ಭಿನ್ನ. ಈ ರೀತಿಯ ವೈವಿಧ್ಯಮಯ ದೇಶದಲ್ಲಿ ಮನೆ ಮನೆಗೆ ತೆರಳಿ ಲಸಿಕೆ ನೀಡುವಂತೆ ಆದೇಶಿಸಲು ಸಾಧ್ಯವಿಲ್ಲ’ ಎಂದಿತು.
ಇದು ಆಡಳಿತಾತ್ಮಕ ವಿಷವಾದ್ದರಿಂದ ಈಗಿರುವ ಲಸಿಕಾ ನೀತಿಯನ್ನು ರದ್ಧುಗೊಳಿಸಲು ಸಾಧ್ಯವಿಲ್ಲ ಎಂದೂ ಹೇಳಿತು.
