ಜನಸಂಖ್ಯಾ ನಿಯಂತ್ರಣಕ್ಕೆ ಕಾನೂನು ಅಗತ್ಯ, ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್!

ಜನಸಂಖ್ಯೆ ನಿಯಂತ್ರಣವಾಗದಿದ್ದರೆ ಆರೋಗ್ಯಕರ ಭಾರತ, ಸಾಕ್ಷರ ಭಾರತ, ಸದೃಢ ಭಾರತ, ಸ್ವಚ್ಛ ಭಾರತ, ಭ್ರಷ್ಟಾಚಾರ ಹಾಗೂ ಅಪರಾಧ ಮುಕ್ತ ಭಾರತ ಮೊದಲಾದ ಅಭಿಯಾನಗಳು ಸಫಲವಾಗುವುದಿಲ್ಲ .

Supreme Court notice to Center for Control population explosion in india over petition filed by hindu leader ckm

ನವದೆಹಲಿ(ಆ.09): ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಕಠಿಣ ಕಾನೂನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಚ್‌, ಈ ಕುರಿತು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ. ಮಥುರಾ ಮೂಲದ ಹಿಂದೂ ಹಕ್ಕುಗಳ ನಾಯಕ ದೇವಕಿನಂದನ್‌ ಠಾಕೂರ್‌ ಜೀ ಅವರು ಈ ಕುರಿತು ಅರ್ಜಿ ಸಲ್ಲಿಸಿದ್ದರು. ಜೊತೆಗೆ ಹಿರಿಯ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಕೂಡಾ ಇದೇ ರೀತಿಯ ಅರ್ಜಿ ಸಲ್ಲಿಸಿದ್ದು, ಎರಡೂ ಅರ್ಜಿಗಳನ್ನು ಒಗ್ಗೂಡಿಸಿ ವಿಚಾರಣೆ ನಡೆಸಿದ ನ್ಯಾಯಾಲಯ ಕೇಂದ್ರಕ್ಕೆ ನೋಟಿಸ್‌ ಜಾರಿ ಮಾಡಿದೆ. ಜನಸಂಖ್ಯಾ ಸ್ಫೋಟವು ಬಾಂಬ್‌ ಸ್ಫೋಟಕ್ಕಿಂತಲೂ ಭೀಕರವಾದದ್ದು. ಜನಸಂಖ್ಯೆ ನಿಯಂತ್ರಣವಾಗದಿದ್ದರೆ ಆರೋಗ್ಯಕರ ಭಾರತ, ಸಾಕ್ಷರ ಭಾರತ, ಸದೃಢ ಭಾರತ, ಸ್ವಚ್ಛ ಭಾರತ, ಭ್ರಷ್ಟಾಚಾರ ಹಾಗೂ ಅಪರಾಧ ಮುಕ್ತ ಭಾರತ ಮೊದಲಾದ ಅಭಿಯಾನಗಳು ಸಫಲವಾಗುವುದಿಲ್ಲ ಎಂದು ಅಶ್ವಿನಿ ಉಪಾಧ್ಯಾಯ ಅವರು ಅರ್ಜಿಯಲ್ಲಿ ವಾದಿಸಿದ್ದರು.

ಮತ್ತೊಂದೆಡೆ ಠಾಕೂರ್‌ ಅವರು ‘ಕಾನೂನು ಆಯೋಗವನ್ನು ದೇಶದ ಜನಸಂಖ್ಯಾ ನಿಯಂತ್ರಣ ನೀತಿ ಹಾಗೂ ಅಭಿವೃದ್ಧಿ ಹೊಂದಿದ ಇತರೆ ದೇಶಗಳ ನೀತಿಗಳನ್ನು ಪರಿಶೀಲಿಸಿ ಜನಸಂಖ್ಯೆಯನ್ನು ನಿಯತ್ರಿಸಲು ಕ್ರಮಗಳನ್ನು ಸೂಚಿಸಲು ಸುಪ್ರೀಂಕೋರ್ಚ್‌ ಆದೇಶಿಸಬೇಕು ಎಂದೂ ಅರ್ಜಿಯಲ್ಲಿ ಕೋರಿದ್ದಾರೆ. ಜೊತೆಗೆ ಇಂತಹ ಕಾನೂನುಗಳು ಎಲ್ಲ ನಾಗರಿಕರಿಗೆ ಶಾಂತಿಯುತ ನಿದ್ರೆ, ಶುದ್ಧವಾದ ಗಾಳಿ, ನೀರು, ಆಹಾರ, ಆರೋಗ್ಯ ಹಾಗೂ ವಸತಿಯ ಹಕ್ಕು ಸೇರಿದಂತೆ ಮೂಲಭೂತ ಹಕ್ಕುಗಳನ್ನು ಖಚಿತ ಪಡಿಸುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ನೇಪಾಳ, ಬಾಂಗ್ಲಾದೇಶದ ಗಡಿಯಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಳ, ಆತಂಕಕಾರಿ ಎಂದ ಗುಪ್ತಚರ ಇಲಾಖೆ!

ಅನಕ್ಷರತೆ, ಬಾಲ್ಯ ವಿವಾಹಗಳು ಜನಸಂಖ್ಯೆ ಹೆಚ್ಚಳಕ್ಕೆ ಕಾರಣ
ಅನಕ್ಷರತೆ, ಬಡತನ, ಬಾಲ್ಯವಿವಾಹ ಹಾಗೂ ಮೌಢ್ಯತೆಗಳು ದೇಶದಲ್ಲಿ ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಆರೋಗ್ಯ ಇಲಾಖೆ ಉಪನಿರ್ದೇಶಕಿ ಜಿ.ಆರ್‌. ಗೌರಮ್ಮ ಅಭಿಪ್ರಾಯಪಟ್ಟರು. ನಗರದ ಎಸ್‌ಜೆಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಮಾಜಶಾಸ್ತ್ರ ವಿಭಾಗದಿಂದ ನಡೆದ ವಿಶ್ವ ಜನಸಂಖ್ಯಾದಿನ ಆಚರಣೆ ಬೇಕೆ? ಬೇಡವೆ ವಿಷಯ ಕುರಿತು ಚರ್ಚೆಯಲ್ಲಿ ಮಾತನಾಡಿ, ಚೀನಾ ಪ್ರಪಂಚದಲ್ಲೆ ಅತಿಹೆಚ್ಚು ಜನಸಂಖ್ಯೆ ಹೊಂದಿದೆ. ಎರಡನೇ ಸ್ಥಾನದಲ್ಲಿ ಭಾರತವಿದೆ. ದೇಶದಲ್ಲಿ ಶೇ.75ರಷ್ಟುಅಕ್ಷರಸ್ಥರು ಹಾಗೂ ಶೇ.25ರಷ್ಟುಅನಕ್ಷರಸ್ಥರಿದ್ದಾರೆ ಎಂದರು. ಜನಸಂಖ್ಯೆ ಹೆಚ್ಚಳದಿಂದಾಗಿ ಆಹಾರ ಸಮಸ್ಯೆ, ಜಲಮಾಲಿನ್ಯ, ವಾಯುಮಾಲಿನ್ಯ ಕೊಳಚೆ ಪ್ರದೇಶಗಳ ಉಲ್ಬಣ, ಸಾಂಕ್ರಾಮಿಕ ರೋಗಗಳು, ಅಲ್ಲದೆ ನಿರುದ್ಯೋಗ ಸಮಸ್ಯೆಯನ್ನು ದೇಶ ಎದುರಿಸುತ್ತಿದೆ. ದೇಶದಲ್ಲಿ ಒಂದು ನಿಮಿಷಕ್ಕೆ 160 ಮಕ್ಕಳು ಜನಿಸುತ್ತಾರೆ. ಕುಟುಂಬ ಯೋಜನೆಗಳ ಅಧ್ಯಯನ ಮಾಡಿ ಜನಸಂಖ್ಯೆ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವ ಕಾರ‍್ಯ ಆಗಬೇಕಿದೆ ಎಂದರು. ಜನ ಸಂಖ್ಯೆ ನಿಯಂತ್ರಣಕ್ಕೆ ಸರ್ಕಾರ ಹಲವಾರು ಯೋಜನೆಗಳ ಜಾರಿ ಮಾಡಿದೆ. ಪ್ರತಿ ಹಂತದಲ್ಲಿಯೂ ಜಾಗೃತಿ ಮೂಡಿಸುವ ಕೆಲಸಗಳು ಆಗುತ್ತಿವೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಅಕ್ಷರಸ್ಥರು ಹೆಚ್ಚಾದಂತೆ ಜನಸಂಖ್ಯೆ ಕೂಡ ಗಣನೀಯ ಇಳಿಮುಖವಾಗುತ್ತದೆ. ಇದಲ್ಲದೇ ಅಂಧ ನಂಬಿಕೆ ಮೌಢ್ಯ ಆಚರಣೆಗಳನ್ನು ಬದಿಗೆ ಸರಿಸಬೇಕಿದೆ ಎಂದು ಗೌರಮ್ಮ ಹೇಳಿದರು.

2100ಕ್ಕೆ ಭಾರತದ ಜನಸಂಖ್ಯೆ 41 ಕೋಟಿ ಕುಸಿತ..!

Latest Videos
Follow Us:
Download App:
  • android
  • ios