ನವದೆಹಲಿ(ಆ.14): ಕೊರೋನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ 25ರಿಂದಲೂ ವಿಡಿಯೋ ಕಾನ್ಫರೆನ್ಸ್‌ ಮೂಲಕವೇ ನಡೆಯುತ್ತಿರುವ ಸುಪ್ರೀಂಕೋರ್ಟ್‌ ಕಲಾಪಗಳು ಮುಂದಿನ ವಾರದಿಂದ ನ್ಯಾಯಾಲಯದಲ್ಲೇ ನಡೆಯುವ ಸಾಧ್ಯತೆ ಇದೆ. 

ಸುಪ್ರೀಂಕೋರ್ಟ್‌ನ 15 ಪೀಠಗಳ ಪೈಕಿ ಕನಿಷ್ಠ 2-3 ಪೀಠಗಳನ್ನಾದರೂ ಸುರಕ್ಷತಾ ಕ್ರಮಗಳೊಂದಿಗೆ ಮುಂದಿನ ವಾರದಿಂದಲೇ ತೆರೆದು ಈ ಹಿಂದಿನಂತೆ ವಿಚಾರಣೆ ನಡೆಸಬೇಕು ಎಂದು 7 ಹಿರಿಯ ಸುಪ್ರೀಂಕೋರ್ಟ್‌ ನ್ಯಾಯಾಧೀಶರನ್ನು ಒಳಗೊಂಡ ಸಮಿತಿ ಶಿಫಾರಸು ಮಾಡಿದೆ. ಮಂಗಳವಾರ ನಡೆದ ಸಮಿತಿ ಸಭೆಯಲ್ಲಿ, ಈ ಬಗ್ಗೆ ಚರ್ಚೆಯಾಗಿದೆ ಎಂದು ಸುಪ್ರೀಂಕೋರ್ಟ್‌ನ ವಕೀಲರ ಸಂಘದ (ಎಸ್‌ಸಿಎಒಆರ್‌ಎ) ಅಧ್ಯಕ್ಷ ಶಿವಾಜಿ ಎಂ. ಜಾಧವ್‌ ತಿಳಿಸಿದ್ದಾರೆ.

ಬುಕ್‌ಲೆಟ್‌ ಬದಲು ಮುಂದಿನ ವರ್ಷ ಇ- ಪಾಸ್‌ಪೋರ್ಟ್‌

ನವದೆಹಲಿ: ಕೇಂದ್ರ ಸರ್ಕಾರವು ಮುಂದಿನ ವರ್ಷದಿಂದ ಎಲೆಕ್ಟ್ರಾನಿಕ್‌ ಮೈಕ್ರೋಚಿಪ್‌ ಹೊಂದಿರುವ ಇ-ಪಾಸ್‌ಪೋರ್ಟ್‌ ವಿತರಿಸಲಿದೆ. ಮಾಧ್ಯಮವೊಂದರ ವರದಿ ಪ್ರಕಾರ, ಪ್ರಾಯೋಗಿಕವಾಗಿ 20,000 ಇ-ಪಾರ್ಸ್‌ಪೋರ್ಟ್‌ ನೀಡುವ ಪ್ರಕ್ರಿಯೆ ಈಗಾಗಲೇ ಮುಗಿದಿದ್ದು, ಇನ್ನುಮುಂದೆ ಅಂಥ ಪಾಸ್‌ಪೋರ್ಟ್‌ಗಳನ್ನು ಏಜೆನ್ಸಿಗಳ ಮೂಲಕ ಹಂಚಬೇಕಿದೆ. 

BS4 ವಾಹನ ರಿಜಿಸ್ಟ್ರೇಶನ್‌ಗೆ ಸುಪ್ರೀಂ ಗ್ರೀನ್ ಸಿಗ್ನಲ್; ನಿಟ್ಟುಸಿರುಬಿಟ್ಟ FADA!

ದೆಹಲಿ, ಚೆನ್ನೈನಲ್ಲಿನ ಈ ಘಟಕಗಳು ಗಂಟೆಗೆ 10,000ದಿಂದ 20,000 ಪಾಸ್‌ಪೋರ್ಟ್‌ಗಳನ್ನು ವಿತರಿಸುವಂತೆ ವಿನ್ಯಾಸಗೊಳಿಸಲಾಗಿದೆ. ಪಾಸ್‌ಪೋರ್ಟ್‌ ನಕಲು ಮತ್ತು ದುರ್ಬಳಕೆ ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಹೊಸ ಕ್ರಮಕ್ಕೆ ಮುಂದಾಗಿದೆ. ಸದ್ಯ ಬುಕ್‌ಲೆಟ್‌ ರೂಪದಲ್ಲಿ ಪಾರ್ಸ್‌ಪೋರ್ಟ್‌ಗಳನ್ನು ನೀಡಲಾಗುತ್ತಿದೆ. ಇದರಿಂದ ನಕಲಿ ಪಾಸ್‌ಪೋರ್ಟ್‌ ದಂಧೆ ನಡೆಯುತ್ತಿದೆ ಎಂಬ ಆರೋಪವಿದೆ.