ಕಳೆದ ವರ್ಷ ಜೂನ್ 3 ರಂದು ರಾಷ್ಟ್ರೀಯ ಉದ್ಯಾನಗಳು ಹಾಗೂ ವನ್ಯಜೀವಿ ರಕ್ಷಿತಾರಣ್ಯಗಳ ಸುತ್ತಲಿನ 1 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ‘ಬಫರ್‌ ವಲಯ’ ಎಂದು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು.

ನವದೆಹಲಿ (ಏಪ್ರಿಲ್ 27, 2023): ರಾಷ್ಟ್ರೀಯ ಉದ್ಯಾನಗಳು ಹಾಗೂ ವನ್ಯಜೀವಿ ರಕ್ಷಿತಾರಣ್ಯಗಳ ಸುತ್ತಲಿನ 1 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ‘ಬಫರ್‌ ವಲಯ’ ಎಂದು ಪರಿಗಣಿಸಬೇಕು ಎಂಬ ತನ್ನ ಆದೇಶದಲ್ಲಿ ಕೊಂಚ ಮಾರ್ಪಾಟು ಮಾಡಿರುವ ಸುಪ್ರೀಂ ಕೋರ್ಟ್, ರಕ್ಷಿತಾರಣ್ಯಗಳ ವ್ಯಾಪ್ತಿಯಲ್ಲಿ ಸಣ್ಣ ಪ್ರಮಾಣದ ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ಅನುಮತಿ ನೀಡಿದೆ.

Add Asianetnews Kannada as a Preferred SourcegooglePreferred

ಆದರೆ, ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಯಬಾರದು. ಕಾರ್ಖಾನೆಗಳು ತಲೆಯೆತ್ತಕೂಡದು ಹಾಗೂ ಭಾರೀ ಪ್ರಮಾಣದ ಕಟ್ಟಡ ಕಾಮಗಾರಿಗಳು ನಡೆಯಕೂಡದು ಎಂಬ ತನ್ನ ಆದೇಶದಲ್ಲಿ ಯಾವುದೇ ಬದಲಾವಣೆ ತರದೇ ಇರಲು ನಿರ್ಧರಿಸಿದೆ.

ಇದನ್ನು ಓದಿ: ರಾಜಕೀಯ ಪಕ್ಷಗಳಿಗೆ ಶಾಕ್: ಮೀಸಲಾತಿ ಮಿತಿ ಶೇ. 50 ಮೀರಿಸಲು ಸುಪ್ರೀಂಕೋರ್ಟ್‌ ನಕಾರ

ಕಳೆದ ವರ್ಷ ಜೂನ್ 3 ರಂದು ರಾಷ್ಟ್ರೀಯ ಉದ್ಯಾನಗಳು ಹಾಗೂ ವನ್ಯಜೀವಿ ರಕ್ಷಿತಾರಣ್ಯಗಳ ಸುತ್ತಲಿನ 1 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ‘ಬಫರ್‌ ವಲಯ’ ಎಂದು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಇದನ್ನು ಮರುಪರಿಶೀಲಿಸುವಂತೆ ಕೋರಿದ್ದ ಕೇಂದ್ರ ಸರ್ಕಾರ, ‘ಸಂಪೂರ್ಣ ನಿಷೇಧದಿಂದ ಜನಜೀವನಕ್ಕೆ ತೊಂದರೆ ಆಗಲಿದೆ. ಈಗಾಗಲೇ 2011ರ ಫೆಬ್ರವರಿ 9 ರಂದು ರಕ್ಷಿತಾರಣ್ಯಗಳ ಸುತ್ತಲಿನ ಬಫರ್‌ ವಲಯಗಳ ಚಟುವಟಿಕೆ ಬಗ್ಗೆ ಅಧಿಸೂಚನೆ ಹೊರಡಿಸಲಾಗಿತ್ತು. ಅದನ್ನು ಜಾರಿಗೊಳಿಸಿದರೆ ಸಾಕು’ ಎಂದು ಹೇಳಿತ್ತು.

ಇದಕ್ಕೆ ಬುಧವಾರ ಒಪ್ಪಿಗೆ ನೀಡಿರುವ ಸುಪ್ರೀಂ ಕೋರ್ಟ್, ‘ರಕ್ಷಿತಾರಣ್ಯಗಳ ಗಣಿಗಾರಿಕೆ, ಭಾರಿ ಪ್ರಮಾಣದ ಕಟ್ಟಡ ಕಾಮಗಾರಿಗಳು ಹಾಗೂ ಬೃಹತ್‌ ಕಾರ್ಖಾನೆಗಳು ಈ ವಲಯದಲ್ಲಿ ತಲೆಯೆತ್ತಬಾರದು. ಮಿಕ್ಕ ಸಣ್ಣಪುಟ್ಟ ನಿರ್ಮಾಣ ಕಾಮಗಾರಿಗಳು ನಡೆಯಬಹುದು. ಆದರೆ ರಾಷ್ಟ್ರೀಯ ಉದ್ಯಾನ ಸುತ್ತಲಿನ ನಿಷೇಧದ ಆದೇಶ ಮುಂದುವರಿಯಲಿದೆ’ ಎಂದು ಹೇಳಿದೆ.

ಇದನ್ನೂ ಓದಿ: ಸರ್ಕಾರದ ಟೀಕೆ, ದೇಶ ವಿರೋಧಿಯಲ್ಲ; ಪತ್ರಿಕಾ ಸ್ವಾತಂತ್ರ ಕಡಿತಗೊಳಿಸುವುದು ಪ್ರಜಾಪ್ರಭುತ್ವಕ್ಕೆ ಮಾರಕ: ಸುಪ್ರೀಂ