ಸುಪ್ರೀಂಕೋರ್ಟ್ ನ್ಯಾಯಾಧೀಶ, ಕನ್ನಡಿಗ ನ್ಯಾ.ನಜೀರ್ ನಿವೃತ್ತಿ
ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ 5 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದ ಕನ್ನಡಿಗ ಅಬ್ದುಲ್ ನಜೀರ್ ಬುಧವಾರ ನಿವೃತ್ತರಾಗಿದ್ದಾರೆ. ಅಬ್ದುಲ್ ನಜೀರ್ ಕರ್ನಾಟಕದ ಮೂಡಬಿದರೆ ಮೂಲದವರು.

ನವದೆಹಲಿ: ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ 5 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದ ಕನ್ನಡಿಗ ಅಬ್ದುಲ್ ನಜೀರ್ ಬುಧವಾರ ನಿವೃತ್ತರಾಗಿದ್ದಾರೆ. ಅಬ್ದುಲ್ ನಜೀರ್ ಕರ್ನಾಟಕದ ಮೂಡಬಿದರೆ ಮೂಲದವರು. 2017ರಿಂದ 2023ರವೆರೆಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಹಾಗೂ ಅದಕ್ಕೂ ಮುನ್ನ 2003ರಿಂದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದರು. ಈ ನಡುವೆ ನಜೀರ್ ಅವರ ಬಗ್ಗೆ, ಅವರ ಕೊನೆಯ ಕಲಾಪದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾ.ಡಿ.ವೈ.ಚಂದ್ರಚೂಡ ಅವರು ಪ್ರಶಂಸಿಸಿದ್ದಾರೆ. ‘ನ್ಯಾ.ನಜೀರ್ ಅವರು ಯಾವಾಗಲೂ ಸತ್ಯದ ಪರವಾಗಿ ನಿಲ್ಲುತ್ತಿದ್ದರು. ಅವರು ಕೋರ್ಟ್ ರೂಂನಲ್ಲಿ ಯಾವಾಗಲೂ ಆಹ್ಲಾದಕರ ವಾತಾವರಣ ಸೃಷ್ಟಿಸುತ್ತಿದ್ದರು ಎಂದಿದ್ದಾರೆ. ಅಯೋಧ್ಯೆ ರಾಮಮಂದಿರ ಪ್ರಕರಣ, ತ್ರಿವಳಿ ತಲಾಖ್, 500, 1000 ರು. ನೋಟುಗಳ ಅಪನಗದೀಕರಣ ಸೇರಿ ಹಲವು ಮಹತ್ವದ ತೀರ್ಪುಗಳನ್ನು ನಜೀರ್ ನೀಡಿದ್ದಾರೆ.
ಥಿಯೇಟರ್‌ಗಳಲ್ಲಿ ಹೊರಗಿನ ಆಹಾರ ತೆಗೆದುಕೊಂಡು ಹೋಗದಂತೆ ನಿರ್ಬಂಧಿಸಬಹುದು : ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ನೋಟ್ ಬ್ಯಾನ್ ಉದ್ದೇಶ ಒಳ್ಳೇದು, ಆದ್ರೆ ಕಾನೂನು ಬಾಹಿರ ಎಂದ ಕರ್ನಾಟಕ ಮೂಲದ ಸುಪ್ರೀಂಕೋರ್ಟ್ ಜಡ್ಜ್..!