ಕ್ರಿಮಿನಲ್ ಹಿನ್ನಲೆ ಹೊಂದಿದ ಅಭ್ಯರ್ಥಿಗಳ ಪಟ್ಟಿ ಬಹಿರಂಗ ಪಡಿಸಲು ಸೂಚನೆ ಸುಪ್ರೀಂ ಸೂಚನೆ ನಿರ್ಲಕ್ಷಿಸಿದ ರಾಜಕೀಯ ಪಕ್ಷಗಳಿಗೆ ದಂಡ ಕ್ರಿಮಿನಲ್ ಅಭ್ಯರ್ಥಿ ಪಟ್ಟಿ ರಿಲೀಸ್ ಮಾಡಲು ಸುಪ್ರೀಂ ಸೂಚನೆ
ನವದೆಹಲಿ(ಆ.10): ಭಾರತದಲ್ಲಿ ಕ್ರಿಮಿನಲ್ ಹಿನ್ನಲೆ ಹೊಂದಿದ ಅಥವಾ ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸುವ ಅವಕಾಶವಿದೆ. ಈ ನಿಯಮಕ್ಕೆ ದೇಶದಲ್ಲಿ ಭಾರಿ ವಿರೋಧವಿದೆ. ರಾಜಕೀಯವನ್ನು ಕ್ರಿಮಿನಲ್ ಹಿನ್ನಲೆ ಹೊಂದಿದವರಿಗೆ ಮುಕ್ತಗೊಳಿಸಲು ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆ ಇಟ್ಟಿದೆ. ಈ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವಿಧಾನಸಭೆಯಲ್ಲಿ ವಿಧ್ವಂಸಕ ಕೃತ್ಯ: ಕೇರಳ ಸರ್ಕಾರದ ಅರ್ಜಿ ವಜಾಗೊಳಿಸಿದ ಸುಪ್ರೀಂ!
ಚುನಾವಣೆಗೂ ಮೊದಲು ಪಕ್ಷಗಳು ತಮ್ಮ ಅಭ್ಯರ್ಥಿಗಳ ಸಂಪೂರ್ಣ ವಿವರವನ್ನುಸಾರ್ವಜನಿಕಗೊಳಿಸಬೇಕು. ಇದರಲ್ಲಿ ಕ್ರಿಮಿನಲ್ ಹಿನ್ನಲೆ ಹೊಂದಿದ್ದರೆ ಅಂಥವರ ವಿವರವನ್ನೂ ಬಹಿರಂಗಗೊಳಿಸಬೇಕು ಎಂದು ಸುಪ್ರೀ ಕೋರ್ಟ್ ಹೇಳಿತ್ತು. ಆದರೆ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಈ ನಿಯಮ ಉಲ್ಲಂಘಿಸಿದೆ. ಹೀಗಾಗಿ ಹಲವು ಪಕ್ಷಗಳಿಗೆ ಸುಪ್ರೀಂ ಕೋರ್ಟ್ ದಂಡ ವಿಧಿಸಿದೆ.
Pegasus: ಐಟಿ, ಟೆಲಿಗ್ರಾಫ್ ಕಾಯ್ದೆಯಡಿ ದೂರು ಯಾಕೆ ದಾಖಲಿಸಲಿಲ್ಲ? ಸುಪ್ರೀಂ ಪ್ರಶ್ನೆ!
2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಹುತೇಕ ಪಕ್ಷಗಳು ಸುಪ್ರೀಂ ಆದೇಶವನ್ನು ನಿರ್ಲಕ್ಷಿಸಿತ್ತು. ಸಿಪಿಎಂ, ಎನ್‌ಸಿಪಿ ಪಕ್ಷಕ್ಕೆ ತಲಾ 5 ಲಕ್ಷ ರೂಪಾಯಿ ದಂಡ ವಿಧಿಸಿದೆ. ಇನ್ನು ಕಾಂಗ್ರೆಸ್, ಬಿಜೆಪಿ, ಕಮ್ಯೂನಿಸ್ಟ್, ಜೆಡಿಯು, ಆರ್‌ಜೆಡಿ ಹಾಗೂ ಎಲ್‌ಜೆಪಿ ಪಕ್ಷಗಳಿಗೆ ತಲಾ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
ದಂಡ ಮಾತ್ರವಲ್ಲ ಇದರ ಜೊತೆಗೆ ರಾಜಕೀಯ ಪಕ್ಷಗಳಿಗೆ ಸುಪ್ರೀಂ ಕೋರ್ಟ್ ಖಡಕ್ ಸೂಚನೆ ನೀಡಿದೆ. ಪ್ರತಿ ಬಾರಿ ರಾಜಕೀಯ ಪಕ್ಷಗಳು ಕ್ರಿಮಿನಲ್ ಹಿನ್ನಲೆ ಹೊಂದಿದ ಅಭ್ಯರ್ಥಿಗಳ ಮಾಹಿತಿಯನ್ನು ಬಹಿರಂಗ ಪಡಿಸುತ್ತಿಲ್ಲ. ಆದೇಶಕ್ಕೂ ಗೌರವ ನೀಡುತ್ತಿಲ್ಲ. ಹೀಗಾಗಿ 2020ರ ಫೆಬ್ರವರಿಯಲ್ಲಿ ನೀಡಿದ ಆದೇಶದ ಮೇಲೆ ಕೆಲ ಮಾರ್ಪಾಡು ಮಾಡಿ ಹೊಸ ತೀರ್ಪು ನೀಡಿದೆ.
ಬಂಗಾಳದ ಹಿಂದೂಗಳ ರಕ್ಷಣೆ ಕೋರಿ ಸಲ್ಲಿಸಿದ್ದ PIL ವಿಚಾರಣೆಗೆ ಮುಂದಾದ ಸುಪ್ರೀಂ ಕೋರ್ಟ್!
ಚುನಾವಣೆಗೂ ಮುನ್ನ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನಲೆಯನ್ನು ಸಾರ್ವಜನಿಕಗೊಳಿಸಬೇಕು. 48 ಗಂಟೆಯೊಳಗೆ ಕ್ರಿಮಿನಲ್ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಪ್ರತಿ ಪಕ್ಷಗಳು ಆಯಾ ಕ್ಷೇತ್ರಕ್ಕೆ ಆಯ್ಕೆ ಮಾಡುವ ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನಲೆ ಹೊಂದಿದ್ದರೂ ಯಾಕೆ ಆಯ್ಕೆ ಮಾಡಲಾಗಿದೆ ಅನ್ನೋ ಕಾರಣವನ್ನೂ ನೀಡಬೇಕು. ಅಭ್ಯರ್ಥಿಗಳ ಕ್ರಿಮಿನಲ್ ವಿವರಗಳನ್ನು ವಿವರವಾಗಿ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಭಾರತದಲ್ಲಿರುವ ಎಲ್ಲಾ ರಾಜಕೀಯ ಪಕ್ಷದಲ್ಲಿ ಕ್ರಿಮಿನಲ್ ಹಿನ್ನಲೆ ಹೊಂದಿದ ಅಭ್ಯರ್ಥಿಗಳಿದ್ದಾರೆ. ಹೀಗಾಗಿ ಸುಪ್ರೀಂ ಕೋರ್ಟ್ ಆದೇಶ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೋರ್ಟ್ ತೀರ್ಪು ದೇಶದ ರಾಜಕೀಯ ಸ್ವಚ್ಚಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹಾಗೂ ದಿಟ್ಟ ಹೆಜ್ಜೆಯಾಗಿದೆ.
