Asianet Suvarna News Asianet Suvarna News

ರೇಪಿಸ್ಟ್‌ ಪಾದ್ರಿ ಜೊತೆ ಮದುವೆ: ಸಂತ್ರಸ್ತೆಯ ಅರ್ಜಿ ತಿರಸ್ಕಾರ!

* ತನ್ನ ಮೇಲೆ ಅತ್ಯಾಚಾರ ಎಸಗಿದ ಪಾದ್ರಿಯನ್ನು ಮದುವೆ ಆಗಲು ಅನುಮತಿ ನೀಡುವಂತೆ ಅರ್ಜಿ

* ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿಯೊಂದನ್ನು ನಿರಾಕರಿಸಿದ ಸುಪ್ರೀಂಕೋರ್ಟ್‌ 

* 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾದ್ರಿ

Supreme Court dismisses pleas of Kerala rape survivor her assaulter to marry each other pod
Author
Bangalore, First Published Aug 3, 2021, 9:06 AM IST

ನವದೆಹಲಿ(ಆ.03): ತನ್ನ ಮೇಲೆ ಅತ್ಯಾಚಾರ ಎಸಗಿದ ಪಾದ್ರಿಯನ್ನು ಮದುವೆ ಆಗಲು ಅನುಮತಿ ನೀಡುವಂತೆ ಕೋರಿ ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿಯೊಂದನ್ನು ಸುಪ್ರೀಂಕೋರ್ಟ್‌ ಸೋಮವಾರ ತಿರಸ್ಕರಿಸಿದೆ.

ಇದೇ ವೇಳೆ ಈ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾದ್ರಿ, ಸಂತ್ರಸ್ತೆಯನ್ನು ಮದುವೆ ಆಗುವ ಸಲುವಾಗಿ ತನಗೆ ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ್ದ ಇನ್ನೊಂದು ಅರ್ಜಿಯನ್ನು ಕೂಡ ಕೋರ್ಟ್‌ ವಜಾಗೊಳಿಸಿದೆ.

ಏನಿದು ಪ್ರಕರಣ?:

ಕೇರಳದ ಕೊಟ್ಟಿಯೂರಿನ ಅಪ್ರಾಪ್ತ ಯುವತಿಯ ಮೇಲೆ ಪಾದ್ರಿಯೊರ್ವ ಅತ್ಯಾಚಾರ ಎಸಗಿದ್ದ. ಸಂತ್ರಸ್ತ ಯುವತಿ ಈಗ 25 ವರ್ಷದವಳಾಗಿದ್ದು, ಆಕೆಗೆ 4 ವರ್ಷದ ಮಗುವಿದೆ. ಹೀಗಾಗಿ ಸಂತ್ರಸ್ತೆಯನ್ನು ಮದುವೆ ಆಗಿ ಮಗುವನ್ನು ಕಾನೂನು ಸಮ್ಮತವಾಗಿ ಸ್ವೀಕರಿಸುವುದಾಗಿ ಪಾದ್ರಿ ಜಾಮೀನು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ. ಆದರೆ, ಪಾದ್ರಿ ಅದಕ್ಕೆ ಅರ್ಹನಲ್ಲ ಎಂದು ಹೇಳಿದ್ದ ಹೈಕೋರ್ಟ್‌ ಜಾಮೀನು ನಿರಕಾರಿಸಿತ್ತು.

ಇದೀಗ ಸುಪ್ರೀಂಕೋರ್ಟ್‌ ಕೂಡ ಈ ತೀರ್ಪನ್ನು ಎತ್ತಿಹಿಡಿದಿದೆ. ‘ಹೈಕೋರ್ಟ್‌ ಪ್ರಜ್ಞಾಪೂರ್ವಕ ನಿರ್ಧಾರ ತೆಗೆದುಕೊಂಡಿದೆ. ನಾವು ಇದರಲ್ಲಿ ಮಧ್ಯಪ್ರವೇಶಿಸುವುದಿಲ್ಲ’ ಎಂದು ಹೇಳಿದೆ. ಅಲ್ಲದೇ, ಕಾನೂನಿನ ಅಡಿಯಲ್ಲಿ ಲಭ್ಯವಿರುವ ಯಾವುದೇ ಪರಿಹಾರವನ್ನು ಸಂತ್ರಸ್ತೆ ಹಾಗೂ ಆರೋಪಿ ಪಡೆಯಬಹುದು ಎಂದು ತಿಳಿಸಿದೆ.

Follow Us:
Download App:
  • android
  • ios