ನವದೆಹಲಿ[ಜ.30]: ಗಲ್ಲು ಶಿಕ್ಷೆ ದಿನಾಂಕ ಮುಂದೂಡಲು ನಾನಾ ಪ್ರಯತ್ನ ನಡೆಸುತ್ತಿರುವ ನಿರ್ಭಯಾ ಅತ್ಯಾಚಾರಿಗಳಿಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ. ಅಪರಾಧಿಗಳಲ್ಲೊಬ್ಬನಾದ ಮುಕೇಶ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಜಾಗೊಂಡ ಬೆನ್ನಲ್ಲೇ, ಮತ್ತೊಬ್ಬ ದೋಷಿ ಅಕ್ಷಯ್ ಸಿಂಗ್ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ವಜಾಗೊಳಿಸಿದೆ.

"

ನಿರ್ಭಯಾ ಅಪರಾಧಿಗಳಿಗೆ ಫೆ. 1 ರಂದು ಗಲ್ಲು ನಿಗಧಿಯಾಗಿದೆ. ಹೀಗಿರುವಾಗ ದೋಷಿಗಳು ಗಲ್ಲಿನಿಂದ ತಪ್ಪಿಸಿಕೊಳ್ಳಲು ಸರ್ವ ಪ್ರಯತ್ನ ನಡೆಸುತ್ತಿದ್ದಾರೆ. ಈಗಾಗಲೇ ಮುಕೇಶ್ ಕುಮಾರ್ ಕ್ಷಮಾದಾನ ಅರ್ಜಿ ತಿರಸ್ಕೃತಗೊಳಿಸಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನಿನ್ನೆಯಷ್ಟೇ ವಜಾಗೊಳಿಸಿತ್ತು. ಈ ಮೂಲಕ ಆತನೆದುರಿಗಿದ್ದ ಎಲ್ಲಾ ಕಾನೂನು ಮಾರ್ಗಗಳು ಮುಚ್ಚಿದ್ದವು. ಆಧರೆ ಹೀಗಿರುವಾಗಲೇ ಮತ್ತೊಬ್ಬ ಅಪರಾಧಿ ಅಕ್ಷಯ್ ಸಿಂಗ್ ಸುಪ್ರೀಂ ಕೋರ್ಟ್ ಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಿ ತನ್ನ ಆಟ ಆರಂಭಿಸಿದ್ದ. ಆದರೀಗ ಆತನ ಆಟ ಆರಂಭವಾಗುವುದಕ್ಕೂ ಮೊದಲೇ ಕೊನೆಯಾಗಿದೆ.

ನಿರ್ಭಯಾ ಹಂತಕರಿಂದ ಕಡೇ ಆಟ: ಯಾರಿಗೆ ಯಾವ ಅವಕಾಶ ಬಾಕಿ?

ಜಸ್ಟೀಸ್ ಎನ್. ವಿ. ರಮನ್ನಾ, ಜಸ್ಟೀಸ್ ಅರುಣ್ ಮಿಶ್ರಾ, ಜಸ್ಟೀಸ್ ರೋಹಿಂಗ್ಟನ್ ಫಲೀ ನಾರಿಮನ್, ಜಸ್ಟೀಸ್ ಆರ್ ಭಾನುಮತಿ ಹಾಗೂ ಅಶೋಕ್ ಭೂಷಣ್ ಸದಸ್ಯರಿದ್ದ ಪಂಚಪೀಠ ಅಕ್ಷಯ್ ಸಿಂಗ್ ಅರ್ಜಿ ವಜಾಗೊಳಿಸಿದೆ. ಇದಕ್ಕೂ ಮುನ್ನ ದೋಷಿಗಳಾದ ಮುಕೇಶ್ ಹಾಗೂ ವಿನಯ್ ಕ್ಯುರೇಟಿವ್ ಅರ್ಜಿ ತಿರಸ್ಕರಿಸಿದ್ದು, ಇನ್ನು ಕೇವಲ ಒಬ್ಬ ಅಪರಾಧಿ ಪವನ್ ಬಳಿ ಕ್ಯುರೇಟಿವ್ ಅರ್ಜಿ ಸಲ್ಲಿಸುವ ಅವಕಾಶ ಇದೆ.

ಜನವರಿ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ