ಒಡಿಶಾ(ಜೂ.22):  ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಕಾರಣ ಈ ಬಾರಿ ಪುರಿ ಜಗನ್ನಾಥ ರಥ ಯಾತ್ರೆ ಆಯೋಜನೆ ಮಾಡಲು ಅವಕಾಶವಿಲ್ಲ. ಈ ಬಾರಿ ಅವಕಾಶ ನೀಡಿದರೆ ಜಗನ್ನಾಥ ನಮ್ಮನ್ನು ಕ್ಷಮಿಸಲ್ಲ ಎಂದು ಜೂನ್ 18ರಂದು ಸುಪ್ರೀಂ ಕೋರ್ಟ್ ಹೇಳಿದೆ. ಇದೀಗ(ಜೂ.22) ಸುಪ್ರೀಂ ಕೋರ್ಟ್ ಹೊಸ ಆದೇಶ ನೀಡಿದೆ. ಪುರಿ ಜಗನ್ನಾಥ ರಥ ಯಾತ್ರೆ ಆಯೋಜಿಸಲು ಅನುಮತಿ ನೀಡಿದೆ.

ರಥ ಯಾತ್ರೆಗೆ ಬ್ರೇಕ್, ಅನುಮತಿ ನೀಡಿದರೆ ಪುರಿ ಜಗನ್ನಾಥ ಕ್ಷಮಿಸಲ್ಲ ಎಂದ ಸುಪ್ರೀಂ ಕೋರ್ಟ್!..

ಜಗನ್ನಾಥ ರಥ ಯಾತ್ರೆಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್, ಕೇವಲ ಆಯೋಜಕರು, ಆಡಳಿತ ಮಂಡಳಿ ಸದಸ್ಯರು ರಥ ಯಾತ್ರೆ ಆಯೋಜನೆ ಮಾಡಬೇಕು. ಇನ್ನು ಸಾರ್ವಜನಿಕರಿಗೆ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ರಥಾ ಯಾತ್ರೆ ರದ್ದು ಮಾಡಿದ ಬೆನ್ನಲ್ಲೇ ಒಡಿಶಾ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಇದರ ವಿಚಾರಣೆಯನ್ನು ಕೋರ್ಟ್ ಇಂದು(ಜೂ.22) ನಡೆಸಿ ಹೊಸ ಆದೇಶ ನೀಡಿದೆ.

ಎಲ್ಲಾ ರೀತಿ ಮುಂಜಾಗ್ರತ ಕ್ರಮದ ಮೂಲಕ ರಥ ಯಾತ್ರೆ ನಡೆಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ ಸಾರ್ವಜನಿಕರ ಪ್ರವೇಶಕ ನಿರಾಕರಿಸಿ ಅನುಮತಿ ನೀಡಿದೆ. ಇದೀಗ ಒಡಿಶಾ ಸರ್ಕಾರ ರಥ ಯಾತ್ರೆ ದಿನ ಕರ್ಫ್ಯೂ ವಿಧಿಸಿದೆ.

"