ರಾಹುಲ್ ಗಾಂಧಿ ಹೊಲಿದ ಚಪ್ಪಲಿಗೆ ಲಕ್ಷ ಲಕ್ಷ ಡಿಮ್ಯಾಂಡ್! 10 ಲಕ್ಷ ಕೊಡ್ತಿವಿ ಅಂದ್ರೂ ಕೊಡದ ಚಮ್ಮಾರ!

ಕಳೆದ ಜು.26ರಂದು ಸುಲ್ತಾನಪುರದ ಚಮ್ಮಾರನೊಬ್ಬನ ಅಂಗಡಿಗೆ ಭೇಟಿ ನೀಡಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ಕೈಯಾರೆ ಚಪ್ಪಲಿಯೊಂದನ್ನು ಹೊಲಿದಿದ್ದರು ಹಾಗೂ ಅದಕ್ಕೀಗ 10 ಲಕ್ಷ ರು.ನಷ್ಟು ಭಾರೀ ಬೇಡಿಕೆ ಬಂದಿದೆ.

sultanpur cobbler get 10L offer slippers stitched by rahul gandhi but not ready to sell rav

ಸುಲ್ತಾನಪುರ (ಮ.ಪ್ರ.): ಕಳೆದ ಜು.26ರಂದು ಸುಲ್ತಾನಪುರದ ಚಮ್ಮಾರನೊಬ್ಬನ ಅಂಗಡಿಗೆ ಭೇಟಿ ನೀಡಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ಕೈಯಾರೆ ಚಪ್ಪಲಿಯೊಂದನ್ನು ಹೊಲಿದಿದ್ದರು ಹಾಗೂ ಅದಕ್ಕೀಗ 10 ಲಕ್ಷ ರು.ನಷ್ಟು ಭಾರೀ ಬೇಡಿಕೆ ಬಂದಿದೆ. ಆದರೆ ಆ ಚಪ್ಪಲಿಯನ್ನು ಯಾರಿಗೂ ನೀಡದೇ ಚಮ್ಮಾರ ತನ್ನ ಬಳಿಯೇ ಇರಿಸಿಕೊಳ್ಳಲು ನಿರ್ಧರಿಸಿದ್ದಾನೆ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಚಮ್ಮಾರ ರಾಮ್‌ ಚೇತ್‌, ರಾಹುಲ್‌ ನಮ್ಮ ಅಂಗಡಿಗೆ ಬಂದಾಗ ಒಂದು ಚಪ್ಪಲಿ ಹೊಲಿದು, ಚರ್ಮದ ಶೂಗೆ ಚರ್ಮ ಅಂಟಿಸಿದ್ದರು. ಈ ಒಂದು ಘಟನೆಯ ಬಳಿಕ ತನ್ನ ಜೀವನವೇ ಬದಲಾಗಿದೆ ಎಂದಿದ್ದಾನೆ.

ರಾಹುಲ್‌ ಗಾಂಧಿ ಜಾತಿ ಕೆದಕಿ ವಿವಾದ ಸೃಷ್ಟಿಸಿದ ಅನುರಾಗ್‌ ಠಾಕೂರ್‌, ಇದು ನಿಂದನೆ ಎಂದ ಕಾಂಗ್ರೆಸ್‌ ನಾಯಕ!

‘ಸುಲ್ತಾನಪುರ ಹೊರವಲಯದಲ್ಲಿರುವ ನನ್ನ ಅಂಗಡಿಗೆ ರಾಹುಲ್ ಗಾಂಧಿಯವರು ಭೇಟಿ ಇತ್ತಾಗಿನಿಂದ ನನ್ನ ಅದೃಷ್ಟ ಖುಲಾಯಿಸಿದೆ. ಇದುವರೆಗೂ ನಿರ್ಲಕ್ಷಿತನಾಗಿದ್ದ ನನ್ನಲ್ಲಿಗೆ ಜನ ಬಂದು ಸೆಲ್ಫಿ ತೆಗೆಸಿಕೊಳ್ಳುತ್ತಿದ್ದಾರೆ. ಅಂದಿನಿಂದ ನನಗೆ ಅನೇಕರ ಕರೆಗಳು ಬರುತ್ತಿದ್ದು, ಪ್ರತಾಪಗಢದ ಒಬ್ಬರು ಆ ಚಪ್ಪಲಿಗಾಗಿ 5 ಲಕ್ಷ ರು. ವ್ಯಯಿಸಲು ಸಿದ್ಧರಿದ್ದರು. ನಾನು ನಿರಾಕರಿಸಿದಾಗ 10 ಲಕ್ಷ ರು. ಕೊಡಲು ಮುಂದಾಗಿದ್ದಾರೆ. ಆದರೆ ನನ್ನ ಪಾಲಿಗೆ ಆ ಚಪ್ಪಲಿ ಅದೃಷ್ಟದ ಸಂಕೇತವಾಗಿದ್ದು, ಅದನ್ನು ಗಾಜಿನ ಪೆಟ್ಟಿಗೆಯಲ್ಲಿ ಇಡುತ್ತೇನೆ. ಯಾರಿಗೂ ಮಾರಲಲ್ಲ’ ಎಂದಿದ್ದಾನೆ.

ಕೇರಳದ ಭೀಕರ ಭೂಕುಸಿತದ ಉಪಗ್ರಹ ಚಿತ್ರ ಇಸ್ರೋ ಬಿಡುಗಡೆ : ವಯನಾಡ್‌ನಲ್ಲಿ ಕುಸಿದದ್ದು ಬರೊಬ್ಬರಿ 21 ಎಕರೆಯ ದೊಡ್ಡ ಗುಡ್ಡ!

ಈ ಘಟನೆಯ ನಂತರ ಅನೇಕ ಸರ್ಕಾರಿ ಅಧಿಕಾರಿಗಳು ತನ್ನ ಅಂಗಡಿಗೆ ಬಂದು ಕಷ್ಟ-ಕಾರ್ಪಣ್ಯಗಳಿಗೆ ಕಿವಿಯಾಗುತ್ತಿರುವುದಾಗಿ ರಾಮಚೇತ್‌ ಹೇಳಿದ್ದಾರೆ.

Latest Videos
Follow Us:
Download App:
  • android
  • ios