'ಸುಲ್ಲಿ ಡೀಲ್ಸ್' Appನಲ್ಲಿ ಮುಸ್ಲಿಂ ಯುವತಿಯರ ಹರಾಜು: RSS ವಿರುದ್ಧ DAWN ಗಂಭೀರ ಆರೋಪ!
* ಸುಲ್ಲಿ ಡೀಲ್ಸ್ ಅಪ್ಲಿಕೇಷನ್ ಮೂಲಕ ಮುಸ್ಲಿಂ ಮಹಿಳೆಯರ ಹರಾಜು
* ವಿವಾದದ ಬೆನ್ನಲ್ಲೇ ಅಪ್ಲಿಕೇಷನ್ ಬಂದ್
* ಟ್ವಿಟರ್‌ನಲ್ಲಿ ಸದ್ದು ಮಾಡುತ್ತಿದೆ ಪ್ರಕರಣ
* ಮೋದಿ, ಆರ್‌ಎಸ್‌ಎಸ್ ವಿರುದ್ಧ ಪಾಖ್ ಮಾಧ್ಯಮ ಕಿಡಿ
ನವದೆಹಲಿ(ಜು.13): ಕಳೆದ ಕೆಲ ದಿನಗಳ ಹಿಂದೆ Sulli Deals ಆಪ್ ಸುಮಾರು 80ಕ್ಕೂ ಅಧಿಕ ಮುಸ್ಲಿಂ ಮಹಿಳೆಯರ ಹರಾಜಿಗಾಗಿ ಫೋಟೋ ಅಪ್ಡೇಟ್ ಮಾಡಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಜು. 7ರಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲೀವಾಲ ಆತಂಖ ವ್ಯಕ್ತಪಡಿಸುತ್ತಾ ಆಡಳಿತ ಮಂಡಳಿಗೆ ನೋಟಿಸ್ ಜಾರಿಗೊಳಿಸಿದ್ದರು. ಸದ್ಯ ದೆಹಲಿಯ ಸೈಬರ್ ಪೊಲೀಸ್ ತಂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಟ್ವಿಟರ್ ಮೂಲಕ ಬಹಿರಂಗಗೊಂಡ ಈ ವಿಚಾರ ಸದ್ಯ ಭಾರೀ ಆತಂಕ ಹುಟ್ಟಿಸಿದೆ. ಮಂಗಳವಾರ ರಿತೇಜ್ ಝಾ ಹೆಸರು ಈ ಪ್ರಕರಣದಲ್ಲಿ ಕೇಳಿ ಬಂದಿದೆ. ತನಿಖೆ ವೇಳೆ ಈ ಹಿಂದೆಯೂ ಆನ್‌ಲೈನ್ ಲೈಗಿಂಕ ಅಪರಾಧ ಪ್ರಕರಣಗಳಲ್ಲಿ ಈತನ ವಿರುದ್ಧ ಕೇಳಿ ಬಂದಿರುವುದು ಬೆಳಕಿಗೆ ಬಂದಿದೆ.
ಮೋದಿ ಸರ್ಕಾರ ಟೀಕಿಸಿದ DAWN
ಜುಲೈ 13ರಂದು ಪಾಖಿಸ್ತಾನದ ಪ್ರಮುಖ ಮಾಧ್ಯಮ ಸಂಸ್ಥೆ DAWN ಈ ವಿಚಾರವಾಗಿ ಸಂಪಾದಕೀಯವನ್ನು ಪ್ರಕಟಿಸಿದೆ. ಇದರಲ್ಲಿ ಭಾರತದ ಮೋದಿ ಸರ್ಕಾರವನ್ನು ತೀವ್ರವಾಗಿ ಟೀಕಿಸಿದೆ. ಮೋದಿ ಆಡಲಿತ ಅವಧಿಯಲ್ಲಿ ಮುಸಲ್ಮಾನರು ಅತ್ಯಂತ ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಸಂಘ ಪರಿವಾರದ 'ಗೂಂಡಾ'ಗಳು ಮುಸಲ್ಮಾನರನ್ನು ಹೊಡೆಯುತ್ತಿದ್ದಾರೆ. ಆದರೆ ಮೋದಿ ಸರ್ಕಾರ ಅವರನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಬರೆದಿದೆ.
ಇಷ್ಟೇ ಅಲ್ಲದೇ ವಿಶ್ವಾದ್ಯಂತ ಮಹಿಳೆಯರು ಆನ್‌ಲೈನ್ ಅವ್ಯವಹಾರಕ್ಕೊಳಗಾಗುತ್ತಿದ್ದಾರೆ ಎಂಬುವುದರಲ್ಲಿ ಅನುಮಾನವಿಲ್ಲ. ಆದರೆ ಈ ಪ್ರಕರಣದಲ್ಲಿ, ಸ್ತ್ರೀದ್ವೇಷ ಮತ್ತು ಇಸ್ಲಾಮೋಫೋಬಿಯಾ ವಿಷಕಾರಿ ಮಿಶ್ರಣವಾಗಿ ಹೊರಹೊಮ್ಮಿವೆ. ಸೈಬರ್ ಸ್ಪೇಸ್ ಮಹಿಳೆಯರ ಪಾಲಿಗೆ ಅಅಪಾಯಕಾರಿ ಸ್ಥಳವಾಗಿ ಮಾರ್ಪಾಡಾಗಿದೆ. ಭಾರತ ಸರ್ಕಾರ ಇನ್ನೂ ಜಾತ್ಯತೀತತೆಯನ್ನು ಪಾಲಿಸುತ್ತಿದ್ದರೆ, ಈ ಕೆಟ್ಟ ಕೃತ್ಯದ ಹಿಂದಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಭಾರತದಲ್ಲಿ, ಕ್ಯಾಬಿನೆಟ್ ಸದಸ್ಯರೊಂದಿಗೆ, ಮುಖ್ಯಮಂತ್ರಿಗಳು ಕೂಡಾ ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ ಎಂದೂ ಹೇಳಲಾಗಿದೆ.
ಅಷ್ಟಕ್ಕೂ Sulli Deals ಅಂದ್ರೇನು?
'ಸುಲ್ಲಿ' ಎನ್ನುವುದು ಅಶ್ಲೀಲ ಪದವಾಗಿದ್ದು, ಇದನ್ನು ಮುಸ್ಲಿಂ ಹೆಣ್ಮಕ್ಕಳನ್ನು ನಿಂದಿಸಲು ಬಳಸಲಾಗುತ್ತದೆ. 'ಸುಲ್ಲಿ ಡೀಲ್ಸ್' ಎಂಬುದು ಗಿಟ್‌ಹಬ್‌ನಲ್ಲಿರುವ ಅಪ್ಲಿಕೇಶನ್ ಆಗಿದೆ. ಇದನ್ನು ಓಪನ್ ಮಾಡಿದಾಗ, ‘Find your Sulli Deal of the Day’ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಇಲ್ಲಿ ಮುಸ್ಲಿಂ ಹೆಣ್ಮಕ್ಕಳ ಪೋಟೋಗಳೂ ಕಾಣಿಸಿಕೊಳ್ಳುತ್ತವೆ. ಆದರೀಗ ವಿವಾದದ ಬಳಿಕ GitHub ಇದನ್ನು ತೆಗೆದು ಹಾಕಿದೆ. ಆದರೆ ಈ ಅಪ್ಲಿಕೇಶನ್‌ನ ಫೋಟೋಗಳನ್ನು ಟ್ವಿಟರ್‌ನಲ್ಲಿ ಶೇರ್ ಮಾಡಲಾಗುತ್ತಿದೆ.