ನವದೆಹಲಿ(ಜು.11): ಹಿರಿಯ ವಕೀಲ ಸುಬ್ರಮಣಿಯನ್ ಸ್ವಾಮಿ ಒಂದು ಕೇಸ್ ಕೈಗೆತ್ತಿಕೊಂಡರೆ ಜನ್ಮ ಜಾಲಾಡಿ ಬಿಡುತ್ತಾರೆ. ಅಯೋಧ್ಯ ರಾಮಜನ್ಮಭೂಮಿ ಪ್ರಕರಣ ಸುಖಾಂತ್ಯದಲ್ಲೂ ಸುಬ್ರಮಣಿ ಸ್ವಾಮಿ ಪಾತ್ರ ಪ್ರಮುಖವಾಗಿದೆ. ರಾಮಸೇತು ಸೇರಿದಂತೆ ಹಲವು ಪ್ರಕರಣಗಳಲ್ಲಿ ಸುಬ್ರಮಣಿ ಸ್ವಾಮಿ ಎಂಟ್ರಿಯಿಂದ ಗೆಲುವು ಸಿಕ್ಕಿದೆ. ಇದೀಗ ಸುಬ್ರಮಣಿ ಸ್ವಾಮಿ ಬಾಲಿವುಡ್ ಖಾನ್‌ಗಳ ಆಸ್ತಿ ತನಿಖೆಗೆ ಆಗ್ರಹಿಸಿದ್ದಾರೆ.

ಸುಶಾಂತ್ ಸಿಂಗ್ ಸಾವಿನ ತನಿಖೆ; ಅಖಾಡಕ್ಕೆ ಇಳಿದ ಸುಬ್ರಮಣಿಯನ್ ಸ್ವಾಮಿ...

ಸಲ್ಮಾನ್ ಖಾನ್, ಅಮಿರ್ ಖಾನ್ ಸೇರಿದಂತೆ ಬಾಲಿವುಡ್ ಖಾನ್‌ಗಳ ಆಸ್ತಿ ತನಿಖೆ ಮಾಡಬೇಕು ಎಂದು ಸ್ವಾಮಿ ಆಗ್ರಹಿಸಿದ್ದಾರೆ. ಭಾರತದ ಹಲವು ಭಾಗಗಳಲ್ಲಿ ಆಸ್ತಿ ಹೊಂದಿದ್ದಾರೆ. ಇದರ ಜೊತೆಗೆ ವಿದೇಶದಲ್ಲಿ ಮನೆ, ವಿಲ್ಲಾ, ಬಂಗಲೆಗಳನ್ನೂ ಹೊಂದಿದ್ದಾರೆ. ವಿದೇಶದಲ್ಲಿ ಆಸ್ತಿ ಹೊಂದಿರುವ ಕುರಿತು ED(enforcement directorate) ಹಾಗೂ CBI(Central Bureau of Investigation)ತನಿಖೆ ಆಗತ್ಯವಿದೆ ಎಂದಿದ್ದಾರೆ.

ಸುಬ್ರಮಣಿಯನ್ ಸ್ವಾಮಿ ವಿರುದ್ಧ ಗುಡುಗಿದ ವಿಶ್ವಸಂಸ್ಥೆ ಅಧಿಕಾರಿಗೆ ಸಂಕಷ್ಟ, ಮಾನನಷ್ಟ ಕೇಸ್ ದಾಖಲು!

ಬಾಲಿವುಡ್‌ ಖಾನ್‌ಗಳು ವಿದೇಶದಲ್ಲಿ ಆಸ್ತಿ ಹೊಂದಿದ್ದಾರೆ. ಅದರಲ್ಲೂ ದುಬೈನಲ್ಲಿ ಫ್ಲ್ಯಾಟ್, ಬಂಗಲೇ, ವಿಲ್ಲಾ ಹೊಂದಿದ್ದಾರೆ. ಇದು ಯಾರು ಉಡುಗೊರೆಯಾಗಿ ನೀಡಿದರು? ಅಥವಾ ಇವರೇ ಖರೀದಿಸಿದರೆ? ವಿದೇಶದಲ್ಲಿ ಬಾಲಿವುಡ್ ನಟರು ಆಸ್ತಿ ಖರೀದಿಸಿದ್ದು ಹೇಗೆ? ಈ ಎಲ್ಲಾ ಕುರಿತು ಸಮಗ್ರ ತನಿಖೆ ಆಗಬೇಕು. ಇವರೇನು ಕಾನೂನಿಗಿಂತ ದೊಡ್ಡವರಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.