Asianet Suvarna News Asianet Suvarna News

ಕ್ಲಾಸ್‌ರೂಮ್‌ನಲ್ಲೇ ವಿದ್ಯಾರ್ಥಿಗಳ ಕಿಸ್ಸಿಂಗ್‌: ವೀಡಿಯೋ ವೈರಲ್ : ವ್ಯಾಪಕ ಆಕ್ರೋಶ

ಇಲ್ಲಿನ ಖಾಸಗಿ ಶಾಲೆಯೊಂದರ ತರಗತಿಯೊಂದರಲ್ಲಿ ವಿದ್ಯಾರ್ಥಿಗಳು ಪರಸ್ಪರ ಕಿಸ್ ಮಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಕ್ಕಳ ಈ ದಾರಿ ತಪ್ಪಿದ ವರ್ತನೆಗೆ ತೀವ್ರ ಆಕ್ರೋಶ ಕೇಳಿ ಬಂದಿದೆ. 

Students kissing in classroom A video said to be from a private school in Noida has gone viral akb
Author
First Published Aug 11, 2024, 11:58 AM IST | Last Updated Aug 11, 2024, 12:00 PM IST

ನೋಯ್ಡಾ: ಇಲ್ಲಿನ ಖಾಸಗಿ ಶಾಲೆಯೊಂದರ ತರಗತಿಯೊಂದರಲ್ಲಿ ವಿದ್ಯಾರ್ಥಿಗಳು ಪರಸ್ಪರ ಕಿಸ್ ಮಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಕ್ಕಳ ಈ ದಾರಿ ತಪ್ಪಿದ ವರ್ತನೆಗೆ ತೀವ್ರ ಆಕ್ರೋಶ ಕೇಳಿ ಬಂದಿದೆ.  ಟ್ವಿಟ್ಟರ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಶಾಲೆಯ ಸಮವಸ್ತ್ರ ಧರಿಸಿದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ತರತಿಯ ಕೊನೆಬೆಂಚ್‌ನಲ್ಲಿ ಕುಳಿತು ಪರಸ್ಪರ ಕಿಸ್ ಮಾಡುತ್ತಿದ್ದರೆ, ಅವರ ಪಕ್ಕದಲ್ಲೇ ಇತರ ಮಕ್ಕಳು ಇದ್ದರೂ ಕೂಡ ಕ್ಯಾರೇ ಎನ್ನದೇ ಈ ವಿದ್ಯಾರ್ಥಿಗಳು ಕಿಸ್ಸಿಂಗ್‌ನಲ್ಲಿ ತೊಡಗಿದ್ದು, ವೀಡಿಯೋದಲ್ಲಿ ಕಂಡು ಬರುತ್ತಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಹೇಳುವ ಪ್ರಕಾರ ಇದು ಹಳೆ ವೀಡಿಯೋ ಹಲವು ವರ್ಷಗಳ ಹಳೇ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣವನ್ನು ಪರಿಶೀಲಿಸಿ ನಂಬಬೇಕು ಎಂದು ಒಬ್ಬರು ಈ ವೀಡಿಯೋಗೆ ಕಾಮೆಂಟ್ ಮಾಡಿದ್ದಾರೆ. 

ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಕಾಡ್ಗಿಚ್ಚಿನಂತೆ ಹಬ್ಬಿದ್ದು,  ಕಿಶೋರವಸ್ಥೆಯಿಂದ ಯೌವ್ವನಕ್ಕೆ ಕಾಲಿರಿಸುವ ಹೊಸ್ತಿಲಲ್ಲಿರುವ, ಶಾಲೆಗೆ ಹೋಗುವ ಮಕ್ಕಳನ್ನು ಹೊಂದಿರುವ ಪೋಷಕರು ಆತಂಕಗೊಂಡಿದ್ದಾರೆ.  ನೋಯ್ಡಾದ ಶಾಲೆಯೊಂದರ ವಿಡಿಯೋ ಇದು ಎಂದು ವೈರಲ್ ಆಗುತ್ತಿದ್ದು, ಇದು ಎಲ್ಲಿಯ ವೀಡಿಯೋ ಯಾವ ಶಾಲೆಯಲ್ಲಿ ನಡೆದಿರುವ ಘಟನೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಈ ವೀಡಿಯೋ ಮಾತ್ರ ತೀವ್ರ ಆಕ್ರೋಶ ಉಂಟು  ಮಾಡಿದ್ದು, ಶಾಲೆಗಳಲ್ಲಿ ಶಿಸ್ತುಬದ್ಧವಾದ ಕ್ರಮ ಕೈಗೊಳ್ಳಬೇಕು ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ. 

ಸಿಎಂ ನಿವಾಸದ ಎದುರೇ ಅಪ್ಪಿಕೊಂಡು ಮುದ್ದಿಸುತ್ತಾ ತುಟಿಗೆ ತುಟಿ ಸೇರಿಸಿದ ಜೋಡಿ; ವಿಡಿಯೋ ವೈರಲ್

ಟ್ವಿಟ್ಟರ್‌ನಲ್ಲಿ ಮನೋಜ್ ಶರ್ಮಾ ಎಂಬುವವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ' ಶಾಲಾ ತರಗತಿಯಲ್ಲೇ ಅಶ್ಲೀಲತೆ, ನೋಡಿ ನೋಯ್ಡಾದ , ಈಗ ಇಲ್ಲಿ ಕ್ಲಾಸ್‌ರೂಮ್‌ನಲ್ಲಿಯೂ ಕಾಮ ನಡೆಯುತ್ತಿದೆ. ಆದರೆ ಇದು ಯಾವ ಕಾಲೇಜು, ಸ್ಕೂಲ್ ಎಂಬ ಬಗ್ಗೆ ಇಲ್ಲಿಯವರೆಗೆ ಮಾಹಿತಿ ಇಲ್ಲ ಎಂದು ಅವರು ಬರೆದಿದ್ದಾರೆ. ಬಹುತೇಕರು ಇದು ಎಲ್ಲಿ ನಡೆದ ಘಟನೆ ಎಂದು ಪ್ರಶ್ನೆ ಮಾಡುತ್ತಿದ್ದು, ಒಂದು ವೇಳೆ ಈ ಘಟನೆ ನಡೆದಿದ್ದೆ ನಿಜ ಆಗಿದ್ದಲ್ಲಿ ಇಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.  ಹಾಗೆಯೇ ಶಾಲೆಯಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಬದಲು ಮಾಡಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ. 

ತ್ರಿಬಲ್ ರೈಡಿಂಗ್ ಬೈಕ್‌ನಲ್ಲಿ ಜೋಡಿಯ ಕಿಸ್ಸಿಂಗ್: ಆಕ್ರೋಶ ಹೆಚ್ಚಿಸಿದ ವೈರಲ್ ವಿಡಿಯೋ!

 

Latest Videos
Follow Us:
Download App:
  • android
  • ios