ನವದೆಹಲಿ(ಏ.26): ಕೊರೋನಾ ವೈರಸ್‌ ಸೋಂಕನ್ನು ತ್ವರಿತವಾಗಿ ಪತ್ತೆ ಮಾಡುವ ರಾರ‍ಯಪಿಡ್‌ ಟೆಸ್ಟ್‌ ಕಿಟ್‌ಗಳ ಬಳಕೆಯನ್ನು ಕೇಂದ್ರ ಸರ್ಕಾರ ಮುಂದಿನ ಆದೇಶದವರೆಗೆ ಶನಿವಾರ ತಡೆಹಿಡಿದಿದೆ. ಮುಂದಿನ ಸೂಚನೆ ನೀಡುವವರೆಗೆ ಕಿಟ್‌ಗಳನ್ನು ಬಳಕೆ ಮಾಡದಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ ಎಂದು ಮೂಲಗಳು ಹೇಳಿವೆ.

ಚೀನಾದ 2 ಕಂಪನಿಗಳಿಂದ ಇತ್ತೀಚೆಗೆ ಆಮದು ಮಾಡಿಕೊಳ್ಳಲಾದ ಕೊರೋನಾ ರಾರ‍ಯಪಿಡ್‌ ಟೆಸ್ಟ್‌ ಕಿಟ್‌ಗಳು ತಪ್ಪು ಫಲಿತಾಂಶ ನೀಡುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ 2 ದಿನ ಅವುಗಳನ್ನು ಬಳಸದಂತೆ ಎಲ್ಲಾ ರಾಜ್ಯಗಳಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್‌) ಮಂಗಳವಾರ ಸೂಚನೆ ನೀಡಿತ್ತು.

ಚೀನಾದಲ್ಲಿ ಹೊಸ ಕೇಸ್‌ ಒಂದಂಕಿಗೆ ಕುಸಿತ: 9 ದಿನದಿಂದ ಒಂದೂ ಸಾವಿಲ್ಲ!

ಈಗ ಕಿಟ್‌ಗಳನ್ನು ಐಸಿಎಂಆರ್‌ ತಜ್ಞರ ತಂಡ ಗಹನವಾಗಿ ಪರಿಶೀಲನೆ ನಡೆಸುತ್ತಿದೆ. ಹೀಗಾಗಿ ಪರಿಶೀಲನೆಯ ಫಲಿತಾಂಶ ಗೊತ್ತಾಗುವವರೆಗೂ ಅವುಗಳನ್ನು ಯಾವ ರಾಜ್ಯಗಳೂ ಬಳಸಬಾರದು ಎಂದು ಸರ್ಕಾರ ಸೂಚನೆ ನೀಡಿದೆ. ಆದರೆ, ಕಿಟ್‌ಗಳಲ್ಲಿ ತಪ್ಪಿಲ್ಲ. ಅದನ್ನು ಭಾರತದ ವೈದ್ಯರು ಸರಿಯಾಗಿ ಬಳಸಿಲ್ಲ. ಹೀಗಾಗಿ ಅದರಲ್ಲಿ ದೋಷಗಳು ಕಂಡುಬಂದಿವೆ ಎಂದು ಚೀನಾ ಕಂಪನಿಗಳು ಪ್ರತ್ಯಾರೋಪ ಮಾಡಿದ್ದವು.