ತಮಿಳು ನಟ ವಿಜಯ್ ರ‍್ಯಾಲಿಯಲ್ಲಿ ಕಾಲ್ತುಳಿತ ಪರಿಸ್ಥಿತಿ, ಹಲವರು ಆಸ್ಪತ್ರೆ ದಾಖಲು, ಓರ್ವ ಬಾಲಕಿ ಕಾಣೆಯಾಗಿದ್ದು, ಪರಿಸ್ಥಿತಿ ಕೈಮೀರಿದ ಹಂತಕ್ಕೆ ಹೋಗಿದೆ. ಹಲವರು ಮೂರ್ಛೆ ಹೋಗಿದ್ದಾರೆ.

ಕರೂರ್ (ಸೆ.27) ತಮಿಳು ನಟ ವಿಜಯ್ ಜೋಸೆಫ್ ಅವರ ಟಿವಿಕೆ ಪಕ್ಷದ ರ‍್ಯಾಲಿಯಲ್ಲಿ ಭಾರಿ ಅವಘಡ ಸಂಭವಿಸಿದೆ. ತಮಿಳುನಾಡಿನ ಕರೂರ್‌ನಲ್ಲಿ ಆಯೋಜಿಸಿದ್ದ ರ‍್ಯಾಲಿಗೆ ಅಪಾರ ಅಭಿಮಾನಿಗಳು ಆಗಮಿಸಿದ್ದಾರೆ. ಮೈದ್ರಾಸ್ ಹೈಕೋರ್ಟ್ ಸೂಚನೆ ನೀಡಿದ್ದರೂ ಅವಘಡ ಸಂಭವಿಸಿದೆ. ಕಿಕ್ಕಿರಿದು ಸೇರಿದ್ದ ಜನಸಾಗರದಲ್ಲಿ ಕಾಲ್ತುಳಿತ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವರು ಪ್ರಜ್ಞೆ ತಪ್ಪಿದ್ದರೆ, ಓರ್ವ ಬಾಲಕಿ ಕಾಣೆಯಾಗಿದ್ದಾರೆ.ಗಾಯಾಳುಗಳ್ನು ಆಸ್ಪತ್ರೆ ದಾಖಲಿಸಲಾಗಿದೆ.

ಆಸ್ಪತ್ರೆದಾಖಲಾದ ಪೈಕಿ ಬಹುತೇಕ ಮಕ್ಕಳು

ವಿಜಯ್ ಟಿವಿಕೆ ರ‍್ಯಾಲಿಯಲ್ಲಿ ಆತಂಕ ಪರಿಸ್ಥಿತಿ ನಿರ್ಮಾಣವಾಗಿದೆ. ಅತೀಯಾದ ಜನರು ಸೇರಿದ್ದ ಕಾರಣ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಈ ವೇಳೆ ಅಸ್ವಸ್ಥಗೊಂಡ ಹಲವು ಮಕ್ಕಳು ಮೂರ್ಛೆ ಹೋಗಿದ್ದಾರೆ. ಹಲವರನ್ನು ಆಸ್ಪತ್ರೆ ದಾಖಲಿಸಲಾಗಿದೆ. ಆಸ್ಪತ್ರೆ ದಾಖಲಾದ ಪೈಕಿ ಬಹುತೇಕರು ಮಕ್ಕಳು. ಇತ್ತ 9 ವರ್ಷದ ಓರ್ವ ಬಾಲಕಿ ಕಾಣೆಯಾಗಿರುವ ಮಾಹಿತಿ ಇದೆ.

ಆ್ಯಂಬುಲೆನ್ಸ್‌ಗೆ ಜಾಗ ಮಾಡಿಕೊಡಲು ವಿಜಯ್ ಮನವಿ

ವಿಜಯ್ ಟಿವಿಕೆ ರ‍್ಯಾಲಿಗೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಅತೀಯಾದ ಪ್ರಮಾಣದಲ್ಲಿ ಜನರು ಸೇರಿದ್ದ ಕಾರಣ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಹಲವು ನಾಯಕರ ಮಕ್ಕಳು ಪ್ರಜ್ಞೆ ತಪ್ಪಿದ್ದಾರೆ. ಪರಿಸ್ಥಿತಿ ಕೈಮೀರಿದೆ. ಜನರು ಆತಂಕಗೊಂಡಿದ್ದಾರೆ. ಕಾಲ್ತುಳಿತ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ಮೂರ್ಛೆ ಹೋದವರ ರಕ್ಷಿಸಲು ಆಗಮಿಸಿದ ಆ್ಯಂಬುಲೆನ್ಸ್‌ಗೆ ಜಾವಿಲ್ಲದೆ ಕೆಲ ಹೊತ್ತು ಗಾಯಾಳುಗಳು ಪರದಾಡುವಂತಾಯಿತು. ಈ ವೇಳೆ ನಟ ವಿಜಯ್ ಜೋಸೆಫ್, ಆ್ಯಂಬುಲೆನ್ಸ್‌ಗೆ ಜಾಗ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.

ಐವರು ಮೃತಪಟ್ಟಿರುವ ಶಂಕೆ

ವಿಜಯ್ ಆಯೋಜಿಸಿದ್ದ ಟಿವಿಕೆ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತ ಪರಿಸ್ಥಿತಿಯಲ್ಲಿ ಐವರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಪರಿಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳ ಸಂಖ್ಯೆ ಏರಿಕೆಯಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಸದ್ಯ ಪೊಲೀಸರು ಪರಿಸ್ಥಿತಿ ನಿಯಂತ್ರಣ ತೆಗೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ನೀರಿನ ಬಾಟಲಿ ವಿತರಣೆ ಪ್ರಯತ್ನ

ಕಾಲ್ತುಳಿತ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಜನರು ಆತಂಕಗೊಂಡಿದ್ದಾರೆ. ಹಲವರು ನೀರಿಗಾಗಿ ಪರದಾಡಿದ್ದಾರೆ. ಹೀಗಾಗಿ ತಕ್ಷಣವೇ ನೀರಿನ ಬಾಟಲಿ ವಿತರಣೆ ಮಾಡುವ ಪ್ರಯತ್ನ ಮಾಡಿದ್ದಾರೆ. ಗಾಯಾಳುಗಳನ್ನು ಆ್ಯಂಬುಲೆನ್ಸ್ ವರೆಗೆ ತರುವ ಪ್ರಯತ್ನ ಮಾಡಿದ್ದಾರೆ.

ಮದ್ರಾಸ್ ಹೈಕೋರ್ಟ್ ಸೂಚನೆ

ವಿಜಯ್ ಟಿವಿಕೆ ರ‍್ಯಾಲಿ ಕುರಿತು ಮದ್ರಾಸ್ ಹೈಕೋರ್ಟ್ ಸ್ಪಷ್ಟ ಸೂಚನೆ ನೀಡಿತ್ತು. ಕಾಲ್ತುಳಿತ ಸೇರಿದಂತೆ ಅವಘಡಗಳ ಕುರಿತು ಎಚ್ಚರಿಕೆ ವಹಿಸುವಂತೆ ಸೂಚಿಸಿತ್ತು. ಇದೀಗ ಈ ಸೂಚನೆ ನಿರ್ಲಕ್ಷ್ಯ ಮಾಡಿದ್ದಾರಾ ಅನ್ನೋ ಚರ್ಚೆಗಳು ಶುರುವಾಗುತ್ತಿದೆ.