ವಾಷಿಂಗ್ಟನ್(ಫೆ.10)‌: ಬೆಂಗಳೂರು ಮೂಲದ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ ಗುರೂಜಿ ಅವರಿಗೆ ಅಮೆರಿಕದ ಪ್ರತಿಷ್ಠಿತ ನಾರ್ತ್ ಈಸ್ಟರ್ನ್‌ ವಿಶ್ವವಿದ್ಯಾಲಯ ‘ಗ್ಲೋಬಲ್‌ ಸಿಟಿಜನ್‌ಶಿಪ್‌ ಅಂಬಾಸಿಡರ್‌’ ಗೌರವ ನೀಡಿದೆ.

ಪಿಎಂ ಮೋದಿಯ ಆತ್ಮನಿರ್ಭರ ಕನಸಿಗೆ ಸಾಧು ಸಂತರ ಸಾಥ್!

ಶಾಂತಿಸ್ಥಾಪನೆ, ಆಧ್ಯಾತ್ಮಿಕತೆ ಮತ್ತು ಮಾನವೀಯ ಕೆಲಸಗಳಿಗೆ ಶ್ರೀ ಶ್ರೀ ಅವರ ಕೊಡುಗೆಯನ್ನು ಗುರುತಿಸಿ ವಿಶ್ವವಿದ್ಯಾಲಯ ಈ ಗೌರವ ನೀಡಿದೆ. ವಿಶ್ವವಿದ್ಯಾಲಯವು ಅಮೆರಿಕದ ಅತ್ಯುತ್ತಮ 50 ವಿವಿಗಳ ಪೈಕಿ ಸ್ಥಾನ ಪಡೆದಿದೆ. ಹಾಗೆಯೇ ಅತಿ ಹೆಚ್ಚು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಒಳಗೊಂಡಿರುವ ಅಮೆರಿಕದ ಮೂರು ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ.

ರವಿಶಂಕರ ಅವರು ಭಾರತ,ಅಷ್ಘಾನಿಸ್ತಾನ, ಬ್ರೆಜಿಲ್‌, ಕೊಲಂಬಿಯಾ, ಇಂಡೋನೇಷ್ಯಾ, ಇರಾಕ್‌, ಇಸ್ರೇಲ್‌ ಮುಂತಾದ ದೇಶಗಳಲ್ಲಿ ಮನೋಶಕ್ತಿಯನ್ನು ಹೆಚ್ಚಿಸುವ ಕಾರ‍್ಯಕ್ರಮಗಳನ್ನು ನಡೆಸಿದ್ದಾರೆ.