ರಾಹುಲ್‌ ಗಾಂಧಿ ಅನರ್ಹತೆ ಬಳಿಕ, 2018ರಲ್ಲಿ ಮೋದಿ ಹೆಸರಿನ ಅರ್ಥವನ್ನು ಭ್ರಷ್ಟಾಚಾರ ಎಂದು ಬದಲಾಯಿಸಿದರೆ ಸರಿ ಹೋಗುತ್ತದೆ ಎಂದು ಖುಷ್ಬೂ ಮಾಡಿದ್ದ ಟ್ವೀಟ್‌ ವೈರಲ್‌ ಆಗಿತ್ತು.ಮೋದಿ ಪದದ ಕುರಿತ ಟೀಕೆಯಿಂದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಲೋಕಸಭೆಯಿಂದ ಅನರ್ಹಗೊಂಡ ಬೆನ್ನಲ್ಲೇ ಸದ್ಯ ಬಿಜೆಪಿ ನಾಯಕಿಯಾಗಿರುವ ನಟಿ ಖುಷ್ಬೂಗೆ ಹಳೆಯ ಟ್ವೀಟ್‌ ಅನ್ನು ಕಾಂಗ್ರೆಸ್‌ ರೀಟ್ವೀಟ್‌ ಮಾಡಿತ್ತು.

ನವದೆಹಲಿ (ಮಾರ್ಚ್‌ 27, 2023): ‘ಮೋದಿ ಎಂಬ ಹೆಸರಿನ ಅರ್ಥವೇ ಭ್ರಷ್ಟಾಚಾರ’ ಎಂದು 2018ರಲ್ಲಿ ಹೇಳಿದ್ದ ಟ್ವೀಟನ್ನು ಅಳಿಸುವುದಿಲ್ಲ ಎಂದು ಬಿಜೆಪಿ ನಾಯಕಿ ಖುಷ್ಬೂ ಸುಂದರ್‌ ಹೇಳಿದ್ದಾರೆ. ‘ನಾನು ಕಾಂಗ್ರೆಸ್‌ ಪಕ್ಷದ ವಕ್ತಾರಳಾಗಿದ್ದಾಗ ಈ ಟ್ವೀಟ್‌ ಮಾಡಿದ್ದೆ. ಕಾಂಗ್ರೆಸ್‌ ನಾನು ಮಾಡಿರುವ ಇನ್ನಷ್ಟು ಹಳೆಯ ಟ್ವೀಟ್‌ಗಳನ್ನು ಹುಡುಕಿ ತೆಗೆಯಲಿ. ಕಾಂಗ್ರೆಸ್‌ಗೆ ಈಗಂತೂ ಏನೂ ಕೆಲಸವಿಲ್ಲ. ಆದರೆ ಈ ಟ್ವೀಟನ್ನು ಮಾತ್ರ ನಾನು ಅಳಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ. 

ರಾಹುಲ್‌ ಗಾಂಧಿ ಅನರ್ಹತೆ ಬಳಿಕ, 2018ರಲ್ಲಿ ಮೋದಿ ಹೆಸರಿನ ಅರ್ಥವನ್ನು ಭ್ರಷ್ಟಾಚಾರ ಎಂದು ಬದಲಾಯಿಸಿದರೆ ಸರಿ ಹೋಗುತ್ತದೆ ಎಂದು ಖುಷ್ಬೂ ಮಾಡಿದ್ದ ಟ್ವೀಟ್‌ ವೈರಲ್‌ ಆಗಿತ್ತು.
ಮೋದಿ ಪದದ ಕುರಿತ ಟೀಕೆಯಿಂದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಲೋಕಸಭೆಯಿಂದ ಅನರ್ಹಗೊಂಡ ಬೆನ್ನಲ್ಲೇ ಸದ್ಯ ಬಿಜೆಪಿ ನಾಯಕಿಯಾಗಿರುವ ನಟಿ ಖುಷ್ಬೂಗೆ ಹಳೆಯ ಟ್ವೀಟ್‌ ಅನ್ನು ಕಾಂಗ್ರೆಸ್‌ ರೀಟ್ವೀಟ್‌ ಮಾಡಿದ್ದು, ಅದು ಈಗ ಕಾಡತೊಡಗಿದೆ. ಖುಷ್ಬೂ ಕಾಂಗ್ರೆಸ್‌ನಲ್ಲಿದ್ದಾಗ ಮೋದಿ ಎಂಬ ಪದದ ಅರ್ಥ ಭ್ರಷ್ಟಾಚಾರ ಎಂಬುದಕ್ಕೆ ಸೂಕ್ತವಾಗಿದೆ. ಹಾಗಾಗಿ ಮೋದಿ ಪದದ ಅರ್ಥವನ್ನು ಹಾಗೆ ಬದಲಿಸಬೇಕು ಎಂದು 2018ರಲ್ಲಿ ಟ್ವೀಟ್‌ ಮಾಡಿದ್ದರು. 

Scroll to load tweet…

ಇದನ್ನು ಓದಿ: ವ್ಹೀಲ್‌ಚೇರ್‌ಗಾಗಿ 30 ನಿಮಿಷ ಕಾಯಬೇಕಾಯ್ತು: ಏರ್‌ ಇಂಡಿಯಾ ವಿರುದ್ಧ ಗರಂ ಆದ ಖುಷ್ಬೂ ಸುಂದರ್

ಇದೀಗ ಕಾಂಗ್ರೆಸ್‌, ಖುಷ್ಬೂ ಮಾಡಿದ್ದ ಹಳೆಯ ಟ್ವೀಟ್‌ ಅನ್ನು ರೀಟ್ವೀಟ್‌ ಮಾಡಿ ಖುಷ್ಬೂ ಮತ್ತು ಬಿಜೆಪಿಗೆ ತಿರುಗೇಟು ನೀಡಿದೆ. ಆದರೆ ಇದಕ್ಕೆ ಸಡ್ಡು ಹೊಡೆದಿರುವ ಖುಷ್ಬೂ, ‘ಕಾಂಗ್ರೆಸ್‌ನಲ್ಲಿದ್ದಾಗ ಮೋದಿ ಬಗ್ಗೆ ಮಾಡಿದ ಟ್ವೀಟ್‌ ಬಗ್ಗೆ ನನಗೇನೂ ನಾಚಿಕೆ ಇಲ್ಲ. ಕಾರಣ ಆಗ ನಾನು ಕಾಂಗ್ರೆಸ್‌ನ ನಾಯಕರ ವರ್ತನೆ ಮತ್ತು ಅವರ ಸಂಸ್ಕೃತಿಯನ್ನು ಪಾಲಿಸುತ್ತಿದ್ದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಗೆದ್ದು ರಾಹುಲ್‌ ಅನರ್ಹತೆಗೆ ಉತ್ತರ ನೀಡೋಣ: ಸಾಮೂಹಿಕ ರಾಜೀನಾಮೆಗೆ ಮುಂದಾದ ಸಂಸದರಿಗೆ ಪ್ರಿಯಾಂಕಾ ಸಲಹೆ