ಉತ್ತರಾಖಂಡದಲ್ಲಿರುವ ಬದರಿನಾಥ ಸೇರಿದಂತೆ ದೇಶದ ಹಲವು ದೇಗುಲಗಳು ಈ ಹಿಂದೆ ಬೌದ್ಧ ಮಂದಿರಗಳಾಗಿದ್ದವು. ಅವುಗಳನ್ನು ಒಡೆದು ಹಿಂದೂ ದೇಗುಲ ನಿರ್ಮಾಣ ಮಾಡಲಾಯಿತು. ಗ್ಯಾನವಾಪಿ ಮಸೀದಿ ರೀತಿಯಲ್ಲೇ ಈ ದೇಗುಲಗಳನ್ನೂ ಸಮೀಕ್ಷೆಗೆ ಒಳಪಡಿಸಬೇಕು ಎಂದು ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್‌ ಮೌರ್ಯ (Swami Prasad Maurya) ವಿವಾದಿತ ಹೇಳಿಕೆ ನೀಡಿದ್ದಾರೆ. 

ಡೆಹ್ರಾಡೂನ್‌: ಉತ್ತರಾಖಂಡದಲ್ಲಿರುವ ಬದರಿನಾಥ ಸೇರಿದಂತೆ ದೇಶದ ಹಲವು ದೇಗುಲಗಳು ಈ ಹಿಂದೆ ಬೌದ್ಧ ಮಂದಿರಗಳಾಗಿದ್ದವು. ಅವುಗಳನ್ನು ಒಡೆದು ಹಿಂದೂ ದೇಗುಲ ನಿರ್ಮಾಣ ಮಾಡಲಾಯಿತು. ಗ್ಯಾನವಾಪಿ ಮಸೀದಿ ರೀತಿಯಲ್ಲೇ ಈ ದೇಗುಲಗಳನ್ನೂ ಸಮೀಕ್ಷೆಗೆ ಒಳಪಡಿಸಬೇಕು ಎಂದು ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್‌ ಮೌರ್ಯ (Swami Prasad Maurya) ವಿವಾದಿತ ಹೇಳಿಕೆ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉತ್ತರಪ್ರದೇಶದ ಮಾಜಿ ಸಚಿವರೂ ಆಗಿರುವ ಮೌರ್ಯ, ‘8ನೇ ಶತಮಾನದವರೆಗೂ ಬದರಿನಾಥವು ಬೌದ್ಧ ಮಂದಿರವಾಗಿತ್ತು. ಹೀಗಾಗಿ ಯಾವ್ಯಾವ ಬೌದ್ಧ ಮಂದಿರಗಳನ್ನು ಒಡೆದು ದೇಗುಲ ನಿರ್ಮಿಸಲಾಗಿದೆಯೋ ಅದರ ಹಿನ್ನೆಲೆ ತಿಳಿಯಲು ಅವುಗಳನ್ನೂ ಗ್ಯಾನವಾಪಿ (Ganavapi Masjid) ಮಾದರಿ ಸಮೀಕ್ಷೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಮೌರ್ಯ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್‌ಸಿಂಗ್‌ ಧಾಮಿ (Uttarakhand Chief Minister Pushkarsingh Dhami), ‘ಯಾರೊಂದಿಗೆ ಮೌರ್ಯ ನಂಟು ಹೊಂದಿದ್ದಾರೋ ಅವರ ಹಿನ್ನೆಲೆ ಗಮನಿಸಿದಾಗ ಅವರು ಇಂಥ ಹೇಳಿಕೆ ನೀಡುವುದು ಸಹಜ. ಏಕೆಂದರೆ ಅವರು ಸಮಾಜವನ್ನು ಒಡೆದು ಆಳುವುದರಲ್ಲಿ ನಂಬಿಕೆ ಹೊಂದಿದ್ದಾರೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ರ ಪತ್ನಿ ಡಿಂಪಲ್‌ ಉತ್ತರಾಖಂಡ ಮೂಲದವರು. ಅವರು ಮೌರ್ಯ ಹೇಳಿಕೆಗೆ ಸೂಕ್ತ ತಿರುಗೇಟು ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಮತ್ತೊಂದೆಡೆ ಬಿಎಸ್ಪಿ ನಾಯಕಿ ಮಾಯಾವತಿ ಕೂಡಾ ಮೌರ್ಯ ಹೇಳಿಕೆಯನ್ನು ಟೀಕಿಸಿದ್ದು, ಚುನಾವಣೆಗೂ ಮುನ್ನ ಸಮುದಾಯಗಳನ್ನು ಒಡೆಯುವ ಕೆಲಸವನ್ನು ಮೌರ್ಯ ಮಾಡುತ್ತಿದ್ದಾರೆ. ಇದೊಂದು ರಾಜಕೀಯ ಹೇಳಿಕೆ. ಅವರಿಗೆ ಈ ಬಗ್ಗೆ ಗೊತ್ತಿದ್ದರೆ, ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಅವರು ಏಕೆ ಈ ಪ್ರಶ್ನೆ ಎತ್ತಲಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಗ್ಯಾನವಾಪಿ ಮಸೀದಿ ಸರ್ವೆಗೆ ತಾತ್ಕಾಲಿಕ ತಡೆ, ಮಸೀದಿ ಕಮಿಟಿಗೆ ಬಿಗ್ ರಿಲೀಫ್!

ಔರಂಗಜೇಬ್‌ ಕ್ರೂರಿ ಆಗಿರಲಿಲ್ಲ, ವಿಶ್ವನಾಥ ಮಂದಿರ ಕೆಡವಲಿಲ್ಲ: ಕಾಶಿ ಗ್ಯಾನವಾಪಿ ಮಸೀದಿ ಸಮಿತಿ