Asianet Suvarna News Asianet Suvarna News

ವಂದೇ ಭಾರತ್ ರೈಲಿಗೆ ಕಲ್ಲೆಸೆದರೆ 5 ವರ್ಷ ಜೈಲು, ಎಚ್ಚರಿಕೆ ನೀಡಿದ ಭಾರತೀಯ ರೈಲ್ವೇ!

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲೆಸೆದ ಘಟನೆಗಳು ಕೆಲ ರಾಜ್ಯದಲ್ಲಿ ನಡೆಯುತ್ತಲೇ ಇದೆ. ಇದೀಗ ರೈಲ್ವೇ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ. ವಂದೇ ಭಾರತ್ ರೈಲಿಗೆ ಕಲ್ಲೆಸೆದರೆ ಜೈಲು ಗ್ಯಾರೆಂಟಿ.

South Central Railway warns public offenders of stone pelters on Vande Bharat trains to face 5 year jail term ckm
Author
First Published Mar 29, 2023, 5:58 PM IST

ನವದೆಹಲಿ(ಮಾ.29): ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಭಾರತದಲ್ಲಿ ಹೊಸ ಕ್ರಾಂತಿ ಮಾಡಿದೆ. ಇದೀಗ ದೇಶದ ಎಲ್ಲಾ ಭಾಗಗಳಿಗೆ ವಂದೇ ಭಾರತ್ ರೈಲು ವಿಸ್ತರಿಸಲಾಗತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಯಶಸ್ವಿಯಾಗಿ ಕಾರ್ಯಾರಂಭಿಸಿದೆ. ಆದರೆ ಸಂಪೂರ್ಣ ಸ್ವದೇಶಿ ನಿರ್ಮಿತಿ ಅತೀ ವೇಗದ ರೈಲಿಗೆ ಹಲೆವೆಡೆ ಕಲ್ಲೆಸೆದು ಹಾನಿ ಮಾಡಿದ ಘಟನೆ ವರದಿಯಾಗಿದೆ. ಈಗಲೂ ವಂದೇ ಭಾರತ್ ರೈಲಿಗೆ ಕಿಡಿಗೇಡಿಗಳು ಕಲ್ಲೆಸೆಯುತ್ತಿರುವುದು ನಡೆಯುತ್ತಲೇ ಇದೆ. ಇದರ ಬೆನ್ನಲ್ಲೇ ದಕ್ಷಿಣ ರೈಲ್ವೇ ವಿಭಾಗ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದೆ. ವಂದೇ ಭಾರತ್ ರೈಲಿಗೆ ಕಲ್ಲೆಸೆದರೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದಿದೆ.

ಸೌತ್ ಸೆಂಟ್ರಲ್ ರೈಲ್ವೇ ಸಾರ್ವಜನಿಕರಿಗೆ ಮಹತ್ವದ ಸೂಚನೆ ನೀಡಿದೆ. ಸಮಾಜ ವಿರೋಧಿ ಚಟುವಟಿಕೆ ನಡೆಸುವ ಕಿಡಿಗೇಡಿಗಳು ವಂದೇ ಭಾರತ್ ರೈಲಿಗೆ ಕಲ್ಲೆಸೆಯುತ್ತಿರುವ ಘಟನೆ ಹೆಚ್ಚಾಗಿದೆ. ಇತ್ತೀಚೆಗೆ ತೆಲಂಗಾಣದ ಹಲವು ಭಾಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲೆಸಯಲಾಗಿದೆ. ಖಾಜಿಪೇಟ್, ಖಮಾಮ್, ಖಾಜಿಪೇಟ್-ಬೊಂಗಿರ್, ಎಲೂರು-ರಾಜಾಮುಂದ್ರಿ ವಂದೇ ಭಾರತ್ ರೈಲಿಗೆ ಕಲ್ಲೆಸೆಯಲಾಗಿದೆ. ತೆಲಂಗಾಣದಲ್ಲಿ 9 ಈ ರೀತಿಯ ಘಟನೆಗಳು ವರದಿಯಾಗಿದೆ. 

ದೇಶದ ವಂದೇ ಭಾರತ್‌ ರೈಲಿನ ಮೇಲೆ ಇರಲಿದೆ ಇನ್ನು ಟಾಟಾ ಹೆಸರು!

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ 2019ರ ಫೆಬ್ರವರಿಯಲ್ಲಿ ಚಾಲನೆ ಸಿಕ್ಕಿದೆ. ಅಲ್ಲಿಂದ ಇಲ್ಲೀವರೆಗೆ ತೆಲಂಗಾಣ, ಬಿಹಾರ, ಉತ್ತರ ಪ್ರದಶ, ಚತ್ತೀಸಘಡ ಹಾಗೂ ಪಶ್ಚಿಮ ಬಂಗಾಳದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲೆಸೆಯಲಾಗಿದೆ. ವಂದೇ ಭಾರತ್ ರೈಲಿಗೆ ಕಲ್ಲೆಸೆಯುವ ಕಿಡಿಗೇಡಿಗಳ ವಿರುದ್ದ ರೈಲ್ವೇ ಆ್ಯಕ್ಟ್ ಸೆಕ್ಷನ್ 153ರ ಅಡಿಯಲ್ಲಿ ಪ್ರರಕರಣ ದಾಖಲಿಸಲಾಗುತ್ತದೆ. 5 ವರ್ಷದ ವರೆಗೆ ಕಠಿಣ ಜೈಲು ಶಿಕ್ಷೆ ವಿದಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಇದುವರೆಗೆ ವಂದೇ ಭಾರತ್ ರೈಲಿಗೆ ಕಲ್ಲೆಸೆದ ಕಿಡಿಗೇಡಿಗಳ ಪೈಕಿ 39 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಮಾರ್ಚ್ 11 ರಂದು ಹೌರಾ - ನ್ಯೂ ಜಲಾಪೈಗುರಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲೆಸೆಯಲಾಗಿತ್ತು. ರೈಲಿನ ಕಿಟಕಿ ಪುಡಿ ಪುಡಿಯಾಗಿತ್ತು.  ಈ ಘಟನೆಯಲ್ಲಿ ವಂದೇ ಭಾರತ್‌ ರೈಲಿನ ಕೋಚ್‌ವೊಂದಕ್ಕೆ ಹಾನಿಯಾಗಿದೆ. ಕಲ್ಲೆಸೆತವನ್ನು ಪ್ರಯಾಣಿಕರೊಬ್ಬರು ಗಮನಿಸಿ ರೈಲ್ವೇ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಸುವಂತೆ ಸ್ಥಳೀಯ ಪೊಲೀಸರಿಗೆ ಸೂಚಿಸಲಾಗಿದೆ. ಜಲ್ಪೈಗುರಿ-ಹೌರಾ ಮಾರ್ಗವಾಗಿ ವಂದೇ ಭಾರತ್‌ ರೈಲಿಗೆ ಚಾಲನೆ ನೀಡಿದ ಮರುದಿನವೇ ದುಷ್ಕರ್ಮಿಗಳು ರೈಲಿನ ಮೇಲೆ ಕಲ್ಲೆಸೆದಿದ್ದರು. ಈ ಮೊದಲು ಕಲ್ಲೆಸೆದಿದ್ದ ಮೂವರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದರು. ಸಿಕಂದರಾಬಾದ್‌ ಮತ್ತು ವಿಶಾಖಪಟ್ಟಣಂ ಮಾರ್ಗದಲ್ಲಿನ ವಂದೇ ಭಾರತ್‌ ರೈಲಿನ ಮೇಲೂ ಕಲ್ಲೆಸೆಯಲಾಗಿತ್ತು.

 

100 ಕಿ.ಮೀ. ದೂರದ ನಗರಗಳ ಮಧ್ಯೆ ವಂದೇ ಮೆಟ್ರೋ ರೈಲು: ಬೆಂಗಳೂರು, ತುಮಕೂರು, ರಾಮನಗರಕ್ಕೆ ಲಭ್ಯ..?

ಚೆನ್ನೈ- ಬೆಂಗಳೂರು- ಮೈಸೂರು ವಂದೇ ಭಾರತ್‌ (20607) ರೈಲಿಗೆ ದುಷ್ಕರ್ಮಿಗಳು ಕಲ್ಲೆಸೆದ ಪರಿಣಾಮ ಎರಡು ಕೋಚ್‌ನ ಆರು ಗಾಜುಗಳು ಜಖಂಗೊಂಡಿವೆ. ಕೃಷ್ಣರಾಜಪುರ ರೈಲ್ವೆ ನಿಲ್ದಾಣದಿಂದ ಅನತಿ ದೂರದಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್‌ ಯಾರಿಗೂ ಗಾಯವಾಗಿಲ್ಲ. ವಂದೇ ಭಾರತ್‌ನ ಸಿ4 ಬೋಗಿಯ 10, 11, 12 ಹಾಗೂ ಸಿ5 ಬೋಗಿಯ 20, 21, 22ರ ಗಾಜುಗಳು ಒಡೆದಿವೆ. ಸಂಜೆ ವೇಳೆಗೆ ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್‌) ಘಟನಾ ಸ್ಥಳಕ್ಕೆ ತೆರಳಿ ಸುಮಾರು 1 ಕಿ.ಮೀ.ವರೆಗೆ ಪರಿಶೀಲನೆ ನಡೆಸಿದೆ.
 

Follow Us:
Download App:
  • android
  • ios