ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಫೆ.17ರಿಂದ 19ರ ವರೆಗೆ ಭಾರತಕ್ಕೆ ಭೇಟಿ ನೀಡಲಿದ್ದು, ಈ ವೇಳೆ ಫ್ರೆಂಚ್ ನಿರ್ಮಿತ 114 ರಫೇಲ್ ಯುದ್ಧವಿಮಾನಗಳನ್ನು ಖರೀದಿಸಲು 3.25 ಲಕ್ಷ ಕೋಟಿ ರು.ಗಳ ಒಪ್ಪಂದಕ್ಕೆ ಭಾರತ ಸಹಿ ಹಾಕುವ ಸಾಧ್ಯತೆ ಇದೆ.

ನವದೆಹಲಿ: ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಫೆ.17ರಿಂದ 19ರ ವರೆಗೆ ಭಾರತಕ್ಕೆ ಭೇಟಿ ನೀಡಲಿದ್ದು, ಈ ವೇಳೆ ಫ್ರೆಂಚ್ ನಿರ್ಮಿತ 114 ರಫೇಲ್ ಯುದ್ಧವಿಮಾನಗಳನ್ನು ಖರೀದಿಸಲು 3.25 ಲಕ್ಷ ಕೋಟಿ ರು.ಗಳ ಒಪ್ಪಂದಕ್ಕೆ ಭಾರತ ಸಹಿ ಹಾಕುವ ಸಾಧ್ಯತೆ ಇದೆ. ಇದು ಭಾರತದ ಇತಿಹಾಸದಲ್ಲೇ ಅತಿದೊಡ್ಡ ಶಸ್ತ್ರಾಸ್ತ್ರ ಒಪ್ಪಂದವಾಗಲಿದೆ.

Add Asianetnews Kannada as a Preferred SourcegooglePreferred

ಭಾರತ ಈಗಾಗಲೇ 36 ರಫೇಲ್ ಜೆಟ್‌ಗಳನ್ನು ಹೊಂದಿದೆ

ಭಾರತ ಈಗಾಗಲೇ 36 ರಫೇಲ್ ಜೆಟ್‌ಗಳನ್ನು ಹೊಂದಿದೆ. 63,000 ಕೋಟಿ ರು. ಒಪ್ಪಂದದಲ್ಲಿ, ನೌಕಾಪಡೆಗಾಗಿ 26 ರಫೇಲ್‌ಗಳನ್ನು ಆರ್ಡರ್‌ ಮಾಡಿದೆ. ಇದರ ಹೊರತಾಗ್ಯೂ ವಾಯುಪಡೆಯ ಮಲ್ಟಿ-ರೋಲ್ ಫೈಟರ್ ಏರ್‌ಕ್ರಾಫ್ಟ್ ಯೋಜನೆಯ ಭಾಗವಾಗಿ ಈ ಒಪ್ಪಂದ ನಡೆಯಲಿದ್ದು, ಭಾರತೀಯ ವಾಯುಪಡೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.

ಅತಿ ದೊಡ್ಡ ರಫೇಲ್ ಕಾರ್ಯನಿರ್ವಾಹಕ ದೇಶ

ಜತೆಗೆ, ಭಾರತವು ಫ್ರಾನ್ಸ್ ಹೊರತುಪಡಿಸಿ ಜಗತ್ತಿನ ಅತಿ ದೊಡ್ಡ ರಫೇಲ್ ಕಾರ್ಯನಿರ್ವಾಹಕ ದೇಶವಾಗಿ ನಿಲ್ಲಲಿದೆ. ಇದರಲ್ಲಿ ಸುಮಾರು 100 ರಫೇಲ್ ಜೆಟ್‌ಗಳನ್ನು ಭಾರತದಲ್ಲೇ ತಯಾರಿಸುವ ವ್ಯವಸ್ಥೆ ಇರಲಿದ್ದು, ಉನ್ನತ ದರ್ಜೆಯ ಫೈಟರ್ ಜೆಟ್ ತಂತ್ರಜ್ಞಾನ ವರ್ಗಾವಣೆ ಮತ್ತು ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಬಲಪಡಿಸುವ ವಿಶೇಷ ಸಹಭಾಗಿತ್ವ ಸೇರಿರಲಿವೆ.