ನವದೆಹಲಿ, (ಏ.18): ದೇಶಾದ್ಯಂತ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತಲ್ಲಣ ಸೃಷ್ಟಿಸಿದೆ. ಇದರ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹರಸಾಹಸವನ್ನೇ ನಡೆಸಿದೆ.

ಇದರ ನಡುವೆ ಪರಿಸ್ಥಿತಿ ಕುರಿತು ಪರಿಶೀಲನೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಕಾಂಗ್ರೆಸ್ ನಾಯಕರ ಸಮಿತಿ ರಚನೆ ಮಾಡಿದ್ದಾರೆ.

ಬಿಎಸ್‌ವೈ ಸುದ್ದಿಗೋಷ್ಠಿ: ರಾಜ್ಯದಲ್ಲಿ ಲಾಕ್‌ಡೌನ್ ಭಾಗಶಃ ಸಡಿಲ...!

 ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಕಾಂಗ್ರೆಸ್ ನ ಹಲವು ನಾಯಕರು ಈಗಾಗಲೇ ಕೆಲ ಸಲಹೆಗಳನ್ನೂ ನೀಡಿದ್ದಾರೆ. ಇದರ ಮಧ್ಯೆ  ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪರಿಸ್ಥಿತಿ ಅವಲೋಕನ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ನೇತೃತ್ವದಲ್ಲಿ 11 ಮಂದಿ ಕಾಂಗ್ರೆಸ್ ನಾಯಕರ ಸಮಿತಿ ರಚಿಸಿದ್ದಾರೆ. 

ಈ ಸಮಿತಿಯಲ್ಲಿ ರಾಹುಲ್ ಗಾಂಧಿ, ಚಿದಂಬರಂ, ಕೆ.ಸಿ.ವೇಣುಗೋಪಾಲ್ ಸೇರಿದಂತೆ 11 ಮಂದಿ ಇದ್ದಾರೆ. ಈ ಸಮಿತಿ ಪ್ರತಿದಿನ ಕೊರೋನಾ ವೈರಸ್ ಪರಿಸ್ಥಿತಿಯ ಕುರಿತು ಚರ್ಚೆ ನಡೆಸಲಿದೆ.

ಸಮಿತಿ ಇಂತಿದೆ.
1. ಡಾ. ಮನಮೋಹನ್ ಸಿಂಗ್ (ಚೇರ್ಮನ್)
2. ರಾಹುಲ್ ಗಾಂಧಿ
3.ರಣದೀಪ್ ಸಿಂಗ್ ಸುರ್ಜೇವಲಾ
4. ಕೆ.ಸಿ.ವೇಣುಗೋಪಾಲ್
5. ಪಿ.ಚಿದಂಬರಂ
6. ಮನೀಶ್ ತಿವಾರಿ
7.ಜಯರಾಮ್ ರಮೇಶ್
8.ಪ್ರವೀಣ್‌ ಚಕ್ರವರ್ತಿ 
9. ಗೌರವ್ ವಲ್ಲಭ
10.  ಸುಪ್ರೀಯಾ
11. ರೋಹನ್ ಗುಪ್ತಾ