ನವದೆಹಲಿ(ಜು.21): ಕೊರೋನಾ ವೈರಸ್ ನಿಯಂತ್ರಣ ಒಂದೆಡೆ ವೈದ್ಯರು, ಆಸ್ಪತ್ರೆ ಸಿಬ್ಬಂದಿಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಪೊಲೀಸ್, ಭದ್ರತಾ ಪಡೆ ಅವಿರತ ಪ್ರಯತ್ನ ಮಾಡುತ್ತಿದೆ. ಹಲವು ಪ್ರದೇಶಗಳಲ್ಲಿ ಪೊಲೀಸರ ಜೊತೆ ಸೇನೆ ಕೂಡ ಕೊರೋನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದೆ. ಹೀಗೆ ಕೊರೋನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಸೈನಿಕರು ಮೃತರಾದರೆ ಅವರನ್ನು ಹುತಾತ್ಮರೆಂದು ಪರಿಗಣಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಲಡಾಖ್‌ನ ಲೆಹ್‌ನಲ್ಲಿ ಯೋಧರ ಜೊತೆ ರಕ್ಷಣಾ ಸಚಿವ..! ಇಲ್ಲಿವೆ ಫೋಟೋಸ್

ಕೊರೋನಾ ವಾರಿಯರ್ಸ್ ಆಗಿ  ಸೇವೆ ಸಲ್ಲಿಸುತ್ತಿರುವ ಸೈನಿಕರು ಮೃತರಾದರೆ ಅವರನ್ನು ಹುತಾತ್ಮರೆಂದು ಪರಿಗಣಿಸಿ ಅವರ ಕುಟುಂಬಕ್ಕೆ ಸಿಗಬೇಕಾದ ಸೌಲಭ್ಯ ನೀಡಬೇಕು. ಜೊತೆ 15 ಲಕ್ಷ ರೂಪಾಯಿ ಆರ್ಥಿಕ ನೆರವನ್ನು ನೀಡಬೇಕು ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದೆ.

2017ರಲ್ಲಿ ಕೇಂದ್ರ ಸರ್ಕಾರ ಭಾರತ್ ಕೆ ವೀರ್ ಕಾರ್ಪಸ್ ಯೋಜನೆಯಡಿ ಸೇವೆಯಲ್ಲಿ ನಿಧನರಾದ ಸೈನಿಕರಿಗೆ ಆರ್ಥಿಕ ನೆರವು ನೀಡವು ಯೋಜನೆ ಜಾರಿಗೆ ತಂದಿದೆ. ಇದೇ ಯೋಜನೆಯಡಿ ಕೊರೋನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಸೈನಿಕರು ಮೃತರಾದರೆ ಅವರಿಗೂ ನೀಡಬೇಕು ಎಂದು ಪ್ರಸ್ತಾವನೆಯಲ್ಲಿ ಹೇಳಿದೆ. ಕೇಂದ್ರ ರಕ್ಷಣಾ ಸಚಿವಾಲಯ ಈ ಪ್ರಸ್ತಾವನೆಗೆ ಅಂತಿಮ ಮುದ್ರೆ ಹಾಕಬೇಕಿದೆ.