ನವದೆಹಲಿ(ಅ.20):  ಕತುವಾ ರೇಪ್ ಪ್ರಕರಣದ ಮೂಲಕ ಭಾರಿ ಸುದ್ದಿಯಾಗಿದ್ದ ವಕೀಲೆ ದೀಪಿಕಾ ಸಿಂಗ್ ರಜಾವತ್ ಇದೀಗ ಹಿಂಧೂ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದಾರೆ.  ಇಷ್ಟೇ ಅಲ್ಲ ದೀಪಿಕಾ ಸಿಂಗ್ ರಾಜಾವತ್‌ರನ್ನು ಬಂಧಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ನಡೆಯುತ್ತಿದೆ.

ಕತುವಾ ರೇಪ್ ಕೇಸ್: ಮೂವರಿಗೆ ಜೀವಾವಧಿ, ಇನ್ನು ಮೂವರಿಗೆ 5 ವರ್ಷ ಜೈಲು ಶಿಕ್ಷೆ!.

ದೀಪಿಕಾ ಸಿಂಗ್ ರಾಜಾವತ್ ತಮ್ಮ ಟ್ವಿಟರ್ ಖಾತೆಯಲ್ಲಿ ರೇಪ್ ಪ್ರಕರಣದ ಗಂಭೀರತೆ ಕುರಿತ ವ್ಯಂಗ್ಯ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ವ್ಯಂಗ್ಯ ಚಿತ್ರದಲ್ಲಿ ಇತರ ದಿನ ಎಂಬ ತಲೆಬರಹದಡಿ ಪುರುಷನೋರ್ವ ಮಹಿಳೆಯ ಕಾಲುಗಳನ್ನು ಹಿಡಿದು ಎಳೆಯುವ ಬಲತ್ಕಾರದ ಚಿತ್ರವಿದೆ. ಇತ್ತ ನವರಾತ್ರಿ ದಿನ ಅನ್ನೋ ಹೆಡ್‌ಲೈನ್ ಅಡಿಯಲ್ಲಿ ಮಹಿಳೆಯ ಕಾಲನ್ನು ಮುಟ್ಟಿ ನಮಸ್ಕರಿಸುವ ವ್ಯಂಗ್ಯ ಚಿತ್ರವಿದೆ. ಈ ಪೋಸ್ಟ್ ಇದೀಗ ಭಾರಿ ವಿವಾದ ಸೃಷ್ಟಿಸಿದೆ.

 

ಅತ್ಯಾಚಾರ, ಕೊಲೆ ಅಥವಾ ಯಾವುದೇ ಘಟನೆಯನ್ನು ಹಿಂದೂ ಆಚರಣೆ ಜೊತೆಗೆ ಹೋಲಿಕೆ ಸಲ್ಲ. ಇದರಿಂದ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ಭಕ್ತಿ ಗೌರವದಿಂದ ಆಚರಿಸುವ ಹಬ್ಬದ ಜೊತೆ ಅತ್ಯಾಚಾರ ಘಟನೆಯನ್ನು ಹೋಲಿಕೆ ಮಾಡಿದ ವಕೀಲೆ ದೀಪಿಕಾ ಸಿಂಗ್ ರಾಜಾವತ್ ಅವರನ್ನು ಬಂಧಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ನಡೆಯುತ್ತಿದೆ.

#Arrest_Deepika_Rajawat ಎಂಬ ಹ್ಯಾಶ್ ಟ್ಯಾಗ್ ಮೂಲಕ ವಕೀಲೆ ದೀಪಿಕಾ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ. ಕತುವಾ ರೇಪ್ ಪ್ರಕರಣದಲ್ಲಿ ಸಂತ್ರಸ್ತೆಯ ಪರ ವಕಾಲತ್ತು ವಹಿಸಿದ್ದ ದೀಪಿಕಾ, ಸರಿಯಾಗಿ ವಿಚಾರಣೆಗೆ ಹಾಜರಾಗುತ್ತಿಲ್ಲ ಎಂಬ ಆರೋಪದ ಮೇರೆ ಸಂತ್ರಸ್ತೆಯ ತಂದೆ ವಕೀಲೆ ದೀಪಿಕಾ ಸಿಂಗ್‌ ರಾಜಾವತ್ ಅವರನ್ನು ಬದಲಿಸಿದ್ದರು.

ಕತುವಾ ರೇಪ್ ಕೇಸ್ ಪ್ರಕರಣದಲ್ಲಿ ಕಾಲಹರಣ ಮಾಡಿದ ದೀಪಿಕಾ ಇದೀಗ ಹಿಂಧೂ ಧಾರ್ಮಿಕ ಭಾವನೆಗೆ ಧಕ್ಕೆ ತರೋ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.