Asianet Suvarna News Asianet Suvarna News

ಗಣರಾಜ್ಯೋತ್ಸವ ಪರೇಡ್‌ನಲ್ಲೂ ಸಾಮಾಜಿಕ ಅಂತರ

ಈ ಬಾರಿ ಕೊರೋನಾ ನಿಯಮ ಪಾಲನೆ | ರಾಜಪಥದ ಬೀದಿಯಲ್ಲಿ ರಾಷ್ಟ್ರೀಯ ಭದ್ರತಾ ಪಡೆಯ ಯೋಧರ ತಾಲೀಮು ಪ್ರದರ್ಶನದ ವೇಳೆ ಅಂತರ

Social distancing No shoulder to shoulder march past by NSG commandos this year on Republic Day dpl
Author
Bangalore, First Published Jan 15, 2021, 12:27 PM IST

ನವದೆಹಲಿ(ಜ.15): ಈ ಬಾರಿಯ ಜನವರಿ 26ರ ಗಣರಾಜ್ಯೋತ್ಸವದ ವೇಳೆ ರಾಜಪಥದ ಬೀದಿಯಲ್ಲಿ ರಾಷ್ಟ್ರೀಯ ಭದ್ರತಾ ಪಡೆಯ ಯೋಧರು ತಮ್ಮ ತಾಲೀಮು ಪ್ರದರ್ಶನದ ವೇಳೆ ಪರಸ್ಪರ ಒಂದುವರೆ ಮೀಟರ್‌ಗಿಂತ ಹೆಚ್ಚು ಅಂತರ ಕಾಯ್ದುಕೊಳ್ಳಲಿದ್ದಾರೆ.

ಪ್ರತೀ ವರ್ಷದ ಗಣರಾಜ್ಯೋತ್ಸವದ ವೇಳೆ ಎನ್‌ಎಸ್‌ಜಿ ಪಡೆಯ ಯೋಧರು ಒಂದು ಭುಜದ ಅಂತರದಲ್ಲಿ ತಮ್ಮ ತಾಲೀಮು ಪ್ರದರ್ಶಿಸುತ್ತಿದ್ದರು. ಆದರೆ ಈ ಬಾರಿ ಕೊರೋನಾ ನಿಯಮಾವಳಿ ಪಾಲನೆ ನಿಟ್ಟಿನಲ್ಲಿ ಒಂದು ಭುಜದಷ್ಟುಅಂತರವನ್ನು ಮೂರೂವರೆ ಮೀಟರ್‌ಗೆ ಹೆಚ್ಚಿಸಲಾಗಿದೆ. ಪ್ರತೀ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.40ರಷ್ಟುಯೋಧರು ಮಾತ್ರವೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಗಣರಾಜ್ಯೋತ್ಸವಕ್ಕೆ ಅತಿಥಿ ಯಾರು? 55 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಹತ್ವದ ನಿರ್ಧಾರ!

ಕೊರೋನಾ ಕಾರಣದಿಂದಾಗಿ ವಿದೇಶಿ ಮುಖ್ಯ ಅತಿಥಿಗಳ ಅನುಪಸ್ಥಿತಿಯಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಸಂಭ್ರಮಾಚರಣೆ ನಡೆಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪ್ರತೀ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಯಾವುದೇ ದೇಶದ ಮುಖ್ಯಸ್ಥರೊಬ್ಬರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಲಾಗುತ್ತದೆ.

ಅದರಂತೆ ಈ ಸಲ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ತಮ್ಮ ದೇಶದಲ್ಲಿ ಹೈಸ್ಪೀಡ್‌ ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಭಾರತ ಪ್ರವಾಸ ಕೈಗೊಳ್ಳಲಾಗುತ್ತಿಲ್ಲ ಎಂದು ಬೋರಿಸ್‌ ವಿಷಾದಿಸಿದ್ದರು.

Follow Us:
Download App:
  • android
  • ios