ಲಾಹುಲ್(ಮೇ.04): ಕಳೆದ ನಾಲ್ಕು ದಿನಗಳಲ್ಲಿ ಸುಮಾರು ನಲ್ವತ್ತಕ್ಕೂ ಹೆಚ್ಚು ಕುರಿಗಳನ್ನು ಭಕ್ಷಿಸಿದ್ದ ಹಿಮ ಚಿರತೆಯನ್ನು ಕೊನೆಗೂ ಅರಣ್ಯ  ಇಲಾಖೆ ಅಧಿಕಾರಿಗಳು ಸ್ಥಳೀಯರ ನೆರವಿನಿಂದ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು ಹಿಮಾಚಲ ಪ್ರದೇಶದ ಲಾಹುಲ್ ಹಾಗೂ ಸ್ಪಿತಿ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಹಿಮ ಚಿರತೆಯೊಂದು ಜನರ ನಿದ್ದೆಗೆಡಿಸಿತ್ತು. ನಾಡಿಗೆ ಆಗಮಿಸಿದ್ದ ಈ ಚಿರತೆ ಅಲ್ಲಿನ ಸ್ಥಳೀಯರು ಸಾಕಿದ್ದ ನಲ್ವತ್ತಕ್ಕೂ ಅಧಿಕ ಕುರಿಗಳನ್ನು ಭಕ್ಷಿಸಿತ್ತು. ಸ್ಥಳೀಯರು ನೀಡಿದ್ದ ದೂರಿನ ಮೇರೆಗೆ ಬಲೆ ಬೀಸಿದ್ದ ಅರಣ್ಯ ಅಧಿಕಾರಿಗಳು ಕಠಿಣ ಪರಿಶ್ರಮದ ಬಳಿಕ ಭಾನುವಾರ ಈ ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಗಂಗೆ ಶುದ್ಧವಾದ ಬೆನ್ನಲ್ಲೇ ನದಿಯಲ್ಲಿ ಡಾಲ್ಫಿನ್‌ ಪ್ರತ್ಯಕ್ಷ!, ವಿಡಿಯೋ ವೈರಲ್

ಈ ಹಿಮ ಚಿರತೆ ಸ್ಪಿತಿ ಜಿಲ್ಲೆಯ ಗಿಯೂ ಹಳ್ಳಿಯಲ್ಲಿ ಸೆರೆ ಸಿಕ್ಕಿರುವುದಾಗಿ ಕಾಜಾ ವಿಭಾಗ ಅರಣ್ಯ ಅಧಿಕಾರಿ ಹರ್ದೇವ್ ನೇಗಿ ತಿಳಿಸಿದ್ದಾರೆ.

ಸದ್ಯ ಈ ಹಿಮ ಚಿರತೆಯನ್ನು ಶಿಮ್ಲಾದ ಕುಫ್ರಿಯಲ್ಲಿರುವ ಹಿಮಾಲಯನ್ ನೇಚರ್ ಪಾರ್ಕ್‌ಗೆ ರವಾನಿಸಲಾಗಿದೆ.