ಮೆಲ್ಲನೆ ಬಂದ ಹಾವೊಂದು ಮನೆ ಎದುರಿಗಿದ್ದ ಚಪ್ಪಲಿಯನ್ನು ಕದ್ದೊಯ್ದ ಘಟನೆ ನಡೆದಿದೆ. ಹಾಡಹಗಲೇ ನಡೆದಿರುವ ಈ ಘಟನೆ ದೃಶ್ಯಕ್ಕೆ ಭರ್ಜರಿ ಕಮೆಂಟ್ ವ್ಯಕ್ತವಾಗಿದೆ.

ಹಾಡಹಗಲೇ ಕಳ್ಳತನ, ಮನೆ ನುಗ್ಗಿ ದರೋಡೆ ಸೇರಿದಂತೆ ಹಲವು ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದರ ನಡುವೆ ವಿಚಿತ್ರ ಕಳ್ಳತನ ಪ್ರಕರಣ ಘಟನೆಯೊಂದು ನಡೆದಿದೆ. ಕಾಡಿನ ಪೊದೆಯಿಂದ ಮನೆ ಬಳಿ ಬಂದ ಹಾವೊಂದು ಮುಂಭಾಗದಲ್ಲಿಟ್ಟಿದ್ದ ಚಪ್ಪಲಿ ಒಂದನ್ನು ಕಚ್ಚಿಕೊಂಡು ವೇಗವಾಗಿ ಸಾಗಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾಗಳಲ್ಲಿ ಸಂಚಲನ ಸೃಷ್ಟಿಸಿದೆ. ತೆವಳಿ ಸಾಗುವ ಹಾವಿಗೆ ಸಾಕಾಗಿದೆ, ಇನ್ನು ಮುಂದೆ ಚಪ್ಲಲಿ ಹಾಕಿಕೊಂಡು ತಿರುಗಾಡಲಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಪೊದೆ, ಗಿಡಗಂಟಿಗಳಿಂದ ತುಂಬಿಕೊಂಡಿರುವ ಮನೆಯ ಬಳಿ ಹಾವು ಪ್ರತ್ಯಕ್ಷವಾಗಿದೆ. ಹಾವು ನೋಡಿ ಜನ ಭಯಗೊಂಡಿದ್ದಾರೆ. ಓಡಿಸುವ ಪ್ರಯತ್ನ ಮಾಡಿದ್ದಾರೆ. ಇತ್ತ ಹಾವು ಕೂಡ ಗಾಬರಿಯಾಗಿದೆ. ಒಂದೇ ಸಮನೆ ಓಡಿ ಹೋಗಲು ಯತ್ನಿಸಿದೆ. ಆದರೆ ಅದಕ್ಕೂ ಮುನ್ನ ಹಾವು ಮನೆಯ ಮುಂಭಾಗದಲ್ಲಿಟ್ಟಿದ್ದ ಚಪ್ಪಲಿ ಕಚ್ಚಿಕೊಂಡು ಸಾಗಿದೆ. ಚಪ್ಪಲಿಯನ್ನು ಎತ್ತಿ ಹಿಡಿದು ಸಾಗಿದ ದೃಶ್ಯ ನೆಟ್ಟಿಗರ ಗಮನಸೆಳೆದಿದೆ.

ಶ್ರೀಶೈಲಂನಲ್ಲಿ ಶಿವಲಿಂಗಕ್ಕೆ ನಾಗರ ಹಾವೇ ಕಾವಲು,ಮೊಬೈಲ್‌ನಲ್ಲಿ ಸೆರೆಯಾದ ಸಾಕ್ಷಾತ್ ಶಿವನ ದರ್ಶನ!

ಟ್ವಿಟರ್‌ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಘಟನೆ ಎಲ್ಲಿ ನಡೆದಿದೆ ಅನ್ನೋದು ಸ್ಪಷ್ಟವಾಗಿಲ್ಲ. ಆದರೆ ಚಪ್ಪಲಿ ಕದ್ದ ಹಾವು ಎಂಬ ಬರಹದೊಂದಿಗೆ ವಿಡಿಯೋ ಹರಿದಾಡುತ್ತಿದೆ. ಹಾವು ಚಪ್ಪಲಿ ಎತ್ತಿಕೊಂಡು ಸಾಗುತ್ತಿರುವ ದೃಶ್ಯವೇ ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಒಂದು ಚಪ್ಪಲಿ ಕಚ್ಚಿಸಾಗಿದರೆ, ಮತ್ತೊಂದು ಚಪ್ಪಲಿ ಅನಾಥವಾಗಿ ಮನೆಯ ಮುಂಭಾಗದಲ್ಲಿ ಬಿದ್ದಿದೆ.

Scroll to load tweet…

ಹಾವು ಸಾಗುತ್ತಿದ್ದಂತೆ ಭಯಭೀತಗೊಂಡಿದ್ದ ಮನೆಯ ಜನ ಕೂಡ ನಕ್ಕಿದ್ದಾರೆ. ಚಪ್ಪಲಿ ಕದ್ದೊಯ್ಯುತ್ತಿದೆ ಎಂದು ಕೂಗಿದ್ದಾರೆ. ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ. ಇಷ್ಟು ದಿನ ತೆವಳಿಕೊಂಡು ಸಾಗುತ್ತಿದ್ದ ಹಾವು ತನ್ನ ಶೈಲಿ ಬದಲಿಸುತ್ತಿದೆ. ಇನ್ನು ಹಾವು ಚಪ್ಪಲಿ ಹಾಕಿಕೊಂಡು ಸಾಗಲಿದೆ ಎಂದಿದ್ದಾರೆ. ಚಪ್ಪಲಿ ಕದ್ದೊಯ್ದಿಲ್ಲ, ಅದರ ಅಲ್ಲಿಗೆ ಚಪ್ಪಲಿ ಸಿಲುಕಿಕೊಂಡಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾವು ಕೂಡ ಆಧುನಿಕ ಬದುಕಿಗೆ ಒಗ್ಗಿಕೊಂಡಿದೆ. ಹೀಗಾಗಿ ಚಪ್ಪಲಿ ಅನಿವಾರ್ಯ ಎಂದಿದ್ದಾರೆ. 

Viral Video ಸಿರಪ್ ಬಾಟಲಿ ನುಂಗಿ ಒದ್ದಾಡುತ್ತಿದ್ದ ನಾಗರ ಹಾವು ರಕ್ಷಿಸಿದ ಉರಗ ಪ್ರೇಮಿ!

ಭಯಗೊಂಡ ಹಾವು ದಾಳಿ ನಡೆಸಿದ್ದು ಚಪ್ಪಲಿ ಮೇಲೆ. ತನ್ನ ಆಹಾರ ಎಂದು ಚಪ್ಪಲಿಯನ್ನು ಎತ್ತಿಕೊಂಡು ಸಾಗಿದೆ. ಆದರೆ ಉರಗ ತಜ್ಞರ ಪ್ರಕಾರ, ಈ ಹಾವು ಈ ಚಪ್ಪಲಿಯನ್ನು ತಿನ್ನುವ ಪ್ರಯತ್ನ ಮಾಡಲಿದೆ. ಇದರಿಂದ ಹಾವಿಗೆ ಅಪಾಯ ಹೆಚ್ಚು. ಅನಾರೋಗ್ಯದಿಂದ ಹಾವು ಮೃತಪಡುವ ಸಾಧ್ಯತೆಗಳಿವೆ ಎಂದಿದ್ದಾರೆ. ಹಾವನ್ನು ಭಯಭೀತಗೊಳಿಸಬೇಡಿ ಎಂದು ಮನವಿ ಮಾಡಿದ್ದಾರೆ.