ನಾಗರ ಹಾವೊಂದು ಆಹಾರ ಎಂದು ಬಿದ್ದಿದ್ದ ಸಿರಪ್ ಬಾಟಲಿಯನ್ನೇ ನುಂಗಿತ್ತು. ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದ ಹಾವನ್ನು ಉಗರ ಪ್ರೇಮಿ ರಕ್ಷಿಸಿದ ವಿಡಿಯೋ ವೈರಲ್ ಆಗಿದೆ.
ಭುವನೇಶ್ವರ(ಜು.04) ಮಳೆಗಾಲದ ಕಾರಣ ಎಲ್ಲೆಡೆ ಹಾವುಗಳು ಪ್ರತ್ಯಕ್ಷವಾಗು ಸಾಧ್ಯತೆಗಳು ಹೆಚ್ಚು. ನೀರು, ಪ್ರವಾಹದಲ್ಲಿ ಹಾವುಗಳು ಮನೆ , ಊರು ಸೇರುವುದು ಹೊಸದಲ್ಲ. ಹೀಗೆ ಆಹಾರ ಹುಡುಕುತ್ತಾ ಮನೆಯ ಹತ್ತಿರ ಬಂದ ನಾಗರ ಹಾವೊಂದು ಔಷಧಿಯ ಖಾಲಿ ಸಿರಪ್ ಬಾಟಿಲಿಯನ್ನು ನುಂಗಿದೆ. ಪರಿಣಾಮ ನಾಗರ ಹಾವು ಅಸ್ವಸ್ಥಗೊಂಡಿದೆ. ನಾಗರವನ್ನು ಗಮನಿಸಿದ ಉರಗ ಪ್ರೇಮಿ, ನಿಧಾನವಾಗಿ ಹಾವಿನ ಬಾಯಿಯಿಂದ ಸಿರಪ್ ಬಾಟಲಿ ತೆಗೆದಿದ್ದಾರೆ. ಕೊಂಚ ಸುಧಾರಿಸಿಕೊಂಡ ನಾಗರ ಹಾವು ಸ್ಥಳದಿಂದ ತೆರಳಿದ ವಿಡಿಯೋ ವೈರಲ್ ಆಗಿದೆ.
ನಾಗರ ಹಾವನ್ನು ರಕ್ಷಿಸಿದ ವಿಡಿಯೋವನ್ನು ಅರಣ್ಯಾಧಿಕಾರಿ ಸುಶಾಂತ್ ನಂದಾ ಹಂಚಿಕೊಂಡಿದ್ದಾರೆ. ಈ ಘಟನೆ ನಡೆದಿರುವುದು ಭುವನೇಶ್ವರದಲ್ಲಿ. ಘಟನೆ ಕುರಿತು ಸುಶಾಂತ್ ನಂದಾ ಮಾಹಿತಿ ಹೊಂಚಿಕೊಂಡಿದ್ದಾರೆ.ನಾಗರ ಹಾವು ಖಾಲಿ ಸಿರಪ್ ಬಾಟಲಿಯನ್ನು ಆಹಾರ ಎಂದು ನುಂಗಿದೆ. ಆದರೆ ನಾಗರ ಹಾವಿನ ಗಂಟಲಿನಲ್ಲಿ ಬಾಟಲಿ ಸಿಲುಕಿಕೊಂಡಿದೆ. ಹಲವು ಪ್ರಯತ್ನದ ಬಳಿಕವೂ ನಾಗರ ಹಾವಿಗೆ ಬಾಟಲಿ ನುಂಗಲು ಸಾಧ್ಯವಾಗದೆ ಅಸ್ವಸ್ಥಗೊಂಡಿದೆ.
ಮಗುವಿಗೆ ಔಷಧಿ ತರಲು ಹೋದ ತಾಯಿಯ ನುಂಗಿದ ಹೆಬ್ಬಾವು, ಒಂದೇ ತಿಂಗಳಲ್ಲಿ 2ನೇ ಘಟನೆ!
ಅಸ್ವಸ್ಥಗೊಂಡ ನಾಗರ ಹಾವನ್ನು ಗಮನಿಸಿದ ಉರಗ ಪ್ರೇಮಿ ತಕ್ಷಣ ನೆರವಿಗೆ ಧಾವಿಸಿದ್ದಾರೆ. ಮೊದಲಿಗೆ ನಿಧಾನವಾಗಿ ಹಾವಿನ ಗಂಟಲಿನಿಂದ ಸಿರಪ್ ಬಾಟಲಿಯನ್ನು ಹೊರಗೆ ತಗೆಯಲು ಯತ್ನಿಸಿದ್ದಾರೆ. ಆದರೆ ಹಾವು ಒಮ್ಮೆ ದಾಳಿ ಮಾಡುವ ಸಾಧ್ಯತೆಯಿಂದ ಒಂದೆಡೆರು ಬಾರಿ ಪ್ರಯತ್ನ ಮಾಡಿ ನಿಲ್ಲಿಸಿದ್ದಾರೆ. ಬಳಿಕ ಬಾಟಲಿ ಹೊರತೆಗೆಯುವಾಗ ನಾಗರ ಹಾವಿಗೆ ಗಾಯವಾಗದಂತೆ ನಿಧನವಾಗಿ ಹೊರತೆಗೆದಿದ್ದಾರೆ.
ಬಾಟಲಿ ಹೊರತೆಗೆದ ಬೆನ್ನಲ್ಲೇ ನಾಗರ ಹಾವಿಗೆ ಹೋದ ಜೀವ ಮರಳಿ ಬಂದಂತಾಗಿದೆ. ಕೆಲ ಹೊತ್ತಿನಲ್ಲಿ ಸುಧಾರಿಸಿಕೊಂಡ ನಾಗರ ಹಾವು ನಿಧಾನವಾಗಿ ಚಲಿಸಲು ಆರಂಭಿಸಿದೆ. ಈ ವಿಡಿಯೋ ನೋಡಿದ ಹಲವು ಪರಿಸರ ಪ್ರೇಮಿಗಳು ಹಲವು ಸಲಹೆ ನೀಡಿದ್ದಾರೆ. ಕಸ, ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆಯಬೇಡಿ. ಕಾಡು, ನೀರು, ತೊರೆಗಳಿಗೆ ತ್ಯಾಜ್ಯಗಳನ್ನು ಎಸೆಯುವುದರಿಂದ ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ, ಪ್ರಕೃತಿಯಗೆ ಅತೀ ದೊಡ್ಡ ಅಪಾಯ ಎದುರಾಗಲಿದೆ ಎಂದಿದ್ದಾರೆ.
ಧೈರ್ಯವಾಗಿ ಹಾವಿನ ಬಾಯಿಯಿಂದ ಸಿರಪ್ ಬಾಟಲಿ ತೆಗದು ಜೀವ ರಕ್ಷಿಸಿದ ಉರಗ ಪ್ರೇಮಿಗೆ ಎಲ್ಲರು ಭೇಷ್ ಹೇಳಿದ್ದಾರೆ.
ಭೂಮಿ ಆಗೆಯುವಾಗ ಪವಾಡ, ತ್ರಿಶೂಲ, ಉಂಗುರ ಸೇರಿ ಚಿನ್ನದ ನಿಧಿಗೆ ಕಾವಲಿತ್ತು ನಾಗರ ಹಾವು!
