Asianet Suvarna News Asianet Suvarna News

ಹಳೇ ಫೋಟೋ ಶೇರ್‌ ಮಾಡಿ ಹೊಸ ವರ್ಷದ ಶುಭಾಶಯ ಕೋರಿದ ಸ್ಮೃತಿ ಇರಾನಿ

  • ಇನ್ಸ್ಟಾಗ್ರಾಮ್‌ನಲ್ಲಿ ಹಳೆ ಫೋಟೋ ಶೇರ್‌ ಮಾಡಿದ ಸ್ಮೃತಿ ಇರಾನಿ
  • ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ 
  • ಸ್ಪೂರ್ತಿದಾಯಕ ಸಂದೇಶ ರವಾನಿಸಿದ ಸ್ಮೃತಿ
Smriti Irani shares new pic of herself to wish fans a Happy New Year akb
Author
Bangalore, First Published Jan 1, 2022, 7:33 PM IST
  • Facebook
  • Twitter
  • Whatsapp

ಮುಂಬೈ(ಡಿ. 1): ಕೇಂದ್ರ ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ತಮ್ಮ ಹಳೆಯ ಫೋಟೋವೊಂದನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡುವ ಮೂಲಕ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಇದಕ್ಕೆ ಅವರ ಬೆಸ್ಟ್‌ ಫ್ರೆಂಡ್ ಏಕ್ತಾ ಕಪೂರ್‌ ಕಾಮೆಂಟ್‌ ಮಾಡಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಸಕ್ರಿಯವಾಗಿರುವ ರಾಜಕಾರಣಿಗಳಲ್ಲಿ ಒಬ್ಬರು. ಅವರ ಇನ್ಸ್ಟಾಗ್ರಾಮ್‌ ಪ್ರೊಫೈಲ್‌ ಯಾವಾಗಲೂ ಹಾಸ್ಯಮಯ ಮತ್ತು ಚಿಂತನೀಯ ಪೋಸ್ಟ್‌ಗಳಿಂದ ಕೂಡಿರುತ್ತದೆ. 

ಈ ವೈರಲ್‌ ಫೋಸ್ಟ್‌ನಲ್ಲಿ ಸ್ಮೃತಿ ಇರಾನಿ  ನಗುತ್ತಾ ಕ್ಯಾಮರಾದತ್ತ ನೋಡಿ ಫೋಟೋಗೆ ಫೋಸ್‌ ನೀಡುತ್ತಿದ್ದಾರೆ. ಫೋಟೋ ಹಿಂಭಾಗದಲ್ಲಿ ಗಾರ್ಡನ್‌ ಚಿತ್ರಣವಿದೆ. ಹಲ್ಲು ಸ್ವಲ್ಪ ಚಿಗುರಿದೆ. ಅಹಂಕಾರಕ್ಕೆ ಸ್ವಲ್ಪ ಪೆಟ್ಟು ಬಿದ್ದಿದೆ, ಏಕೆಂದರೆ ಕಳೆದ ವರ್ಷ ವಿಧಿಯೊಂದಿಗೆ ಸಾಕಷ್ಟು ಹೋರಾಟ ನಡೆದಿವು. ಕೆಲವು ಪ್ರೀತಿಪಾತ್ರರು ಹೊರಟು ಹೋದರು.  ಕೆಲವು ಮುಖವಾಡಗಳು ಬಯಲಾದವು. ಕೆಲವು ನಂಬಿಕೆಗಳು ಒಡೆದು ಹೋದವು, ಕೆಲವು ಸಾಧನೆಗಳು ಮಾಡದೇ ಉಳಿದಿವೆ.  2022 ನಿಮ್ಮತ್ತ ನೋಡುತ್ತಿದೆ ಆಯ್ಕೆಯು ನಿಮ್ಮದಾಗಿದೆ. ಇಲ್ಲಿ ಎಲ್ಲರಿಗೂ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ಎದುರು ನೋಡುತ್ತಿದ್ದೇನೆ. ಹೊಸ ವರ್ಷದ ಶುಭಾಶಯಗಳು, ಎಂದು ಅವರು ತಮ್ಮ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

 

ಇವರ ಈ ಸಂದೇಶಕ್ಕೆ ಇವರ ಅನೇಕ ಅಭಿಮಾನಿಗಳು ಬೆಸ್ಟ್‌ ಫ್ರೆಂಡ್‌ ಆಗಿರುವ ಏಕ್ತಾ ಕಪೂರ್‌ (Ekta Kapoor), ನಿರ್ದೇಶಕ ಕರಣ್‌ ಜೋಹರ್‌ (Karan Johar) ಸೇರಿದಂತೆ ಹಲವು ಗಣ್ಯರು ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗೆ ಸ್ಮೃತಿ ಇರಾನಿ ಪುತ್ರಿಗೆ ವಿವಾಹ ಯೋಗ ಕೂಡಿ ಬಂದಿದ್ದು, ನಿಶ್ಚಿತಾರ್ಥದ ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡುವ ಮೂಲಕ ಶುಭಾಶಯ ಕೋರಿದ್ದರು. ಅಲ್ಲದೇ ಈ ಖುಷಿಯ  ಕ್ಷಣವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಸ್ಮೃತಿ ಇರಾನಿ ಪುತ್ರಿ ಶಾನೆಲ್‌(Shanelle) ಅವರು ಅರ್ಜುನ್‌ ಭಲ್ಲಾ (Arjun Bhalla) ಎಂಬುವವರ ಕೈ ಹಿಡಿಯುತ್ತಿದ್ದಾರೆ. ಇವರಿಬ್ಬರ ಸುಂದರವಾದ ಫೋಟೋವನ್ನು ಡಿಸೆಂಬರ್‌ 25ರಂದು ಸ್ಮೃತಿ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಅಮ್ಮನ ಕೈಯಿಂದ ಬೀಳುವ ಏಟೇ ಸಾಕು ಯಾವ ಮನೋತಜ್ಞರು ಬೇಡ... Smriti Irani ಪೋಸ್ಟ್‌ ನೋಡಿ

ಇವರು ಪೋಸ್ಟ್‌ ಮಾಡಿದ ಮೊದಲ ಫೋಟೋದಲ್ಲಿ ಅರ್ಜುನ್‌ ಭಲ್ಲಾ ಅವರು ಸ್ಮೃತಿ ಇರಾನಿ ಪುತ್ರಿ ಶಾನೆಲ್‌ ಅವರಿಗೆ ಪ್ರೇಮ ನಿವೇದನೆ ಮಾಡುತ್ತಿರುವ ಫೋಟೋ ಇದೆ. ಈ ಫೋಟೋದಲ್ಲಿ ಅರ್ಜುನ್‌ ಹಾಗೂ ಶಾನೆಲ್‌ ಇಬ್ಬರು ನಗುತ್ತಾ ಫೋಟೋಗೆ ಫೋಸ್‌ ಕೊಟ್ಟಿದ್ದಾರೆ. ನಮ್ಮ ಹೃದಯವನ್ನು ಗೆದ್ದಿರುವ ಅರ್ಜುನ್‌ ಭಲ್ಲಾ ಅವರಿಗೆ ನಮ್ಮ ಹುಚ್ಚು ಕುಟುಂಬಕ್ಕೆ(madcap family) ಸ್ವಾಗತ. ನಿಮಗೆ ನಾವು ಆಶೀರ್ವಾದಿಸುತ್ತಿದ್ದೇವೆ. ನೀವು ಹುಚ್ಚು ಮನುಷ್ಯನಂತ (crazy man) ಮಾವನೊಂದಿಗೆ ಹಾಗೂ ಅದಕ್ಕಿಂತಲೂ ಕೆಟ್ಟ ಅತ್ತೆಯ ಜೊತೆ ವ್ಯವಹರಿಸಬೇಕಾಗುತ್ತದೆ. ಈ ಬಗ್ಗೆ ನಾನು ಅಧಿಕೃತವಾಗಿ ನಿಮಗೆ ಎಚ್ಚರಿಕೆ ನೀಡುತ್ತಿದ್ದೇನೆ. ದೇವರು ಒಳ್ಳೆದು ಮಾಡಲಿ ಎಂದು ತಮಾಷೆಯಾಗಿ ಬರೆದು ಮಗಳು ಆಳಿಯನಿಗೆ ಆಶೀರ್ವಾದ ಮಾಡಿದ್ದರು. 

Wedding Bells: ಮಗಳ ನಿಶ್ಚತಾರ್ಥದ ಫೋಟೋ ಶೇರ್‌ ಮಾಡಿದ ಸ್ಮೃತಿ ಇರಾನಿ 

ಇದಕ್ಕೆ ಕಾಮೆಂಟ್‌ ವಿಭಾಗದಲ್ಲಿ ಶುಭಾಶಯಗಳ ಸುರಿಮಳೆಯೇ ಬಂದಿದೆ. ಏಕ್ತಾ ಕಪೂರ್‌ (Ekta Kapoor), ಮೌನಿ ರಾಯ್‌ (Mouni Roy)  ಸೇರಿದಂತೆ ಅನೇಕ ಸೆಲೆಬ್ರಿಟಿಗಳು ನವ ಜೋಡಿಗೆ ಶುಭಾಶಯ ತಿಳಿಸಿದ್ದಾರೆ. ಸ್ಮೃತಿ ಇರಾನಿಯವರಿಗೆ ಜೊಹ್ರಾ(Zohr), ಜೊಯಿಸ್‌(Zoish) ಹಾಗೂ ಶಾನೆಲ್‌ ಸೇರಿ ಮೂವರು ಮಕ್ಕಳಿದ್ದಾರೆ.

Follow Us:
Download App:
  • android
  • ios