Asianet Suvarna News Asianet Suvarna News

ಕೋವಿಡ್‌ ಗುಣಮುಖರಿಗೆ ಒಂದೇ ಡೋಸ್‌ ಲಸಿಕೆ ಸಾಕು!

* ಕೋವಿಡ್‌ ಗುಣಮುಖರಿಗೆ ಒಂದೇ ಡೋಸ್‌ ಲಸಿಕೆ ಸಾಕು

* ಇವರಲ್ಲಿ 1 ಡೋಸ್‌ನಿಂದ ದುಪ್ಪಟ್ಟು ಪ್ರತಿಕಾಯ ಅಭಿವೃದ್ಧಿ

* ಹೈದರಾಬಾದ್‌ ಆಸ್ಪತ್ರೆಯ ಲಸಿಕೆ ಅಧ್ಯಯನದಲ್ಲಿ ಬೆಳಕಿಗೆ

Single dose of vaccine sufficient for Covid recovered patients Study pod
Author
Bangalore, First Published Jun 15, 2021, 8:39 AM IST

ಹೈದರಾಬಾದ್‌(ಜೂ.15): ಈ ಹಿಂದೆ ಕೋವಿಡ್‌ ಸೋಂಕು ತಗಲಿ ಗುಣವಾದವರಿಗೆ ಲಸಿಕೆಯ ಒಂದೇ ಡೋಸ್‌ ನೀಡಿದರೂ ಸಾಕಾಗುತ್ತದೆ. ಕೋವಿಡ್‌ನಿಂದ ಚೇತರಿಸಿಕೊಂಡ 3ರಿಂದ 6 ತಿಂಗಳಲ್ಲಿ ನೀಡುವ ಮೊದಲ ಡೋಸ್‌ ಲಸಿಕೆಯೇ ಇವರಲ್ಲಿ ಎರಡು ಡೋಸ್‌ನಿಂದ ಉತ್ಪತ್ತಿಯಾಗುವಷ್ಟುಪ್ರತಿಕಾಯ (ಆ್ಯಂಟಿಬಾಡಿ)ಗಳನ್ನು ಉತ್ಪತ್ತಿ ಮಾಡುತ್ತದೆ ಎಂದು ಅಧ್ಯಯನವೊಂದರಲ್ಲಿ ಬೆಳಕಿಗೆ ಬಂದಿದೆ.

ಇಲ್ಲಿನ ಎಐಜಿ ಆಸ್ಪತ್ರೆ ಜನವರಿ 16ರಿಂದ ಫೆಬ್ರವರಿ 5ರ ನಡುವೆ 260 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಿ ಅಧ್ಯಯನಕ್ಕೆ ಒಳಪಡಿಸಿತ್ತು. ಅದರ ಫಲಿತಾಂಶದಲ್ಲಿ, ‘ಮೊದಲೇ ಕೋವಿಡ್‌ ತಗಲಿ ಚೇತರಿಸಿಕೊಂಡವರು ಎರಡು ಡೋಸ್‌ ಲಸಿಕೆ ಪಡೆಯುವ ಅಗತ್ಯವಿಲ್ಲ. ಕೋವಿಡ್‌ ತಗಲದವರಿಗೆ ಹೋಲಿಸಿದರೆ ಕೋವಿಡ್‌ನಿಂದ ಗುಣವಾದವರಲ್ಲಿ ಲಸಿಕೆಯಿಂದ ದುಪ್ಪಟ್ಟು ಆ್ಯಂಟಿಬಾಡಿ ಉತ್ಪತ್ತಿಯಾಗುತ್ತದೆ’ ಎಂಬುದು ಕಂಡುಬಂದಿದೆ. ದೇಶದಲ್ಲಿ ಲಸಿಕೆಗೆ ಕೊರತೆಯಿರುವ ಈ ಹೊತ್ತಿನಲ್ಲಿ ಕೋವಿಡ್‌ನಿಂದ ಗುಣವಾದವರಿಗೆ ಒಂದೇ ಡೋಸ್‌ ಲಸಿಕೆ ನೀಡಿದರೆ ಹೆಚ್ಚೆಚ್ಚು ಜನರಿಗೆ ಲಸಿಕೆ ಸಿಗುವಂತೆ ಮಾಡಬಹುದು ಎಂದು ಅಧ್ಯಯನದ ಕುರಿತು ಇಂಟರ್‌ನ್ಯಾಷನಲ್‌ ಜರ್ನಲ್‌ ಆಫ್‌ ಇನ್‌ಫೆಕ್ಟಿಯಸ್‌ ಡಿಸೀಸಸ್‌ನಲ್ಲಿ ಪ್ರಬಂಧ ಪ್ರಕಟಿಸಿರುವ ಡಾ| ನಾಗೇಶ್ವರ ರೆಡ್ಡಿ ಹೇಳಿದ್ದಾರೆ.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಮೊದಲೇ ಪ್ರತಿಕಾಯಗಳು ಉತ್ಪತ್ತಿಯಾಗಿರುತ್ತವೆ. ಹೀಗಾಗಿ ಒಂದೇ ಡೋಸ್‌ ಲಸಿಕೆಯಿಂದ ಅವರಿಗೆ ಎರಡು ಡೋಸ್‌ ಲಸಿಕೆಯಿಂದ ಸಿಗುವಷ್ಟುಲಾಭ ಸಿಗುತ್ತದೆ. ದೇಶದಲ್ಲಿ ಸಾಕಷ್ಟುಜನರಿಗೆ ಲಸಿಕೆ ದೊರೆತು ಸಾಮೂಹಿಕ ರೋಗನಿರೋಧಕ ಶಕ್ತಿ ಅಭಿವೃದ್ಧಿಯಾದ ಮೇಲೆ ಒಂದು ಡೋಸ್‌ ಲಸಿಕೆ ಪಡೆದ ಪೂರ್ವಸೋಂಕಿತರಿಗೆ ಎರಡನೇ ಡೋಸ್‌ ನೀಡಿದರೆ ಸಾಕು. ಈ ನಿಟ್ಟಿನಲ್ಲಿ ಸರ್ಕಾರ ತನ್ನ ಲಸಿಕೆ ನೀತಿ ಬದಲಿಸಿಕೊಳ್ಳಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios