Asianet Suvarna News Asianet Suvarna News

ನಾಪತ್ತೆಯಾದ 22 ಸೈನಿಕರ ಪೈಕಿ 7 ಮಂದಿ ಯೋಧರ ಶವ ಪತ್ತೆ: ಉಳಿದವರಿಗಾಗಿ ಮುಂದುವರಿದ ಶೋಧ

ಮೇಘಸ್ಫೋಟ ಸಂಭವಿಸಿದ ಕಾರಣದಿಂದಾಗಿ ತೀಸ್ತಾ ನದಿ ಉಕ್ಕೇರಿ ಹರಿದ ಪರಿಣಾಮ ಸಂಭವಿಸಿರುವ ಅವಗಢದಲ್ಲಿ ಸಾವಿಗೀಡಾದವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಇದರಲ್ಲಿ 7 ಮಂದಿ ಸೈನಿಕರು ಸೇರಿದ್ದು, ನಾಪತ್ತೆಯಾದವರ ಸಂಖ್ಯೆ 103ಕ್ಕೆ ಏರಿಕೆಯಾಗಿದೆ.

Sikkim floods 7 dead bodies rest of 22 soldiers found search continues for others akb
Author
First Published Oct 7, 2023, 7:25 AM IST

ಗ್ಯಾಂಗ್ಟಕ್‌: ಮೇಘಸ್ಫೋಟ ಸಂಭವಿಸಿದ ಕಾರಣದಿಂದಾಗಿ ತೀಸ್ತಾ ನದಿ ಉಕ್ಕೇರಿ ಹರಿದ ಪರಿಣಾಮ ಸಂಭವಿಸಿರುವ ಅವಗಢದಲ್ಲಿ ಸಾವಿಗೀಡಾದವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಇದರಲ್ಲಿ 7 ಮಂದಿ ಸೈನಿಕರು ಸೇರಿದ್ದು, ನಾಪತ್ತೆಯಾದವರ ಸಂಖ್ಯೆ 103ಕ್ಕೆ ಏರಿಕೆಯಾಗಿದೆ.

ಜಲಪ್ರಳಯದ ಬಳಿಕ 23 ಮಂದಿ ಸೈನಿಕರು ಕಾಣೆಯಾಗಿದ್ದರು (soldiers missing). ಇವರಲ್ಲಿ ಒಬ್ಬರನ್ನು ರಕ್ಷಿಸಲಾಗಿದ್ದರೂ 22 ಮಂದಿ ಕಾಣೆಯಾಗಿದ್ದರು. ಇದೀಗ ದೊರೆತಿರುವ ಮೃತದೇಹಗಳಲ್ಲಿ 7 ಮಂದಿ ಸೈನಿಕರದ್ದು ಎಂಬುದನ್ನು ಸೇನೆ ಖಚಿತ ಪಡಿಸಿದೆ. ಈ ಎಲ್ಲಾ ಶವಗಳನ್ನು ಜಲ್‌ಪೈಗುರಿ ಮತ್ತು ಕೂಚ್‌ ಬೆಹಾರ್‌ (Cooch Behar) ಪ್ರದೇಶಗಳಲ್ಲಿ ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಳಿದವರಿಗಾಗಿ ತೀಸ್ತಾ ನದಿ ಪಾತ್ರದಲ್ಲಿ ಹುಡುಕಾಟ ನಡೆಸಲಾಗುತ್ತಿದೆ.

ಸಿಕ್ಕಿಂ ಪ್ರವಾಹ: 14 ಸಾವು, 102 ಜನ ನಾಪತ್ತೆ: ಕಣ್ಮರೆಯಾದ 22 ಯೋಧರಿಗಾಗಿ ತೀವ್ರ ಶೋಧ

ಮೃತಪಟ್ಟ 22 ಜನರಲ್ಲಿ 15 ಜನ ಪುರುಷರು ಮತ್ತು 6 ಮಂದಿ ಮಹಿಳೆಯರು ಎಂದು ಗುರುತಿಸಲಾಗಿದೆ. ಪ್ರವಾಹದಿಂದಾಗಿ 7,644 ಮಂದಿ ಸ್ಥಳಾಂತರವಾಗಿದ್ದು, ಇವರೆಲ್ಲರೂ 26 ಪರಿಹಾರ ಕೇಂದ್ರಗಳಲ್ಲಿ ಉಳಿದುಕೊಂಡಿದ್ದಾರೆ. ಪ್ರವಾಹಕ್ಕೆ ಸಿಲುಕಿರುವ ಪ್ರದೇಶಗಳಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ, ಉತ್ತರ ಸಿಕ್ಕಿಂ ಸಂಪರ್ಕಿಸುವ ಎಲ್ಲಾ ರಸ್ತೆಗಳು ಮತ್ತು ಸೇತುವೆಗಳು ಪ್ರವಾಹದಿಂದಾಗಿ ಕೊಚ್ಚಿಹೋಗಿವೆ ಎಂದು ಹೇಳಿದ್ದಾರೆ.

ಸಿಕ್ಕಿಂನಲ್ಲಿ ಭಾರಿ ಮಳೆ, ಮೇಘ ಸ್ಫೋಟ: ಭಾರತೀಯ ಸೇನೆಯ 23 ಯೋಧರು ನಾಪತ್ತೆ

ಸಿಕ್ಕಿಂಗೆ 44.8 ಕೋಟಿ ರು. ಪರಿಹಾರ:

ಪ್ರವಾಹದಿಂದ ತೊಂದರೆಗೆ ಸಿಲುಕಿರುವ ಸಿಕ್ಕಿಂಗೆ ನೆರವಾಗಲು 44.8 ಕೋಟಿ ರು. ಪರಿಹಾರ ಬಿಡುಗಡೆ ಮಾಡಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಒಪ್ಪಿಗೆ ಸೂಚಿಸಿದ್ದಾರೆ. ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಸಮಿತಿಯೊಂದನ್ನು ರಚನೆ ಮಾಡಲಾಗಿದ್ದು, ಈ ಸಮಿತಿ ಶೀಘ್ರವೇ ಸಿಕ್ಕಿಂಗೆ ಭೇಟಿ ನೀಡಲಿದ್ದು, ನಷ್ಟದ ಅಂದಾಜು ಮಾಡಲಿದೆ ಎಂದು ಹೇಳಲಾಗಿದೆ.

ಶವಗಳು ಬಾಂಗ್ಲಾದೇಶದಲ್ಲಿ ಪತ್ತೆ

ಗ್ಯಾಂಗ್ಟಕ್‌: ವಿನಾಶಕಾರಿ ಮೇಘಸ್ಫೋಟದಿಂದ ಭಾರೀ ಪ್ರಮಾಣದಲ್ಲಿ ಉಕ್ಕಿ ಹರಿದ ತೀಸ್ತಾ ನದಿ ಪ್ರವಾಹದಲ್ಲಿ ಸಿಲುಕಿ ನಾಪತ್ತೆಯಾಗಿದ್ದ ಜನರ ಶವಗಳು ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲದೇ ನೆರೆಯ ಬಾಂಗ್ಲಾದೇಶದಲ್ಲೂ ಪತ್ತೆಯಾಗಿವೆ. ನೀರಿನಲ್ಲಿ ಕೊಚ್ಚಿ ಹೋಗಿದ್ದ ಜನರ ಬಹುಪಾಲು ಮೃತದೇಹಗಳು ಪಶ್ಚಿಮ ಬಂಗಾಳದ ಗಜೋಲ್ಡೋಬಾ, ಮೈನಾಗೂರಿ, ಜಲ್ಪೈಗುರಿ, ಕೊತ್ವಾಲಿ, ಕುಚ್ಲಿಬರಿ ಮತ್ತು ಹಲ್ದಿಬಾರಿ ಪ್ರದೇಶಗಳಲ್ಲಿ ಪತ್ತೆಯಾಗಿವೆ. ಉಳಿದ ಕೆಲವು ಶವಗಳು ಬಾಂಗ್ಲಾದೇಶದ ಗಾಲಿಬಂಧದಲ್ಲಿ ಪತ್ತೆಯಾಗಿವೆ. ಇಷ್ಟೊಂದು ದೂರದವರೆಗೆ ಶವಗಳು ತೇಲಿ ಬಂದಿವೆ ಎಂಬುದು ನೀರಿನ ಹರಿವು ಮತ್ತು ಅಪಾಯದ ತೀವ್ರತೆಯನ್ನು ಸೂಚಿಸುತ್ತಿದೆ. ಸಿಕ್ಕಿಂನ ಚುಂಗ್ತಾಂಗ್‌ ಅಣೆಕಟ್ಟು ಹಾಗೂ ಬಾಂಗ್ಲಾದೇಶದಲ್ಲಿ ಶವಗಳು ಪತ್ತೆಯಾದ ಸ್ಥಳದ ನಡುವಿನ ಅಂತರವು 250 ಕಿ.ಮೀಗಳಷ್ಟಿದೆ.

Follow Us:
Download App:
  • android
  • ios