Asianet Suvarna News Asianet Suvarna News

'ಅಜ್ಜಿಗೆ ರಕ್ಷಣೆ ನೀಡಿದ್ದರು, ಸಿಖ್ಖರ ಋುಣ ನನ್ನ ಮೇಲಿದೆ’

ಸಿಖ್ಖರ ಋುಣ ನನ್ನ ಮೇಲಿದೆ| 1977ರಲ್ಲಿ ನನ್ನ ಅಜ್ಜಿ ಇಂದಿರಾ ಗಾಂಧಿ ಅವ​ರಿಗೆ ರಕ್ಷಣೆ ನೀಡಿದ್ದೇ ಸಿಖ್ಖ​ರು| ಖೇತಿ ಬಚಾವೋ ಯಾತ್ರೆ ವೇಳೆ ರಾಹುಲ್ ಗಾಂಧಿ ಮಾತು

Sikhs Protected My Grandmother At Home In 1977 says Rahul Gandhi pod
Author
Bangalore, First Published Oct 7, 2020, 11:54 AM IST

 

ಚಂಡೀ​ಗ​ಢ(ಅ.07): ‘ನಾನು ಸಿಖ್ಖರ ಋುಣ​ದ​ಲ್ಲಿ​ರುವೆ. ಏಕೆಂದರೆ 1977ರಲ್ಲಿ ನನ್ನ ಅಜ್ಜಿ ಇಂದಿರಾ ಗಾಂಧಿ ಅವ​ರಿಗೆ ರಕ್ಷಣೆ ನೀಡಿದ್ದೇ ಸಿಖ್ಖ​ರು’ ಎಂದು ಕಾಂಗ್ರೆಸ್‌ ಮುಖ​ಂಡ ರಾಹುಲ್‌ ಗಾಂಧಿ ಹೇಳಿ​ದ್ದಾ​ರೆ.

ಕೇಂದ್ರ ಸರ್ಕಾ​ರದ ರೈತ ಕಾಯ್ದೆ​ಗಳ ವಿರುದ್ಧ ಕಾಂಗ್ರೆಸ್‌ ಕೈಗೊಂಡಿ​ರುವ ‘ಖೇತಿ ಬಚಾವೋ ಯಾತ್ರೆ​’ಯ ಕೊನೆಯ ದಿನ ಸುದ್ದಿ​ಗಾ​ರರ ಜತೆ ಮಾತ​ನಾ​ಡಿದ ಅವರು, ‘ಪಂಜಾ​ಬಿ​ಗಳು ನನ್ನ ಕೆಲಸ ನೋಡ​ಬೇಕು. ಮಾತು​ಗ​ಳ​ನ್ನಲ್ಲ. ನಾನು ಸಿಖ್ಖ​ರಿಂದ ಸಾಕಷ್ಟುಕಲಿ​ತಿ​ದ್ದೇನೆ. 1977ರಲ್ಲಿ ನನ್ನ ಅಜ್ಜಿ (ಮಾಜಿ ಪ್ರಧಾನಿ ಇಂದಿರಾ ಗಾಂಧಿ) ಚುನಾ​ವ​ಣೆ​ಯಲ್ಲಿ ಸೋತಿ​ದ್ದರು. ಆದರೆ ಆಗ ಯಾರೂ ಕೂಡ ನಮ್ಮ ಮನೆ​ಯಲ್ಲಿ ಇರ​ಲಿಲ್ಲ. ಕೇವಲ ಸಿಖ್ಖರು ರಕ್ಷಣೆ ನೀಡಿ​ದರು. ಹೀಗಾಗಿ ನಾನು ಪಂಜಾಬಿ ಜನರ ಋುಣ​ದ​ಲ್ಲಿ​ದ್ದೇ​ನೆ’ ಎಂದ​ರು. ಆದರೆ 84ರಲ್ಲಿ ಇಂದಿರಾ ಗಾಂಧಿ ಅವರು ಸಿಖ್‌ ಅಂಗರಕ್ಷಕ​ರಿಂದಲೇ ಹತ​ರಾ​ದರು ಎಂಬುದು ಇಲ್ಲಿ ಗಮ​ನಾ​ರ್ಹ.

ತಾಯಿ ಆರೋಗ್ಯ ನೋಡಿ​ಕೊ​ಳ್ಳ​ಬೇ​ಕಿ​ತ್ತು:

ಇದೇ ವೇಳೆ, ಮಹ​ತ್ವದ ಕೃಷಿ ಕಾಯ್ದೆ​ಗಳು ಸಂಸ​ತ್ತಿ​ನಲ್ಲಿ ಚರ್ಚೆಗೆ ಬಂದ ಸಂದ​ರ್ಭ​ದಲ್ಲಿ ತಾವು ವಿದೇ​ಶಕ್ಕೆ ತೆರ​ಳಿದ್ದ ಬಗ್ಗೆ ಸ್ಪಷ್ಟನೆ ನೀಡಿದ ರಾಹುಲ್‌, ‘ನನ್ನ ತಾಯಿ (ಸೋ​ನಿಯಾ ಗಾಂಧಿ) ವೈದ್ಯ​ಕೀಯ ತಪಾ​ಸ​ಣೆ​ಗೆ ಹೋಗಿ​ದ್ದ​ರಿಂದ ನಾನೂ ಅವರ ಜತೆ ವಿದೇ​ಶಕ್ಕೆ ತೆರ​ಳ​ಬೇ​ಕಾ​ಯಿತು. ನಾನು ಅವರ ಮಗ. ಅವ​ರನ್ನು ನೋಡಿ​ಕೊ​ಳ್ಳು​ವುದು ನನ್ನ ಕರ್ತ​ವ್ಯ’ ಎಂದ ರಾಹುಲ್‌, ‘ಸೋನಿಯಾ ಜತೆ ಪ್ರಿಯಾಂಕಾ ತೆರ​ಳ​ಬ​ಹು​ದಿತ್ತು. ಆದರೆ ಅವರ ಮನೆಯ ಕೆಲವು ಸಿಬ್ಬಂದಿಗೆ ಕೊರೋನಾ ಬಂದ ಕಾರಣ ತಾಯಿ ಜತೆ ತೆರ​ಳ​ಲಿ​ಲ್ಲ’ ಎಂದು ಸ್ಪಷ್ಟ​ಪ​ಡಿ​ಸಿ​ದ​ರು.

Follow Us:
Download App:
  • android
  • ios