Vehicle Scrappage Policy: ಮೋದಿ ಅಭಿನಂದಿಸಿದ ಶಿವರಾಜ್ ಸಿಂಗ್ ಚೌಹಾಣ್!
* ರಾಷ್ಟ್ರೀಯ ಆಟೋಮೊಬೈಲ್ ಸ್ಕ್ರ್ಯಾಪೇಜ್ ನೀತಿಗೆ ಚಾಲನೆ
* ಆಟೋಮೊಬೈಲ್ ಕ್ಷೇತ್ರಕ್ಕೆ ಹೊಸ ಗುರುತು ನೀಡಲಿದೆ ಈ ನೀತಿ
* ವೈಜ್ಞಾನಿಕವಾಗಿ ಅನರ್ಹ ವಾಹನಗಳನ್ನು ತೆಗೆದುಹಾಕುವಲ್ಲಿ ದೊಡ್ಡ ಪಾತ್ರ ವಹಿಸಲಿದೆ ಈ ನೀತಿ
ನವದೆಹಲಿ(ಆ.13): ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ರಾಷ್ಟ್ರೀಯ ಆಟೋಮೊಬೈಲ್ ಸ್ಕ್ರ್ಯಾಪೇಜ್ ನೀತಿಯನ್ನು ಪ್ರಾರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿ ಪಿಎಂ ಮೋದಿ ಈ ನೀತಿಯು ನವ ಭಾರತದ ಆಟೋಮೊಬೈಲ್ ಕ್ಷೇತ್ರಕ್ಕೆ ಹೊಸ ಗುರುತನ್ನು ನೀಡಲಿದೆ. ಈ ನೀತಿ ದೇಶದಲ್ಲಿ ವೈಜ್ಞಾನಿಕವಾಗಿ ಅನರ್ಹ ವಾಹನಗಳನ್ನು ತೆಗೆದುಹಾಕುವಲ್ಲಿ ದೊಡ್ಡ ಪಾತ್ರ ವಹಿಸುತ್ತದೆ ಎಂದಿದ್ದಾರೆ. ಹೀಗಿರುವಾಗ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಈ ನೀತಿಗೆ ಚಾಲನೆ ನೀಡಿದ ಪ್ರಧಾನಿ ಮೋದಿಯನ್ನು ಅಭಿನಂದಿಸಿದ್ದಾರೆ. ಆದರೀಗ ಈ ನಡುವೆ ಬಳಕೆದಾರರು ವಿಭಿನ್ನವಾಗಿ ಕಮೆಂಟ್ ಮಾಡುತ್ತಿದ್ದಾರೆ.
ಈ ಸಂಬಂಧ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮಾಡಿದ್ದು 'ರಾಷ್ಟ್ರೀಯ ಆಟೋಮೊಬೈಲ್ ಸ್ಕ್ರ್ಯಾಪೇಜ್ ನೀತಿ'ಯನ್ನು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ನಾನು ಅಭಿನಂದಿಸುತ್ತೇನೆ. ನಿಯಮಿತ ಸ್ಕ್ರ್ಯಾಪ್ಪೇಜ್ ಭವಿಷ್ಯದಲ್ಲಿ ಕಚ್ಚಾ ವಸ್ತುಗಳ ವೆಚ್ಚವನ್ನು ಕಡಿಮೆ ಮಾಡುತ್ತದೆ, ಅಂತಿಮವಾಗಿ ಘಟಕಗಳನ್ನು ಅಗ್ಗವಾಗಿಸುತ್ತದೆ. ಈ ನೀತಿಯು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದಿದ್ದಾರೆ.
ಅತ್ತ ಮೊಹಮ್ಮದ್ ಶನೀಫ್ ಹೆಸರಿನ ಬಳಕೆದಾರ ಈ ಬಗ್ಗೆ ಕಮೆಂಟ್ ಮಾಡಿ ಹಳೆಯ ಮಾಲಿನ್ಯಕಾರಕ ವಾಹನಗಳನ್ನು ನಿರ್ಮೂಲನೆ ಮಾಡುವುದು ಇಂಗಾಲದ ಹೊರಸೂಸುವಿಕೆಯನ್ನು ನಿಯಂತ್ರಿಸಲು ಉತ್ತಮ ಆರಂಭವಾಗಿದೆ. ಈ ಮೂಲಕ ನಾವು ಕಸಿರುಮಯ ಭವಿಷ್ಯದತ್ತ ಹೆಜ್ಜೆ ಹಾಕುತ್ತಿದ್ದೇವೆ ಎಂದಿದ್ದಾರೆ.
ಇನ್ನು ರುತಮ್ ವೋರಾ ಟ್ವೀಟ್ ಮಾಡಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೂಡಿಕೆದಾರರ ಶೃಂಗಸಭೆಯಲ್ಲಿ ಮತ್ತು ಗಾಂಧಿನಗರದಲ್ಲಿ ರಾಷ್ಟ್ರೀಯ ಆಟೋಮೊಬೈಲ್ ಸ್ಕ್ರ್ಯಾಪೇಜ್ ನೀತಿ ಬಗ್ಗೆ ಮಾತನಾಡುತ್ತಾ ಈ ನೀತಿ ದೇಶದಲ್ಲಿ 10,000 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಭಾರತದ ಚಲನಶೀಲತೆ ಮತ್ತು ಆಟೋ ಕ್ಷೇತ್ರಕ್ಕೆ ಹೊಸ ಗುರುತನ್ನು ನೀಡಲಿದೆ ಎಂದಿದ್ದಾರೆ.