ಪಟಿಯಾಲ(ಮೇ.02): ನಿಹಾಂಗ್‌ ಸಿಖ್ಖರು ನಡೆಸಿದ ಹಲ್ಲೆ ವೇಳೆ ಕೈ ತುಂಡರಿಸಲ್ಪಟ್ಟಿದ್ದ ಪಂಜಾಬ್‌ ಸಬ್‌ ಇನ್ಸ್‌ಪೆಕ್ಟರ್‌ ಹರ್ಜಿತ್‌ ಸಿಂಗ್‌ ಆಸ್ಪತ್ರೆಯಿಂದ ಗುರುವಾರ ಬಿಡುಗಡೆ ಆಗಿದ್ದು, ಅದ್ಧೂರಿ ಸ್ವಾಗತದೊಂದಿಗೆ ಪಟಿಯಾಲಾದಲ್ಲಿರುವ ತಮ್ಮ ಮನೆಗೆ ಮರಳಿದ್ದಾರೆ.

ಹರ್ಜಿತ್ ಸಿಂಗ್‌ಗೆ ಸಂಸದ ರಾಜೀವ್ ಚಂದ್ರಶೇಖರ್, ಆಂಧ್ರ ಪೊಲೀಸ್ ಸೆಲ್ಯೂಟ್

ವಿಶೇಷವೆಂದರೆ, ಪಂಜಾಬ್‌ ಡಿಜಿಪಿ ದಿನಕರ್‌ ಗುಪ್ತಾ ಅವರೇ ಖುದ್ದಾಗಿ ಹರ್ಜಿತ್‌ ಸಿಂಗ್‌ ಅವರನ್ನು ತಮ್ಮ ಕಾರಿನಲ್ಲಿ ಪಟಿಯಾಲದಲ್ಲಿರುವ ಮನೆಗೆ ಕರೆತಂದಿದ್ದಾರೆ. ಅಲ್ಲದೇ ಮನೆಗೆ ಮರಳುವಾಗ ಕೆಂಪು ಹಾಸಿನ ಸ್ವಾಗತ ನೀಡಲಾಗಿದ್ದು, ಜನರು ಮನೆಯ ಛಾವಣಿಗಳ ಮೇಲೆ ಏರಿ ಹೂವಿನ ಮಳೆಗರೆದಿದ್ದಾರೆ.

ಏ.12ರಂದು ತರಕಾರಿ ಮಾರುಕಟ್ಟೆಬಲವಂತವಾಗಿ ಪ್ರವೇಶಿಸಿದ ನಿಹಾಂಗ್‌ ಸಿಖ್ಖರನ್ನು ತಡೆಯಲು ಹೋಗಿದ್ದಕ್ಕೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ ಕೈ ಕತ್ತರಿಸಿದ್ದ. ಬಳಿಕ ಅವರ ಕೈಯನ್ನು ಜೋಡಣೆ ಮಾಡಲಾಗಿತ್ತು. ಹರ್ಜಿತ್‌ ಸಿಂಗ್‌ ಶೌರ್ಯ ಮೆಚ್ಚಿ ಪಂಜಾಬ್‌ ಸರ್ಕಾರ ಅವರಿಗೆ ಇನ್ಸ್‌ಪೆಕ್ಟರ್‌ ಹುದ್ದೆಗೆ ಬಡ್ತಿ ನೀಡಿದೆ.