Asianet Suvarna News Asianet Suvarna News

'ನಿನ್ನ ಕರುಣೆ ಇರಲಿ ಪ್ರಭು..' ಗರ್ಭಗುಡಿಯಲ್ಲಿ ರಾಮನ ಮೊದಲ ಫೋಟೋ ಹಂಚಿಕೊಂಡ ದೇವಸ್ಥಾನ ಟ್ರಸ್ಟ್‌!

ಐತಿಹಾಸಿಕ ರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆದ ಬಳಿಕ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಸೋಶಿಯಲ್‌ ಮೀಡಿಯಾದಲ್ಲಿ ಗರ್ಭಗುಡಿಯ ರಾಮನ ಮೊದಲ ಪೋಟೋವನ್ನು ಹಂಚಿಕೊಂಡಿದೆ.
 

Shri Ram Janmbhoomi Teerth Kshetra Shares First Image of Ayodhya Ram Mandir Idol san
Author
First Published Jan 22, 2024, 4:29 PM IST

ಬೆಂಗಳೂರು (ಜ.22): ಶತಮಾನಗಳ ಕಾಲ ನಡೆಸಿದ್ದ ಹೋರಾಟದ ಫಲವಾಗಿ ಕೊನೆಗೂ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಮರು ನಿರ್ಮಾಣವಾಗಿದೆ. ಮಂದಿರದ ಗರ್ಭಗುಡಿಯಲ್ಲಿ ಪ್ರಭು ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. 2019ರಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ರಚಿತವಾಗಿದ್ದ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌, ಅಂದಿನಿಂದ ಇಡೀ ಮಂದಿರದ ವಿಚಾರದಲ್ಲಿ ಬಹಳ ಮುತುವರ್ಜಿಯಿಂದ ಕೆಲಸ ಮಾಡಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆದ ಬಳಿಕ ಮೊದಲ ಬಾರಿಗೆ ದೇವಸ್ಥಾನ ಟ್ರಸ್ಟ್‌ ಗರ್ಭಗುಡಿಯ ಒಳಗಿನ ಪ್ರಭು ಶ್ರೀರಾಮನ ಚಿತ್ರವನ್ನು ಪ್ರಕಟ ಮಾಡಿದೆ. ಇದಕ್ಕೆ ಹಿಂದಿಯಲ್ಲಿ ಶೀರ್ಪಿಕೆ ಬರೆದಿದ್ದು, 'ನಿನ್ನ ಕರುಣೆ ಇರಲಿ ಪ್ರಭು..' ಎನ್ನುವ ಸಾಲನ್ನು ಬರೆದಿದೆ. ದೇವಸ್ಥಾನದ ಟ್ವಿಟರ್‌ ಪೇಜ್‌ ಹಂಚಿಕೊಂಡ ಈ ಫೋಟೋವನ್ನು ಈವರೆಗೂ 3.66 ಲಕ್ಷ ಮಂದಿ ನೋಡಿದ್ದಾರೆ. 46 ಸಾವಿರ ಮಂದಿ ಲೈಕ್‌ ಒತ್ತಿದ್ದರೆ. 11 ಸಾವಿರ ಮಂದಿ ರೀಟ್ವೀಟ್‌ ಮಾಡಿದ್ದಾರೆ. 1 ಸಾವಿರಕ್ಕೂ ಅಧಿಕ ಕಾಮೆಂಟ್ಸ್‌ಗಳು ಬಂದಿವೆ. ಹೆಚ್ಚಿನ ಕಾಮೆಂಟ್ಸ್‌ಗಳಲ್ಲಿ ಶ್ರೀರಾಮನ ಹೊಸ ಮೂರ್ತಿಯ ಚಿತ್ರವನ್ನು ಹಂಚಿಕೊಳ್ಳಲಾಗಿದೆ.

 

 

Follow Us:
Download App:
  • android
  • ios