ಕಟ್ಟಡದ ಮೇಲಿಂದ ಸುರಿಯಿತು ನೋಟಿನ ಸುರಿಮಳೆ| ಬೃಹತ್‌ ಕಟ್ಟಡದಲ್ಲಿರುವ ಆಮದು-ರಫ್ತು ಕಾರ್ಯ ಚಟುವಟಿಕೆಯಲ್ಲಿ ತಲ್ಲೀನವಾದ ಕಂಪನಿ, ಸುಂಕ ಪಾವತಿಸದೇ ವಂಚನೆ| ಕಂದಾಯ ಗುಪ್ತಚರ ನಿರ್ದೇಶನಾಲಯದ ಸಿಬ್ಬಂದಿ ಕಾರ್ಯಾಚರಣೆ| ಸಿಬ್ಬಂದಿಯಲ್ಲಿ ಆತಂಕ

ಕೋಲ್ಕತಾ[ನ.21]: ಗರಿಗರಿಯಾದ 2000, 500 ಮತ್ತು 100 ರು. ಮೌಲ್ಯದ ನೋಟುಗಳ ಸುರಿಮಳೆಯಾಗುತ್ತೆ ಎಂದರೆ ನಂಬಲು ಸಾಧ್ಯವೇ? ಇಂಥದೆಲ್ಲಾ ಕನಸಲ್ಲಿ ಮಾತ್ರ ನಡೆಯಲು ಸಾಧ್ಯ ಅಂದುಕೊಂಡರೆ ತಪ್ಪಾದೀತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು, ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದ ಬೃಹತ್‌ ಕಟ್ಟಡವೊಂದರ 6ನೇ ಮಹಡಿಯಿಂದ ನೋಟುಗಳ ಸುರಿಮಳೆಯಾಗಿದೆ. ಈ ಕುರಿತಾದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡಿವೆ.

ಅಷ್ಟಕ್ಕೂ ಆಗಿದ್ದೇನು ಅಂದರೆ, ಇಲ್ಲಿನ ಬೃಹತ್‌ ಕಟ್ಟಡದಲ್ಲಿರುವ ಆಮದು-ರಫ್ತು ಕಾರ್ಯ ಚಟುವಟಿಕೆಯಲ್ಲಿ ತಲ್ಲೀನವಾದ ಕಂಪನಿಯೊಂದು ಸುಂಕ ಪಾವತಿಸದೇ ವಂಚಿಸುತ್ತಿದೆ ಎಂಬ ಆರೋಪವಿತ್ತು. ಈ ಹಿನ್ನೆಲೆ, ಈ ಕಂಪನಿ ಮೇಲೆ ಬುಧವಾರ ಕಂದಾಯ ಗುಪ್ತಚರ ನಿರ್ದೇಶನಾಲಯದ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದು, ಈ ವೇಳೆ ಆತಂಕಕ್ಕೀಡಾದ ಕಂಪನಿ ಸಿಬ್ಬಂದಿ, 2000, 500 ಮತ್ತು 100 ರು. ಮೌಲ್ಯದ ಕಂತೆ-ಕಂತೆಯ ನೋಟುಗಳನ್ನು ಕಿಟಕಿಯ ಮೂಲಕ ಹೊರಗೆ ಬಿಸಾಡಿದ್ದಾರೆ.

Scroll to load tweet…

ಆದರೆ, ಕಂದಾಯ ಗುಪ್ತಚರ ನಿರ್ದೇಶನಾಲಯದ ದಾಳಿಗೆ ಹಾಗೂ ಕಂತೆ-ಕಂತೆ ನೋಟುಗಳನ್ನು ಬಿಸಾಡಿದ ಘಟನೆಗೆ ಸಂಬಂಧವಿದೆಯೇ ಎಂಬುದರ ಬಗ್ಗೆ ಇದುವರೆಗೂ ಸ್ಪಷ್ಟವಾಗಿಲ್ಲ. ಈ ಹಿನ್ನೆಲೆ ಈ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.