Asianet Suvarna News Asianet Suvarna News

ಗ್ಯಾನ್‌ವಾಪಿಯಲ್ಲಿ ದೇಗುಲ ಕುರುಹು: ಶಿವಲಿಂಗ, ಶೇಷನಾಗ, ಡಮರು, ತ್ರಿಶೂಲ ಪತ್ತೆ..!

*  ಕೋರ್ಟ್‌ಗೆ ಸಲ್ಲಿಸಿದ ಸಮೀಕ್ಷೆ ವರದಿಯಲ್ಲಿ ಅಂಶ
*  ಮಥುರಾ ಮಸೀದಿ ತೆರವು ಕೋರಿದ ಅರ್ಜಿ ವಿಚಾರಣೆಗೆ ಒಪ್ಪಿಗೆ
*  ಮುಸ್ಲಿಂ ಸಂಸ್ಥೆಗಳ ಹೇಳಿಕೆಯಂತೆ ಇದು ಕಾರಂಜಿ ಅಲ್ಲ, ಶಿವಲಿಂಗವಾಗಿದೆ
 

Shivling Found in Gyanvapi Mosque grg
Author
Bengaluru, First Published May 20, 2022, 6:41 AM IST

ಮಥುರಾ(ಮೇ.20): ಇಲ್ಲಿನ ಶ್ರೀಕೃಷ್ಣ ಜನ್ಮಸ್ಥಾನವಾದ ಕೇಶವದೇವ ಮಂದಿರದ ಆವರಣದಲ್ಲಿರುವ ಶಾಹಿ ಈದ್ಗಾ ಮಸೀದಿ ತೆರವುಗೊಳಿಸುವಂತೆ ಕೋರಿ ಸಲ್ಲಿಕೆಯಾದ ಅರ್ಜಿ ‘ವಿಚಾರಣೆಗೆ ಅರ್ಹ’ ಎಂದು ಜಿಲ್ಲಾ ನ್ಯಾಯಾಲಯ ಆದೇಶ ನೀಡಿದೆ. ಹೀಗಾಗಿ ಈ ಅರ್ಜಿ ಸಿವಿಲ್‌ ಕೋರ್ಚ್‌ನಲ್ಲಿ ವಿಚಾರಣೆಗೆ ಬರಲಿದೆ.

ವಾರಾಣಸಿ: ಕಾಶಿ ವಿಶ್ವನಾಥ ಮಂದಿರದ ಕೆಲ ಭಾಗ ಬೀಳಿಸಿ ಮುಘಲ್‌ ದೊರೆ ಔರಂಗಜೇಬ್‌ ನಿರ್ಮಿಸಿದ್ದ ಎನ್ನಲಾದ ಗ್ಯಾನವಾಪಿ ಮಸೀದಿಯ ಸಮೀಕ್ಷಾ ವರದಿಯನ್ನು ಕೋರ್ಟ್‌ ಕಮಿಷ್ನರ್‌ಗಳು ಗುರುವಾರ ವಾರಾಣಸಿ ಸಿವಿಲ್‌ ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಸಲ್ಲಿಸಲಾಗಿದೆ ಎನ್ನಲಾದ ವರದಿಯನ್ನು ಕೆಲವು ವಕೀಲರು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ. ಮಸೀದಿಯು ಈ ಹಿಂದೆ ಹಿಂದೂ ದೇಗುಲವಾಗಿತ್ತು ಎಂಬುದನ್ನು ದೃಢೀಕರಿಸುವ ಸಂಗತಿಗಳಿವೆ ಎಂಬ ಅಂಶಗಳು ವರದಿಯಲ್ಲಿವೆ.

ಗ್ಯಾನ್‌ವಾಪಿ ವರದಿ ಸಲ್ಲಿಸಲು 2 ದಿನ ಕಾಲಾವಕಾಶ: ಮಸೀದಿ ಪ್ರವೇಶಕ್ಕೆ ಮುಸ್ಲಿಮರಿಗೆ ನಿರ್ಬಂಧವಿಲ್ಲ

ಸೀಲ್‌ ಮಾಡಲಾಗಿದ್ದ ವರದಿಯನ್ನು ಫೋಟೋ, ವಿಡಿಯೋಗಳನ್ನು ಹೊಂದಿದ ಚಿಪ್‌ನೊಂದಿಗೆ ವಿಶೇಷ ಕೋರ್ಟ್‌ ಕಮಿಷ್ನರ್‌ ವಿಶಾಲ್‌ ಸಿಂಗ್‌ ಅವರು ವಾರಾನಸಿ ಸಿವಿಲ್‌ ಕೋರ್ಟ್‌ಗೆ ಸಲ್ಲಿಸಿದ್ದಾರೆ. ‘ವರದಿಯನ್ನು ಸೀಲ್‌ ಮಾಡಲಾಗಿದೆ. ಇನ್ನೇನಿದ್ದರೂ ಮುಂದಿನ ಕ್ರಮ ಕೋರ್ಟ್‌ ಮೇಲೆ ಅವಲಂಬಿತವಾಗಿದೆ’ ಎಂದು ವಿಶಾಲ್‌ ಹೇಳಿದ್ದಾರೆ. ಆದರೂ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಹಿಂದೂಪರ ವಕೀಲರು ಮಾಧ್ಯಮಗಳ ಮುಂದೆ ಸಂಜೆ ಕೆಲವು ಮಹತ್ವದ ವಿಷಯಗಳನ್ನು ಬಹಿರಂಗಪಡಿಸಿದ್ದು, ಇದು ಹಿಂದೂ ದೇಗುಲ ಆಗಿತ್ತು ಎಂಬ ಸಾಕ್ಷ್ಯಗಳು ಲಭ್ಯವಾಗಿವೆ ಎಂದಿದ್ದಾರೆ.

ಶೇಷನಾಗ ಪತ್ತೆ:

ಕೋರ್ಚ್‌ ಕಮಿಷ್ನರ್‌ಗಳ ತಂಡದಿಂದ ವಜಾ ಆಗಿದ್ದರೂ ಹಿಂದೂ ಪರ ವಕೀಲ ಅಜಯ್‌ ಮಿಶ್ರಾ ಪ್ರತ್ಯೇಕ ವರದಿ ಸಲ್ಲಿಸಿದ್ದಾರೆ. ಈ ಬಗ್ಗೆ ಅವರು ಮಾಧ್ಯಮಗಳ ಜತೆ ಮಾತನಾಡಿ, ‘ದೇವಾಲಯದ ಅವಶೇಷಗಳು, ಸಮೀಕ್ಷೆ ವೇಳೆ ಕಂಡುಬಂದವು. ಇದರಲ್ಲಿ ಶೇಷನಾಗನ ಹೆಡೆಯನ್ನು ನಾನು ಕಂಡೆ. ಈ ಅವಶೇಷಗಳು 500-600 ವರ್ಷದಷ್ಟು ಹಳೆಯದಾಗಿರಬಹುದು’ ಎಂದು ತಿಳಿಸಿದ್ದಾರೆ. ಮಸೀದಿ ಆವರಣದಲ್ಲಿ ಗುಮ್ಮಟದ ರೀತಿಯ ಶಿಲೆ (ಶಿವಲಿಂಗ) ಕಂಡುಬಂತು ಎಂದು ಖಚಿತಪಡಿಸಿದ್ದಾರೆ. ಈ ನಡುವೆ ವಿಶೇಷ ಕೋರ್ಟ್‌ ಕಮಿಷ್ನರ್‌ ವಿಶಾಲ್‌ ಸಿಂಗ್‌ ಮಾತನಾಡಿ, ‘ಸನಾತನ ಧರ್ಮದ ಸಂಕೇತಗಳಾದ ಕಮಲ, ಡಮರು ಹಾಗೂ ತ್ರಿಶೂಲವನ್ನು ಮಸೀದಿಯ ತಳಮಹಡಿ ಗೋಡೆಯ ಮೇಲೆ ಕಂಡೆ’ ಎಂದಿದ್ದಾರೆ.

ಬಿಲ್ವದ ಮರ ಕಾಣೆ:

ಈ ಮುಂಚೆ 1921ರ ದೀನ್‌ ಮೊಹಮ್ಮದ್‌ ಪ್ರಕರಣದ ವಿಚಾರಣೆ ವೇಳೆ ಗ್ಯಾನವಾಪಿ ಮಸೀದಿ ಆವರಣದಲ್ಲಿ ಬಿಲ್ವದ ಮರ ಸೇರಿ 3 ಮರಗಳಿವೆ ಎಂದು ಉಲ್ಲೇಖಿಸಲಾಗಿತ್ತು. ಆರೆ ಬಿಲ್ವದ ಮರ ಇಂದು ಇಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.

Gyanvapi Mosque Verdict: ಗ್ಯಾನ್‌ವಾಪಿ ಮಸೀದಿ ವಿಡಿಯೋ ಸರ್ವೆಗೆ ಕೋರ್ಟ್‌ ಅನುಮತಿ!

ಅದು ಕಾರಂಜಿಯಲ್ಲ, ಶಿವಲಿಂಗ ‘ಕಾರಂಜಿ’ಗೆ ನೀರಿನ ಸಂಪರ್ಕವೇ ಇಲ್ಲ: ಕೋರ್ಟಿಗೆ ವರದಿ

ವಾರಾಣಸಿ: ‘ಗ್ಯಾನವಾಪಿ ಮಸೀದಿಯಲ್ಲಿ ಪತ್ತೆಯಾಗಿದ್ದು ಶಿವಲಿಂಗವಲ್ಲ, ಕೊಳದೊಳಗಿನ ಕಾರಂಜಿ’ ಎಂಬ ಮುಸ್ಲಿಂ ಸಂಸ್ಥೆಗಳ ಹೇಳಿಕೆಗೆ ಕೋರ್ಟ್‌ಗೆ ಹಿಂದೂ ಪರ ವಕೀಲರು ಸಲ್ಲಿಸಿದ ವರದಿಯಲ್ಲಿ ಆಕ್ಷೇಪಿಸಲಾಗಿದೆ. ‘ಕಾರಂಜಿ ಎಂದರೆ ಅದಕ್ಕೆ ನೀರಿನ ಸಂಪರ್ಕ ಇರಬೇಕು. ಆದರೆ ನೀರಿನ ಸಂಪರ್ಕ ಎಲ್ಲೂ ಕಂಡುಬಂದಿಲ್ಲ. ಹೀಗಾಗಿ ಅದು ಶಿವಲಿಂಗ ಎಂದು ಸಾಬೀತಾಗಿದೆ’ ಎಂದು ವಾರಾಣಸಿ ಕೋರ್ಚ್‌ಗೆ ಸಲ್ಲಿಸಲಾದ ಹಿಂದೂ ಪರ ವಕೀಲರ ವರದಿ ಹೇಳಿದೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ‘ಶಿವಲಿಂಗ ಪತ್ತೆ ಆಗಿದೆ’ ಎಂದು ಹಿಂದೂಪರ ವಕೀಲರು ಹೇಳಿದ್ದರು. ಆದರೆ ಅದು ‘ಕೊಳದೊಳಗಿನ ಕಾರಂಜಿ. ಶಿವಲಿಂಗದ ರೀತಿ ಕಾಣುತ್ತದೆ ಅಷ್ಟೇ. ನೀರು ಹೋಗಲು ರಂಧ್ರಗಳಿವೆ’ ಎಂದು ಮುಸ್ಲಿಂ ಮುಖಂಡರು ವಾದಿಸಿದ್ದರು.

ವರದಿಯಲ್ಲೇನಿದೆ?

- ಮಸೀದಿಯ ನೆಲಮಹಡಿ ಕಂಬಗಳ ಮೇಲೆ ‘ಹಳೆ ಹಿಂದಿ ಭಾಷೆ’ಯಲ್ಲಿ ಕೆತ್ತನೆ
- ಮಸೀದಿಯ ನೆಲಮಹಡಿ ಗೋಡೆ ಮೇಲೆ ‘ತ್ರಿಶೂಲ’ವೊಂದು ಪತ್ತೆಯಾಗಿದೆ
- ಮಸೀದಿಯ ಗುಮ್ಮಟದ ಕೆಳಭಾಗದಲ್ಲಿ ಪುರಾತನ ಕಾಲದ ರಚನೆ ದೊರೆತಿದೆ
- ಮಸೀದಿಯ ಗುಮ್ಮಟದ ಕಲ್ಲೊಂದರ ಮೇಲೆ ಕಮಲದ ಹೂವಿನ ಕೆತ್ತನೆಗಳಿವೆ
- ಮಸೀದಿಯ ಕೊಳದಲ್ಲಿ 2.5 ಅಡಿ ಎತ್ತರದ ರಚನೆಯಿದೆ. ಅದು ಶಿವಲಿಂಗ
- ಮುಸ್ಲಿಂ ಸಂಸ್ಥೆಗಳ ಹೇಳಿಕೆಯಂತೆ ಇದು ಕಾರಂಜಿ ಅಲ್ಲ, ಶಿವಲಿಂಗವಾಗಿದೆ
- ಮಂದಿರದ ಅವಶೇಷಗಳಲ್ಲಿ ಶೇಷನಾಗ, ಡಮರು, ತ್ರಿಶೂಲ ಇತ್ಯಾದಿ ಪತ್ತೆ
 

Follow Us:
Download App:
  • android
  • ios