ಒತ್ತುವರಿ ತೆರವು ವೇಳೆ ದೇವಸ್ಥಾನ ಪತ್ತೆ, 46 ವರ್ಷ ಬಳಿಕ ಪೂಜೆ ಆರಂಭಿಸಿದ ಯೋಗಿ ಸರ್ಕಾರ!
ಕಳೆದ 46 ವರ್ಷಗಳಿಂದ ಅಂದರೆ 1978ರ ವರೆಗೆ ಈ ದೇವವಸ್ಥಾನದಲ್ಲಿ ಪೂಜೆ ನಡೆಯುತ್ತಿತ್ತು. ಬಳಿಕ ಅತಿಕ್ರಮವಾಗಿ ಸ್ಥಳ ಒತ್ತುವರಿ ಮಾಡಿಕೊಂಡ ಕಾರಣ ದೇವಸ್ಥಾನ ನಾಪತ್ತೆಯಾಗಿತ್ತು. ಇದೀಗ ಯೋಗಿ ಸರ್ಕಾರ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ದೇವಸ್ಥಾನ ಪತ್ತೆ ಹಚ್ಚಿದೆ. ಇಷ್ಟೇ ಅಲ್ಲ ಬಾಗಿಲು ತೆರೆದು ದೇವಸ್ಥಾನ ಶುಚಿಗೊಳಿಸಿ ಭಕ್ತರ ದರ್ಶನಕ್ಕೆ ಮುಕ್ತವಾಗಿಸಿದೆ.
ಲಖನೌ(ಡಿ.14) ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗಾಲೇ ಅತಿಕ್ರಮಣವಾಗಿ ಒತ್ತುವರಿ ಮಾಡಿಕೊಂಡಿರುವ ಪ್ರದೇಶಗಳನ್ನು ವಾಪಸ್ ಪಡೆಯಲು ಒತ್ತುವರಿ ತೆರೆವು ಕಾರ್ಯಾಚರಣೆ ನಡೆಸುತ್ತಿದೆ. ಇದರ ಜೊತೆ ಜೊತೆಗೆ ಹಲುವು ಇಲಾಖೆಗಳಿಗೂ ತಮ್ಮ ತಮ್ಮ ವ್ಯಾಪ್ತಿಯಲ್ಲಿರುವ ಅತಿಕ್ರಮಗಳನ್ನು ತಡೆಯಲು ಸೂಚಿಸಿದೆ. ಇದರಂತೆ ಸ್ಥಳೀಯ ಜಿಲ್ಲಾಡಳಿತ ಮಿಂಚಿನ ವೇಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕಾರ್ಯಾಚರಣೆಯಲ್ಲಿ ಬರೋಬ್ಬರಿ 46 ವರ್ಷಗಳಿಂದ ನಾಪತ್ತೆಯಾಗಿದ್ದ ಶಿವ ಹಾಗೂ ಹನುಮಾನ ದೇಗುಲ ಪತ್ತೆಯಾಗಿದೆ. ವಿಶೇಷ ಅಂದರೆ ಈ ದೇವಸ್ಥಾನದ ಒಳಗೆ ತುಂಬಿಕೊಂಡಿದ್ದ ಮಣ್ಣು ಗಿಡಗಳನ್ನು ಹೊರತೆಗೆದ ಜಿಲ್ಲಾಡಳಿತ ಸಂಪೂರ್ಣ ಶುಚಿಗೊಳಿಸಿದೆ. ಇಷ್ಟೇ ಅಲ್ಲ ದೇವಸ್ಥಾನ ಭಕ್ತರ ಪ್ರವೇಶಕ್ಕೆ ಮುಕ್ತವಾಗಿಸಿದೆ.
ಸಂಭಾಲ್ ಜಿಲ್ಲೆಯಲ್ಲಿ ಈ ದೇವಸ್ಥಾನ ಪತ್ತೆಯಾಗಿದೆ. ಇತ್ತೀಚೆಗೆ ಸಂಭಾಲ್ ಮಸೀದಿ ಸರ್ವೆ ಪ್ರಕರಣದಲ್ಲಿ ಭಾರಿ ಸುದ್ದಿಯಾಗಿದೆ. ಇದೇ ಜಿಲ್ಲೆಯಲ್ಲಿ ಇದೀಗ ಶಿವ ಹಾಗೂ ಹನುಮಾನ ದೇವಸ್ಥಾನ ಪತ್ತೆಯಾಗಿದೆ. ಸಂಭಾಲ್ ಜಿಲ್ಲೆಯಲ್ಲಿ ಹಲವು ಭಾಗದಲ್ಲಿ ವಿದ್ಯುತ್ ಕಳ್ಳತನ ನಡೆಯುತ್ತಿದೆ ಅನ್ನೋ ಮಾಹಿತಿ ಮೇರೆ ವಿದ್ಯುತ್ ವಿಭಾಗದ ಅಧಿಕಾರಿಗಳು ಪೊಲೀಸರು ದಾಳಿ ನಡೆಸಿದ್ದರು. ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ವಿದ್ಯುತ್ ಬಳಸುತ್ತಿರುವುದು ಪತ್ತೆಯಾಗಿತ್ತು. ಈ ಕಾರ್ಯಾಚರಣೆಯಲ್ಲಿ ಈ ದೇವಸ್ಥಾನ ಪತ್ತೆಯಾಗಿದೆ.
ರಾಮ ಮಂದಿರ ವರ್ಷಾಚರಣೆ ಬೆನ್ನಲ್ಲೇ ಹೊರಬಿತ್ತು ಘೋಷಣೆ, ಈ ರಾಜ್ಯದಲ್ಲಿ ರಾಮ ದೇಗುಲ ನಿರ್ಮಾಣ!
ಸಂಭಾಲ್ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಪೆನಿಸಿಯಾ ಸೇರಿದಂತೆ ಜಿಲ್ಲಾಡಳಿತ ವಿದ್ಯುತ್ ಕಳ್ಳತನ ಪತ್ತೆ ಹಚ್ಚಲು ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯಾಚರಣೆ ವೇಳೆ ಹಲವುು ಮನಗಳು ಅಕ್ರಮವಾಗಿ ತಲೆ ಎತ್ತಿದೆ. ಈ ವೇಳೆ ಹಲವು ಮನೆಗಳ ಓಣಿಯಲ್ಲಿ ಹಳೇ ಭಾವಿಯ ಕುರುಹುಗಳು ಪತ್ತೆಯಾಗಿದೆ. ಜಾಗ ಒತ್ತುವರಿ ಮಾಡಿಕೊಂಡಿರುವ ಕುರಿತು ಮಾಹಿತಿ ಕಲೆಹಾಕುತ್ತಿದ್ದಂತೆ ಇದು ದೇವಸ್ಥಾನದ ಭಾವಿ ಅನ್ನೋ ಮಾಹಿತಿ ಸಿಕ್ಕಿದೆ. ಮತ್ತಷ್ಟು ಕಾರ್ಯಾಚರಣೆ ನಡೆಸಿದಾಗ ಅತ್ಯಂತ ಶತ ಶತಮಾನಗಳಷ್ಟು ಪುರಾತನ ದೇವಸ್ಥಾನ ಪತ್ತೆಯಾಗಿದೆ.
ದೇವಸ್ಥಾನದ ನೂರೂರು ಏಕರೆ ಜಾಗವನ್ನು ಒತ್ತುವರಿ ಮಾಡಿ ಮನೆಗಳನ್ನು, ಕಟ್ಟಡಗಳನ್ನು ಕಟ್ಟಲಾಗಿದೆ.ದೇವಸ್ಥಾನದ ಸುತ್ತ ಮುತ್ತ ಎಲ್ಲಾ ಕಡೆ ಮನೆ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಇಲ್ಲೊಂದು ದೇವಸ್ಥಾನವಿದೆ ಅನ್ನೋದೇ ಯಾರಿಗೂ ತಿಳಿಯದಾಗಿದೆ. 1978ರ ವರೆಗೆ ಈ ದೇವಸ್ಥಾನದಲ್ಲಿ ಪೂಜೆ ನಡೆಯುತ್ತಿತ್ತು ಎಂದು ವಿಶ್ವ ಹಿಂದೂ ಮಹಾ ಸಭಾ ಹೇಳಿದೆ.
ಈ ಕುರಿತು ಮಾತನಾಡಿರುವ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಪೆನಿಸಿಯಾ, ಭಾರಿ ಪ್ರಮಾಣದಲ್ಲಿ ಜಾಗ ಒತ್ತುವರಿಯಾಗಿದೆ. ದಾಖಲೆಗಳ ಪ್ರಕಾರ ಇಲ್ಲಿ ಅತೀ ಹೆಚ್ಚು ಹಿಂದೂಗಳ ಮನೆಗಳಿತ್ತು. ಈ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಕುಟುಂಬಗಳು ಇಲ್ಲೇ ವಾಸವಾಗಿತ್ತು. ಆದರೆ ಈ ಮನೆಗಳು, ಕುಟುಂಬಗಳು, ಸದಸ್ಯರು ಯಾರೂ ಇಲ್ಲ. ಈ ಮನೆಗಳು ಬೇರೆಯವರ ಪಾಲಾಗಿದೆ. ಈ ಕುರಿತು ತನಿಖೆ ನಡೆಸಿ ಒತ್ತುವರಿಯ ಎಲ್ಲಾ ಮನೆಗಳು, ಕಟ್ಟಡ ಕೆಡವಲಾಗುತ್ತದೆ. ಇಷ್ಟೇ ಅಲ್ಲ ಈ ಸ್ಥಳದ ಮೂಲ ನಿವಾಸಿಗಳಿಗೆ ಮರಳಿಸಲಾಗುತ್ತದೆ ಎಂದಿದ್ದಾರೆ.
ವಿಶ್ವ ಹಿಂದು ಮಹಾ ಸಭಾ ಪ್ರಕಾರ ಇಲ್ಲಿದ್ದ ಹಿಂದೂಗಳನ್ನು ಬೆದರಿಸಿ, ಹೆದರಿಸಿ ಒಡಿಸಲಾಗಿದೆ. ಹಲವರನ್ನು ಕ್ರೂರವಾಗಿ ಮತಾಂತರ ಮಾಡಲಾಗಿದೆ. ಇಡೀ ಜಿಲ್ಲೆಯಲ್ಲೇ ಈ ರೀತಿಯ ಹಲವು ದೇವಸ್ಥಾನಗಳು ಹುದಗಿರುವ ಸಾಧ್ಯತೆ ಇದೆ ಎಂದಿದೆ. ಜಿಲ್ಲಾಡಳಿತ ದೇವಸ್ಥಾನಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕು. ಈ ದೇವಸ್ಥಾನ ಪುನರ್ ನಿರ್ಮಾಣವಾಗಬೇಕು ಎಂದು ಹಿಂದೂ ಮಹಾ ಸಭಾ ಆಗ್ರಹಿಸಿದೆ. ಸಂಭಾಲ್ ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಈ ರೀತಿಯ ಹಲವು ಘಟನೆಗಳಿವೆ. ಈ ಕುರಿತು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.