ಮುಂಬೈ[ನ.27]: ಶಿವಸೇನೆಯು ಕಾಂಗ್ರೆಸ್ ಹಾಗೂ NCP ಜೊತೆ ಕೈಜೋಡಿಸಿರುವುದರಿಂದ ಅಸಮಾಧಾನಗೊಮಡಿರುವ ಸೇನೆಯ ಕಾರ್ಯಕರ್ತನೊಬ್ಬ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಶಿವಸೇನೆಗೆ ರಾಜೀನಾಮೆ ನೀಡಿರುವ ರಮೇಶ್ ಸೋಲಂಕಿ, ಈ ವಿಚಾರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸೋಲಂಕಿ ಶಿವಸೇನೆಯ BBS/ ಯುವಸೇನೆ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಭಿನ್ನ ವಿಚಾರಧಾರೆ ಹಾಗೂ ಅಂತರಾಳ ಕಾಂಗ್ರೆಸ್ ಜೊತೆ ಕೆಲಸ ಮಾಡಲು ಸಹಕರಿಸುತ್ತಿಲ್ಲ ಎಂದಿದ್ದಾರೆ.

ಅವ್ರೂ ಬರ್ಲಿ: ಪ್ರಮಾಣವಚನಕ್ಕೆ ಮೋದಿ, ಶಾಗೂ ಆಮಂತ್ರಣ ಇರ್ಲಿ!

ಅಲ್ಲದೇ 'ಕೆಲ ದಿನಗಳಿಂದ ನನ್ನ ನಿಲುವೇನು ಎಂಬುವುದು ಎಲ್ಲರೂ ತಿಳಿದುಕೊಳ್ಳಲು ಇಚ್ಛಿಸಿದ್ದರು. ಈಗ ನಾನದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ನನ್ನ ಶ್ರೀರಾಮನ ಬಂಟನಾಗದವನು[ಕಾಂಗ್ರೆಸ್], ಅವನು ನನ್ನವನಾಗಲು ಸಾಧ್ಯವಿಲ್ಲ. ಪ್ರೀತಿ ಹಾಗೂ ಗೌರವ ನೀಡಿದ ಆದಿತ್ಯ ಠಾಕ್ರೆಗೆ ಮತ್ತೊಮ್ಮೆ ನನ್ನ ಧನ್ಯವಾದಗಳು. ನಿಮ್ಮೊಂದಿಗೆ ಕೆಲಸ ಮಾಡಲು ಬಹಳ ಖುಷಿಯಾಯ್ತು' ಎಂದಿದ್ದಾರೆ.

ಮತ್ತೊಂದು ಟ್ವಿಟ್ ಮಾಡಿರುವ ಸೋಲಂಕಿ 'ನಾನು ಯಾವತ್ತೂ ಸ್ಥಾನಕ್ಕಾಗಿ ಅಥವಾ ಚುನಾವಣೆಗೆ ಟಿಕೆಟ್ ನೀಡಿ ಎಂದು ಕೇಳಲಿಲ್ಲ. ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುತ್ತಿರುವುದಕ್ಕೆ ಹಾಗೂ ಮುಖ್ಯಮಂತ್ರಿಯಾಗುತ್ತಿರುವುದಕ್ಕೆ ನಿಮಗೆ ಅಭಿನಂದನೆಗಳು. ಆದರೆ ನ್ನ ಅಂತರಾಳ ಕಾಂಗ್ರೆಸ್ ಜೊತೆ ಕೆಲಸ ಮಾಡಲು ಅನುಮತಿ ನೀಡುತ್ತಿಲ್ಲ. ಇದು ನನ್ನ ಸ್ಥಾನ, ಪಕ್ಷ ಹಾಗೂ ಸಹವರ್ತಿಗಳಿಗೆ ಸೂಕ್ತವಲ್ಲ' ಎಂದಿದ್ದಾರೆ.

ಮೊದಲ ಬಾರಿಗೆ ಠಾಕ್ರೆ ಕುಟುಂಬಕ್ಕೆ ಸಿಎಂ ಹುದ್ದೆ, ಸೋನಿಯಾಗೆ ಧನ್ಯವಾದ ಎಂದ ಉದ್ಧವ್!

ಇದು ನನ್ನ ಜೀವನದ ಅತ್ಯಂತ ಕಷ್ಟಕರ ನಿರ್ಧಾರ ಎಂದಿರುವ ರಮೇಶ್ ಸೋಲಂಕಿ 'ಹಡಗು ಮುಳುಗಿದಾಗ ಎಲ್ಲಕ್ಕಿಂತ ಮೊದಲು ಇಲಿಗಳು ಇಳಿದು ಓಡುತ್ತವೆ ಎಂಬ ಮಾತಿದೆ. ಆದರೆ ನಾನು ನನ್ನ ಪಕ್ಷ ಅಧಿಕಾರಕ್ಕೇರುತ್ತಿರುವಾಗ ಅದನ್ನು ತೊರೆಯುತ್ತಿದ್ದೇನೆ' ಎಂದಿದ್ದಾರೆ.

ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು