ಚುನಾವಣೆಯಲ್ಲಿ ಗೆಲ್ಲಲು 40 ಯೋಧರ ಬಲಿ: ಬಿಜೆಪಿ ವಿರುದ್ಧ ಶಿವಸೇನೆಯ ಗಂಭೀರ ಆರೋಪ!
ಬಿಜೆಪಿ ವಿರುದ್ಧ ಗುಡುಗಿದ ಶಿವಸೇನೆ| ಸೈನಿಕರ ನೆತ್ತರು ಹರಿಸಿ ರಾಜಕೀಯ| ಅರ್ನಬ್ ವಿರುದ್ಧ ಕ್ರಮ ಯಾಕಿಲ್ಲ?
ಮಹಾರಾಷ್ಟ್ರ(ಜ.21): ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿಯ ಸೋರಿಕೆಯಾದ ವಾಟ್ಸಾಪ್ ಸಂದೇಶಗಳನ್ನು ಮುಂದಿಟ್ಟುಕೊಂಡು ಶಿವಸೇನೆ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದೆ. ತನ್ನ ಮುಖವಾಣಿ ಸಾಮ್ನಾದಲ್ಲಿ 'ಹಾಗಾದ್ರೆ ಪುಲ್ವಾಮಾದಲ್ಲಿ ನಮ್ಮ ಸೈನಿಕರ ಹತ್ಯೆ ನಮ್ಮ ದೇಶದ ರಾಜಕೀಯ ಷಡ್ಯಂತ್ರ. ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ನಲ್ವತ್ತು ಯೋಧರ ನೆತ್ತರು ಹರಿಸಿದರು. ಈ ಆರೋಪಗಳು ಅಂದೂ ಕೇಳಿ ಬಂದಿದ್ದವು. ಆದರೆ ಅರ್ನಬ್ ಗೊಸ್ವಾಮಿಯ ವಾಟ್ಸಾಪ್ ಸಂದೇಶಗಳು ಇವುಗಳಿಗೆ ಮತ್ತಷ್ಟು ಬಲ ತುಂಬುತ್ತವೆ' ಎಂದಿದೆ.
ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಗೌಪ್ಯ ವಿಚಾರಗಳನಬ್ನು ಅರ್ನಬ್ ಗೋಸ್ವಾಮಿ ಬಹಿರಂಗಗೊಳಿಸಿದ್ದಾರೆ. ಈ ವಿಚಾರವಾಗಿ ಬಿಜೆಪಿ ಯಾಕೆ 'ತಾಂಡವ'ವಾಡುತ್ತಿಲ್ಲ? ಗೋಸ್ವಾಮಿಗೆ ಮಾಹಿತಿ ರವಾನಿಸಿ ರಾಷ್ಟ್ರೀಯ ಸುರಕ್ಷತೆಯ ವಿಚಾರದಲ್ಲಿ ಅವಮಾನವಾಗುವಂತೆ ಮಾಡಿದ ಅಸಲಿ ಮುಖ ಯಾರದ್ದು? ನಮಗೂ ತಿಳಿಸಿ. ಗೊಸ್ವಾಮಿ ನಲ್ವತ್ತು ಯೋಧರ ಹತ್ಯೆ ವಿಚಾರದಲ್ಲಿ ಖುಷಿ ವ್ಯಕ್ತಪಡಿಸಿದ್ದು, ಈ ದೇಶ, ದೇವರು ಹಾಗೂ ಧರ್ಮಕ್ಕೆ ಅವಮಾನ ಮಾಡಿದಂತೆ ಎಂದೂ ಇದರಲ್ಲಿ ಬರೆಯಲಾಗಿದೆ.
ಅರ್ನಬ್ ಮೇಲೆ ಕ್ರಮ ಯಾವಾಗ?
ಬಿಜೆಪಿ ಗುರಿಯಾಗಿಸಿಕೊಂಡಿರುವ ಶಿವಸೇನೆ 'ಬಿಜೆಪಿ 'ತಾಂಡವ್' ಆನ್‌ಲೈನ್ ಸೀರೀಸ್ ಬಿಹಿಷ್ಕರಿಸುವಂತೆ ಧ್ವನಿ ಎತ್ತಿದೆ. ಆದರೆ ಇತ್ತ ಭಾರತ ಮಾತೆಗೆ ಅವಮಾನ ಮಾಡುವ ಅರ್ನಬ್ ಗೋಸ್ವಾಮಿ ವಿಚಾರದಲ್ಲಿ ಬೆರಳು ಬಾಯಿಗಿಟ್ಟು ಮೌನ ಯಾಕೆ ವಹಿಸಿದೆ? ಭಾರತೀಯ ಸೈನಿಕರ ಹಾಗೂ ಹುತಾತ್ಮರಿಗೆ ಅರ್ನಬ್ ಮಾಡಿದಷ್ಟು ಅವಮಾನ ಪಾಕಿಸ್ತಾನದವರೂ ಮಾಡಿಲ್ಲ' ಎಂದಿದೆ.