ನವದೆಹಲಿ(ಡಿ.11): ಭಾರತದಲ್ಲಿ ಧಾರ್ಮಿಕ ವಿಭಜನೆಗೆ ಕಾಂಗ್ರೆಸ್ ಪಕ್ಷ ಕಾರಣ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ತಿರುಗೇಟು ನೀಡಿದ್ದಾರೆ. 

ಅಮಿತ್ ಶಾ ಶಾಲೆಯಲ್ಲಿ ಇತಿಹಾಸ ತರಗತಿಯಲ್ಲಿ ಪಾಠವನ್ನು ಗಮನವಿಟ್ಟು ಕೇಳುತ್ತಿರಲಿಲ್ಲ ಎಂದೆನಿಸುತ್ತದೆ ಎಂದು ಶಶಿ ತರೂರ್ ಕಿಚಾಯಿಸಿದ್ದಾರೆ.

ಕೆಲವರ ನಾಲಿಗೆ ಮೇಲೆ ಪಾಕ್ ಕುಣಿದಾಡುತ್ತಿದೆ: ಪ್ರಧಾನಿ ಮೋದಿ

ಲೋಕಮಾತ್ ನ್ಯಾಷನಲ್ ಸಭೆಯಲ್ಲಿ 'ಭಾರತದ ರಾಜಕೀಯದಲ್ಲಿ ಸ್ಥಳೀಯ ಪಕ್ಷಗಳ ಪಾತ್ರ'ದ ಕುರಿತು ಮಾತನಾಡಿದ ತರೂರ್, ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್ ಎರಡು ದೇಶದ ಸಿದ್ಧಾಂತವನ್ನು ಅಪಾರವಾಗಿ ಸಮರ್ಥಿಸಿಕೊಂಡಿದ್ದವು ಎಂದು ಹೇಳಿದರು.

ದೇಶದ ವಿಬಜನೆಯನ್ನು ತಡೆಯಲು ಕಾಂಗ್ರೆಸ್ ಪ್ರಯತ್ನಪಟ್ಟರೂ, ಮುಸ್ಲಿಂ ಲೀಗ್ ಹಾಗೂ ಹಿಂದೂ ಮಹಾಸಭಾದ ಕೋಮು ವಿಭಜನಕ ನೀತಿಗಳಿಂದಾಗಿ ದೇಶ ವಿಭಜನೆಯಾಯ್ತು ಎಂದು ಶಶಿ ತರೂರ್ ಆರೋಪಿಸಿದರು.

ಅಮಿತ್ ಶಾ ವಿರುದ್ಧ ನಿರ್ಬಂಧಕ್ಕೆ ಅಮೆರಿಕಾ ಆಯೋಗ ಶಿಫಾರಸು

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ಪಕ್ಷವೊಂದೇ ಅಖಂಡ ಭಾರತದ ಪ್ರತಿನಿಧಿಯಾಗಿ ಹೋರಾಟ ನಡೆಸಿತ್ತು. ಆದರೆ ಮುಸ್ಲಿಂ ಲೀಗ್ ಹಾಗೂ ಹಿಂದೂ ಮಹಾಸಭಾ ಧರ್ಮದ ಆಧಾರದಲ್ಲಿ ಈ ದೇಶವನ್ನು ಒಡೆಯುವಲ್ಲಿ ಯಶಸ್ವಿಯಾದವು ಎಂದು ತರೂರ್ ಹೇಳಿದರು.

1935ರಲ್ಲಿ ಹಿಂದೂ ಮಹಾಸಭಾ ದ್ವಿರಾಷ್ಟ್ರ ಸಿದ್ದಾಂತ ಪ್ರತಿಪಾದಿಸಿತು. ಮುಂದೆ 1945ರಲ್ಲಿ ಮುಸ್ಲಿಂ ಲೀಗ್ ಕೂಡ ಇದೇ ಒತ್ತಾಯ ಮಂಡಿಸತೊಡಗಿತು. ಆ ಸಮಯದಲ್ಲಿ ಮೌಲಾನಾ ಅಬುಲ್ ಕಲಾಂ ಆಜಾದ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು ಎಂದು ತರೂರ್ ನೆನಪಿಸಿದರು.

ಪೌರತ್ವ ಮಸೂದೆ: ಬೇಡದ ಇರುವೆ ಬಿಟ್ಕೊಂಡ ಪಾಕ್ ಪ್ರಧಾನಿ!

ಇತಿಹಾಸದ ಅರಿವಿರದ ಅಮಿತ್ ಶಾ ಇದೀಗ ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಮಾಡುತ್ತಿದ್ದು, ಅವರು ಶಾಲೆಯಲ್ಲಿ ಗಮನವಿಟ್ಟು ಪಾಠ ಕೇಳಿಲ್ಲ ಎಂದು ಕಿಚಾಯಿಸಿದರು. 

ಇದೇ ವೇಳೆ ದೇಶಾದ್ಯಂತ ಬಿಜೆಪಿ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ರಾಷ್ಟ್ರೀಯ ನಾಗರಿಕ ದಾಖಲಾತಿ, ಸ್ಥಳೀಯ ಪಕ್ಷಗಳಿಂದ ಆಳಲ್ಪಡುತ್ತಿರುವ ರಾಜ್ಯಗಳಲ್ಲಿ ಹಲವು ಸಮಸ್ಯೆಗಳನ್ನು ಸೃಷ್ಟಿಸಲಿದೆ ಎಂದು ತರೂರ್ ಎಚ್ಚರಿಸಿದರು.

ಶಾ ಎದುರಲ್ಲೇ CAB ಪ್ರತಿ ಹರಿದು ವಿವಾದ ಸೃಷ್ಟಿಸಿದ ಒವೈಸಿ!

ಪೌರತ್ವ ತಿದ್ದುಪಡಿ ಮಸೂದೆ ಕುರಿತ ಚರ್ಚೆಯಲ್ಲಿ  ಈ ದೇಶವನ್ನು ಧಾರ್ಮಿಕತೆಯ ಆಧಾರದಲ್ಲಿ ವಿಭಜನೆ ಮಾಡಿದ್ದು ಕಾಂಗ್ರೆಸ್ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದರು.