ಹೊಸ ವರ್ಷದಲ್ಲಿ ಭಾರತದಲ್ಲಿ ಎರಡೆರಡು ಕೊರೋನಾ ಲಸಿಕೆಗೆ ಅನುಮತಿ ನೀಡಲಾಗಿದೆ. ಆಕ್ಸ್‌ಫರ್ಡ್ ಆಸ್ಟ್ರಾಝೆನಿಕ ಲಸಿಕೆಗೆ ಅನುಮತಿ ನೀಡಿದ ಬೆನ್ನಲ್ಲೇ, ಭಾರತ ಅಭಿವೃದ್ದಿ ಪಡಿಸಿದ ಕೋವಾಕ್ಸಿನ್ ಲಸಿಕೆಗೆ ಅನುಮೋದನೆ ನೀಡಿದೆ. ಆದರೆ ಈ ನಿರ್ಧಾರವನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಪ್ರಶ್ನಿಸಿದ್ದಾರೆ. ಇಷ್ಟೇ ಅಲ್ಲ ಇದಕ್ಕೆ ಕಾರಣವನ್ನೂ ನೀಡಿದ್ದಾರೆ.
ಕೊಚ್ಚಿ(ಜ.03): ದೇಶದಲ್ಲೀಗ ಕೊರೋನಾ ಲಸಿಕೆ ಡ್ರೈ ರನ್ ನಡೆಯುತ್ತಿದೆ. ಇದರ ಬೆನ್ನಲ್ಲೇ ಕೋವಿಶೀಲ್ಡ್, ಕೋವಾಕ್ಸಿನ್ ಲಸಿಕೆ ತುರ್ತು ಬಳಕಿಗೆ ಅನುಮತಿ ಕೂಡ ಸಿಕ್ಕಿದೆ. ಆಕ್ಸ್‌ಫರ್ಡ್ ಅಸ್ಟ್ರಾಝನಿಕಾ ಕೊರೋನಾ ಲಸಿಕೆಗೆ ಅನುಮತಿ ನೀಡಿದ ಬೆನ್ನಲ್ಲೇ ಭಾರತ ಭಯೋಟೆಕ್ ಅಭಿವೃದ್ಧಿಪಡಿಸಿದ ಕೋವಾಕ್ಸಿನ್ ಲಸಿಕೆಗೂ ಅನುಮತಿ ನೀಡಲಾಗಿದೆ. ಭಾರತೀಯ ಐಷದ ನಿಯಂತ್ರಕ(DCGI) ಅನುಮತಿ ನೀಡಿದೆ. ಆದರೆ ಈ ನಿರ್ಧಾರ ಅಪಾಯಕ್ಕೆ ಅಹ್ವಾನ ನೀಡಿದಂತೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.
ಭಾರತ ಅಭಿವೃದ್ಧಿ ಪಡಿಸಿದ ಕೋವ್ಯಾಕ್ಸಿನ್, ಕೋವಿಶೀಲ್ಡ್ ತುರ್ತು ಬಳಕೆಗೆ ಅನುಮತಿ
ಭಾರತದ ಆಕ್ಸ್‌ಫರ್ಡ್ ಅಸ್ಟ್ರಾಝೆನಿಕ ಲಸಿಕೆಗೆ ಬಳಕೆ ಮಾಡಬಹುದು. ಆದರೆ ಭಾರತ ಅಭಿವೃದ್ಧಿ ಪಡಿಸಿದ ಕೋವಾಕ್ಸಿನ್ ಲಸಿಕೆ 3ನೇ ಹಂತದ ಪ್ರಯೋಗವೇ ನಡೆದಿಲ್ಲ. ಕೇವಲ 2 ಹಂತದ ಪ್ರಯೋಗದ ಬಳಿಕ ದಿಢೀರ್ ಅನುಮತಿ ನೀಡಿರುವುದು ಸರಿಯಲ್ಲ ಎಂದು ಶಶಿ ತರೂರ್ ಹೇಳಿದ್ದಾರೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರನ್ನು ತರೂರ್ ಪ್ರಶ್ನಿಸಿದ್ದಾರೆ.
ದೇಶ ಅಭಿವೃದ್ಧಿ ಪಡಿಸಿದ ಲಸಿಕೆಯನ್ನು ತುರ್ತು ಕಾರಣ ನೀಡಿ ಬಳಕೆಗೆ ಅನುಮತಿ ನೀಡಲಾಗಿದೆ. ಇನ್ನೂ ಕೂಡ ಪ್ರಾಯೋಗಿಕ ಹಂತದ ಪರೀಕ್ಷೆಗಳು ಮುಗಿದೇ ಇಲ್ಲ. ಹೀಗಿರುವಾಗ ಲಾಬಿಗೆ ಮಣಿದು ಅನುಮತಿ ನೀಡಲಾಗಿದೆ ಎಂದು ತರೂರ್ ಆರೋಪಿಸಿದ್ದಾರೆ. ಮಹಾಮಾರಿ ಕೊರೋನಾ ವಿರುದ್ಧ ಹೋರಾಡಲು ಕೇಂದ್ರ ಸಾಕಷ್ಟು ಮುನ್ನಚ್ಚೆರಿಕೆ ವಹಿಸಬೇಕು. ಲಸಿಕೆ ಪಡೆದವರ ಮುಂದಿನ ಸ್ಥಿತಿ , ಅಡ್ಡಪರಿಣಾಮ ಕುರಿತು ಕೋವಾಕ್ಸಿನ್ ಪ್ರಯೋಗಗಳು ನಡೆದಿಲ್ಲ. ಹೀಗಾಗಿ ಭಾರತದ ಕೋವಾಕ್ಸಿನ್ ಲಸಿಕೆಯೊಂದಿಗೆ ಮುಂದುವರಿಯುವುದು ಅಪಾಯ ಎಂದು ತರೂರ್ ಹೇಳಿದ್ದಾರೆ
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 3, 2021, 3:02 PM IST