ಗೃಹ ಸಚಿವರ ಮನೆಯತ್ತ ಹೊರಟ ಶಾಹೀನ್ ಬಾಗ್ ಪ್ರತಿಭಟನಾಕಾರರು| ಅಮಿತ್ ಶಾ ಅವರೊಂದಿಗೆ ಸಿಎಎ ಕುರಿತು ಚರ್ಚಿಸಲು ಮುಂದಾದ ಮಹಿಳಾ ಪ್ರತಿಭಟನಾಕಾರರು|  500 ಮೀಟರ್ ದೂರದಲ್ಲೇ ಪ್ರತಿಭಟನಾಕಾರರನ್ನು ತಡೆದ ಪೊಲೀಸರು| ಬಹಿರಂಗವಾಗಿ ಅಮಿತ್ ಶಾ ಅವರೊಂದಿಗೆ ಚರ್ಚೆಗೆ ಒತ್ತಾಯಿಸಿದ ಪ್ರತಿಭಟನಾಕಾರರು|

ನವದೆಹಲಿ(ಫೆ.16): ಸಿಎಎ ವಿರೋಧಿ ಶಾಹೀನ್ ಬಾಗ್ ಪ್ರತಿಭಟನಾಕಾರರ ದಂಡು ಕೇಂದ್ರ ಗೃಹ ಸಚಿವ ಅಮಿತ್ ಶಾ ಮನೆಯತ್ತ ಧಾವಿಸಿದ್ದು, ಭಾರೀ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರನ್ನು ಪೊಲೀಸರು ತಡೆದ ಘಟನೆ ನಡೆದಿದೆ.

ಖಾಸಗಿ ಸುದ್ದಿವಾಹಿನಿಯಲ್ಲಿ ಮಾತನಾಡುತ್ತಾ ಸಿಎಎ ಕುರಿತು ಚರ್ಚಿಸಲು ಬಯಸುವವರು ಮೂರು ದಿನಗಳ ಒಳಗಾಗಿ ತಮ್ಮನ್ನು ಭೇಟಿ ಮಾಡಬಹುದು ಎಂದು ಅಮಿತ್ ಶಾ ಹೇಳಿದ್ದರು.

Scroll to load tweet…

ಈ ಹಿನ್ನೆಲೆಯಲ್ಲಿ ಶಾಹೀನ್ ಬಾಗ್ ’ನಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರು ಅಮಿತ್ ಶಾ ಮನೆಗೆ ತೆರಳಿ ಅವರ ಭೇಟಿಗೆ ಪ್ರಯತ್ನಿಸಿದರು.

ದಿಲ್ಲಿ ಶಾಹೀನ್‌ ಬಾಗ್‌ ಪೌರತ್ವ ಹೋರಾಟಕ್ಕೂ ಪಿಎಫ್‌ಐನಿಂದ ಹಣ!

ಈ ವೇಳೆ ಮಹಿಳಾ ಪ್ರತಿಭಟನಾಕಾರರ ಗುಂಪನ್ನು ತಡೆದ ಪೊಲೀಸರು, ಶಾ ಅವರನ್ನು ಭೇಟಿ ಮಾಡಲುವ ನಾಯಕರ ಪಟ್ಟಿ ಕೊಡುವಂತೆ ಕೇಳಿದರು. ಆದರೆ ನಾವೆಲ್ಲರೂ ಸೇರಿ ಗೃಹ ಸಚಿವರನ್ನು ಭೇಟಿಯಾಗಲು ಬಂದಿರುವುದಾಗಿ ಪ್ರತಭಟನಾಕಾರರು ಹೇಳಿದರು.

Scroll to load tweet…

ಇದಕ್ಕೆ ಅವಕಾಶ ಕೊಡದ ಪೊಲೀಸರು ಅಮಿತ್ ಶಾ ಅವರ ಮನೆಯಿಂದ 500 ಮೀಟರ್ ದೂರದಲ್ಲೇ ಪ್ರತಿಭಟನಾಕಾರರನ್ನು ತಡೆದರು. ಶಾ ಬಹಿರಂಗವಾಗಿ ನಮ್ಮೊಂದಿಗೆ ಚರ್ಚಸಬೇಕು ಎಂಬ ಪ್ರತಿಭಟನಾಕಾರರ ಆಗ್ರಹವನ್ನು ಪೊಲೀಸರು ತಳ್ಳಿ ಹಾಕಿದರು.