ಲಸಿಕೆ ಪಡೆದರೆ ಬರ್ಗರ್‌ನಿಂದ ವಿಮಾನ ಟಿಕೆಟ್‌ ವರೆಗೆ ಆಫರ್‌ ಲಸಿಕಾ ಅಭಿಯಾನ ಹೆಚ್ಚಿಸಲು ಆಕರ್ಷಕ ಕೊಡುಗೆಗಳು

ನವದೆಹಲಿ(ಜೂ.24): ಕೋವಿಡ್‌ ಲಸಿಕೆ ಪಡೆಯಲು ಜನರನ್ನು ಉತ್ತೇಜಿಸಲು ಸರ್ಕಾರ ನಾನಾ ಪ್ರಯತ್ನಗಳನ್ನು ಮಾಡುತ್ತಿರುವ ಬೆನ್ನಲ್ಲೇ, ಖಾಸಗಿ ವಲಯದ ಕಂಪನಿಗಳು ಕೂಡಾ ವಿವಿಧ ಆಫರ್‌ಗಳನ್ನು ನೀಡುವ ಲಸಿಕಾ ಅಭಿಯಾನಕ್ಕೆ ಮತ್ತಷ್ಟುಪೇರಣೆ ನೀಡುತ್ತಿವೆ.

‘ಜನರನ್ನು ಉತ್ತೇಜಿಸಿ ರಾಷ್ಟ್ರೀಯ ಲಸಿಕಾ ಅಭಿಯಾನಕ್ಕೆ ಸಣ್ಣ ಮಟ್ಟಿನ ಕೊಡುಗೆ ನೀಡುವುದು ನಮ್ಮ ಹೊಣೆ. ಹಾಗಾಗಿ ಕನಿಷ್ಠ ಒಂದು ಡೋಸ್‌ ಲಸಿಕೆ ಸ್ವೀಕರಿಸಿದವರಿಗೂ ವಿಮಾನ ಟಿಕೆಟ್‌ ಮೇಲೆ ಶೇ.10ರಷ್ಟುರಿಯಾಯಿತಿ ನೀಡಲಾಗುತ್ತದೆ’ ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ತಿಳಿಸಿದೆ.

ಹರಿಯಾಣ ಮಾಜಿ ಸಿಎಂ ಚೌಟಾಲಾಗೆ ಬಿಡುಗಡೆ ಭಾಗ್ಯ: ಅವಧಿಗೂ ಮುನ್ನವೇ ರಿಲೀಸ್ ಯಾಕೆ ?

ಇನ್ನು ಮ್ಯಾಕ್‌ಡೊನಾಲ್ಡ್‌ ಸಹ ಲಸಿಕೆ ಪಡೆದವರಿಗೆ 20% ರಿಯಾಯಿತಿ ಘೋಷಿಸಿದೆ. ಸೆಂಟ್ರಲ್‌ ಬ್ಯಾಂಕ್‌ ಉಳಿತಾಯ ಖಾತೆಗೆ ನೀಡಲಾಗುವ ಬಡ್ಡಿದರವನ್ನು ಹೆಚ್ಚಿದೆ. ಪಾಶ್ಚಿಮಾತ್ಯ ದೇಶಗಳಲ್ಲೂ ಇದೇ ರೀತಿಯಾಗಿ ಆಫರ್‌ ನೀಡಲಾಗುತ್ತಿದೆ.