ಮಮತಾ ಬ್ಯಾನರ್ಜಿನೀಡಿದ ಶಾಕ್‌ನಿಂದ ಇಂಡಿಯಾ ಮೈತ್ರಿ ಒಕ್ಕೂಟ ಇನ್ನೂ ಚೇತರಿಸಿಕೊಂಡಿಲ್ಲ. ಇದರ ಬೆನ್ನಲ್ಲೇ ಮತ್ತೊಂದು ಹಿನ್ನಡೆಯಾಗಿದೆ. ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಸಿಪಿಐ) ಏಕಾಂಗಿ ಸ್ಪರ್ಧೆ ಘೋಷಿಸಿದೆ. ಮೈತ್ರಿ ಧರ್ಮ ಮುರಿದು ಸ್ಪರ್ಧೆಗೆ ಮುಂದಾಗಿದೆ.
ರಾಂಚಿ(ಮಾ.11) ಲೋಕಸಭಾ ಚುನಾವಣೆಗೆ ಸಮೀಪಿಸುತ್ತಿದ್ದಂತೆ ಇಂಡಿಯಾ ಮೈತ್ರಿಯಲ್ಲಿ ತಳಮಳ ಹೆಚ್ಚಾಗಿದೆ. ಈಗಾಗಲೇ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಎಲ್ಲಾ 42 ಸ್ಥಾನಕ್ಕೆ ಅಭ್ಯರ್ಥಿಗಳನ್ನು ಘೋಷಿಸಿ ಮೈತ್ರಿ ಧರ್ಮ ಮುರಿದಿದ್ದಾರೆ.ಕಾಂಗ್ರೆಸ್ ಈ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ಇದೀಗ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಸಿಪಿಐ) ಇದೀಗ ಹೊಸ ತಲೆನೋವು ತಂದಿಟ್ಟಿದೆ. ಜಾರ್ಖಂಡ್‌ನಲ್ಲಿ ಮೈತ್ರಿ ಧರ್ಮ ಮುರಿದಿರುವಸಿಪಿಐ, ಏಕಾಂಗಿ ಸ್ಪರ್ಧೆ ಘೋಷಿಸಿದೆ.
ಇಂಡಿಯಾ ಮೈತ್ರಿಗೆ ಒಂದೊಂದೆ ರಾಜ್ಯಗಳಲ್ಲಿ ಹಿನ್ನಡೆಯಾಗುತ್ತಿದೆ. ಪಶ್ಚಿಮ ಬಂಗಾಳ, ಪಂಚಾಬ್ ಸೇರಿದಂತೆ ಕೆಲ ರಾಜ್ಯಗಳ ಬಳಿಕ ಇದೀಗ ಜಾರ್ಖಂಡ್‌ನಲ್ಲಿ ಮೈತ್ರಿ ಧರ್ಮ ಪಾಲನೆಯಾಗುತ್ತಿಲ್ಲ. ಜಾರ್ಖಂಡ್ ಸಿಪಿಎಂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಡುವುದಾಗಿ ಹೇಳಿದೆ. ಪ್ರತಿ ಚುನಾವಣೆಯಂತೆ ಜಾರ್ಖಂಡ್‌ನ 8 ಕ್ಷೇತ್ರದಲ್ಲಿ ಸಿಪಿಐ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಜಾರ್ಖಂಡ್‌ನಲ್ಲಿ ಒಟ್ಟು 14 ಲೋಕಸಭಾ ಕ್ಷೇತ್ರಗಳಿವೆ.
ಚುನಾವಣೆಗೆ 42 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಟಿಎಂಸಿ, ಸಿಎಂ ಮಮತಾ ನಿರ್ಧಾರಕ್ಕೆ ಕಾಂಗ್ರೆಸ್ ಕೆಂಡ!
ಕಾಂಗ್ರೆಸ್ ಇದುವರೆಗೂ ಯಾವುದೇ ಸೀಟು ಹಂಚಿಕೆ ಮಾತುಕತೆ ನಡೆಸಿಲ್ಲ. ಹಲವು ಮನವಿ ಮಾಡಿದರೂ ಕಾಂಗ್ರೆಸ್ ಸೀಟು ಹಂಚಿಕೆ ಬಗ್ಗೆ ನಿರಾಸಕ್ತಿ ತೋರಿದೆ. ಅಂತಿಮ ಕ್ಷಣದಲ್ಲಿ ಗೊಂದಲ ಸೃಷ್ಟಿಯಾಗುವ ಸಾಧ್ಯತೆ ಇದೆ. ಹೀಗಾಗಿ ಜಾರ್ಖಂಡ್ ಸಿಪಿಐ ಯಾವುದೇ ಮೈತ್ರಿ ಪಾಲನೆ ಮಾಡುತ್ತಿಲ್ಲ. ಏಕಾಂಗಿ ಸ್ಪರ್ಧೆ ಮಾಡಲಿದೆ ಎಂದಿದೆ.
ರಾಂಚಿ, ಹಜರಿಬಾಗ್, ಕೊಡೆರ್ಮಾ, ಚಾತ್ರಾ, ಪಲಮು, ಗಿರಿಧ್, ಡುಮ್ಕಾ ಹಾಗೂ ಜೆಮ್‌ಶೆಡ್‌ಪುರ ಲೋಕಸಬಾ ಕ್ಷೇತ್ರಗಳಿಂದ ಸಿಪಿಐ ಸ್ಪರ್ಧಿಸುತ್ತಿದೆ. ಮಾರ್ಚ್ 16ರ ಬಳಿಕ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಲಿದ್ದೇವೆ ಎಂದು ಸಿಪಿಐ ಸೆಕ್ರೆಟರಿ ಮಹೇಂದ್ರ ಪಾಠಕ್ ಹೇಳಿದ್ದಾರೆ. ಸಿಪಿಐ ನಿರ್ಧಾರವನ್ನು ಜಾರ್ಖಂಡ್ ಮುಕ್ತಿ ಮೋರ್ಚಾ ಖಂಡಿಸಿದೆ. ಮೈತ್ರಿ ಧರ್ಮ ಪಾಲನೆ ಮಾಡಬೇಕು. ಏಕಾಂಗಿಯಾಗಿ ಸ್ಪರ್ಧೆ ಘೋಷಣೆ ಮಾಡಿ ಅಂತಿಮ ಕ್ಷಣದಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಇದರಿಂದ ಉದ್ದೇಶ ಈಡೇರಿಕೆಯಾಗುವುದಿಲ್ಲ ಎಂದಿದೆ.
‘ಇಂಡಿಯಾ’ ಕೂಟದ ನಾಯಕರು ಗಾಂಧಿಯ 3 ಮಂಗಗಳಂತೆ: ಪಿಎಂ ಮೋದಿ
ಸದ್ಯ ಜಾರ್ಖಂಡ್‌ನಲ್ಲಿರುವ 14 ಲೋಕಸಭಾ ಕ್ಷೇತ್ರಗಳ ಪೈಕಿ 11 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಒಂದು ಕ್ಷೇತ್ರ ಎಜೆಎಸ್‌ಯು ಪಾರ್ಟಿ ಗೆದ್ದುಕೊಂಡಿದ್ದರೆ, ಜಾರ್ಖಂಡ್ ಮುಕ್ತಿ ಮೋರ್ಚಾ ಹಾಗೂ ಕಾಂಗ್ರೆಸ್ ತಲಾ ಒಂದೊಂದು ಕ್ಷೇತ್ರದಲ್ಲಿ ಗೆದ್ದುಕೊಂಡಿದೆ. ಕಾಂಗ್ರೆಸ್‌ನಿಂದ ಆರಿಸಿ ಬಂದ ಏಕೈಕ ಸಂಸದೆ ಗೀತಾ ಕೋರಾ ಇತ್ತೀಚೆಗಷ್ಟೇ ಬಿಜೆಪಿ ಸೇರಿಕೊಂಡಿದ್ದಾರೆ. ಹೀಗಾಗಿ ಸದ್ಯ ಕಾಂಗ್ರೆಸ್ ಬಳಿ ಯಾವುದೇ ಕ್ಷೇತ್ರಗಳಿಲ್ಲ. ಸಿಪಿಐ ಕೂಡ ಒಂದು ಕ್ಷೇತ್ರವನ್ನೂ ಗೆದ್ದುಕೊಂಡಿಲ್ಲ. ಇದೀಗ ಅಂತಿಮ ಹಂತದಲ್ಲಿ ಏಕಾಂಗಿ ಸ್ಪರ್ಧೆ ಬಿಜೆಪಿಗೆ ವರವಾಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
