ದೇಶಾದ್ಯಂತ ಕೊರೋನಾ ಆತಂಕ| ಕೊರೋನಾ ಎರಡನೇ ಅಲೆ ನಡುವೆ ಮುಂದುವರೆದ ಲಸಿಕಾ ಅಭಿಯಾನ| ಭಾರತ ಸರ್ಕಾರದ ನಿರ್ದೇಶನದಂತೆ ಲಸಿಕೆ ದರ ಘೋಷಿಸಿದ ಸೀರಂ ಸಂಸ್ಥೆ| ದುಬಾರಿಯಲ್ಲ ಕೋವಿಶೀಲ್ಡ್

ನವದೆಹಲಿ(ಏ.21): ಕೊರೋನಾ ಮಹಾಮಾರಿ ಹರಡುತ್ತಿರುವ ವೇಗಗ ಇಡೀ ದೇಶವನ್ನೇ ಆತಂಕಕ್ಕೀಡು ಮಾಡಿದೆ. ಈ ವೈರಸ್‌ ನಿಯಂತ್ರಿಸಲು ಎಲ್ಲಾ ರಾಜ್ಯ ಸರ್ಕಾರಗಳು ಕಠಿಣ ಕ್ರಮ ಜಾರಿಗೊಳಿಸುತ್ತಿವೆ. ಕಳೆದ 24 ಗಂಟೆಯಲ್ಲಿ 2,94,115 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಭಾರತದಲ್ಲಿ ಈವರೆಗೆ 1,56,09,004 ಪ್ರಕರಣಗಳು ಬೆಳಕಿಗೆ ಬಂದಿವೆ. ಸದ್ಯ ದೇಶದಲ್ಲಿ 21,50,119 ಸಕ್ರಿಯ ಪ್ರಕರಣಗಳಿದ್ದು, ಕಳೆದ ಒಂದು ದಿನದಲ್ಲಿ 1,66,520 ಮಂದಿ ಗುಣಮುಖರಾಗಿದ್ದಾರೆ. ಹೀಗಿರುವಾಗ ಸದ್ಯ ಭಾರತಧಿ ಸರ್ಕಾರದ ನಿರ್ದೇಶನದಂತೆ ಸ್ವದೇಶೀ ಲಸಿಕೆ ಕೋವಿಶೀಲ್ಡ್ ದರವನ್ನು ಸೀರಂ ಸಂಸ್ಥೆ ನಿಗದಿಪಡಿಸಿದೆ.

ಈ ಬಗ್ಗೆ ಪಗ್ರಕಟಣೆ ಹೊರಡಿಸಿರುವ ಸೀರಂ ಸಂಸ್ಥೆ, ಭಾರತ ಸರ್ಕಾರದ ನಿರ್ದೇಶನದಂತೆ ನಾವು ಲಸಿಕೆಯ ದರ ಘೋಷಿಸುತ್ತಿದ್ದೇವೆ. ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್‌ 400 ರೂ. ಹಾಗೂ ಖಾಸಗಿ ಆಸ್ಪತ್ರೆಗಳಿಗೆ 600ರೂ. ನಿಗದಿಪಡಿಸಿದ್ದೇವೆ. ಕೇಂದ್ರಕ್ಕೆ ಈ ಹಿಂದಿನಂತೆ 150ರೂ. ಗೆ ಲಸಿಕೆ ಸಿಗಲಿದೆ. ಇದಕ್ಕೂ ಮುನ್ನ ಖಾಸಗಿ ಆಸ್ಪತ್ರೆಗಳಿಗೆ 250 ರೂ.ಗೆ ಲಸಿಕೆ ನೀಡಲಾಗುತ್ತಿತ್ತು. ಎಂದು ತಿಳಿಸಿದೆ.

ಇಷ್ಟೇ ಅಲ್ಲದೇ ಮುಂದಿನ ಎರಡು ತಿಂಗಳಲ್ಲಿ ಲಸಿಕೆಯ ಉತ್ಪಾದನೆ ಹೆಚ್ಚಿಸಲಾಗುವುದು. ಈಗ ಶೇ 50ರಷ್ಟು ಲಸಿಕೆ ಕೆಂದ್ರದ ಲಸಿಕಾ ಅಭಿಯಾನಕ್ಕೆ ನೀಡಲಾಗುತ್ತಿದೆ. ಉಳಿದ ಲಸಿಕೆಯನ್ನು ರಾಜ್ಯ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ನೀಡಲಾಗುತ್ತಿದೆ ಎಂದು ತಿಳಿಸಿದೆ.

ಆಕ್ಸಿಜನ್‌ ಪೂರೈಕೆ, ಕೇಂದ್ರದ ಹದ್ದಿನ ಕಣ್ಣು

ಆಕ್ಸಿಜನ್‌ ಪೂರೈಕೆ ಮೇಲೆ ಇನ್ನು ಕೇಂದ್ರ ಗೃಹ ಇಲಾಖೆ ಹದ್ದಿನಗಣ್ಣು ಇರಿಸಲಿದೆ. ಬುಧವಾರದಿಂದ ನೇರವಾಗಿ ಆಸ್ಪತ್ರೆಗಳಿಗೇ ಆಮ್ಲಜನಕ ಪೂರೈಕೆಯಾಗಲಿದೆ. ಕೇಂದ್ರ ಆರೋಗ್ಯ ಮಿಷನ್‌ನಲ್ಲಿ ಆರಮಭಿಸಲಾಗಿರುವ ಕಂಟ್ರೋಲ್‌ ರೂಂನಿಂದ ಚಲನವಲನಗಳ ಮೇಲೆ ಗಮನವಿಡಲಾಗುತ್ತದೆ.

ದುಬಾರಿಯಲ್ಲ ಕೋವಿಶೀಲ್ಡ್

ಅಮೆರಿಕ, ಚೀನಾ, ರಷ್ಯಾಗೆ ಹೋಲಿಸಿದರೆ ನಮ್ಮ ದೇಶದಲ್ಲಿ ತಯಾರಾಗುವ ಪೂನಾದ ಸೀರಂ ಸಂಸ್ಥೆಯ ಕೋವಿಶೀಲ್ಡ್ ಬೆಲೆ ದುಬಾರಿಯೇನಲ್ಲ. ಆದರೆ, ಸರಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸರಬರಾಜಾಗುವ ಬೆಲೆ ಮಾತ್ರ ಭಿನ್ನವಾಗಿದೆ. ಕೇವಲ ಬೆಲೆಯ ಮಾತಲ್ಲ, ಇನ್ನು ತತ್ಸಂಬಂಧಿಸಿದ ಅನೇಕ ಮಾಹಿತಿಗಳು ಇಲ್ಲಿವೆ. 

ಗೆಳೆಯರ, ಕುಟುಂಬದ ಗ್ರೂಪುಗಳಲ್ಲಿ ಹಂಚಿಕೊಳ್ಳುವುದರ ಮೂಲಕ ಸುವರ್ಣ ನ್ಯೂಸ್ ನ ನಿಖರ ಮಾಹಿತಿಯನ್ನು ಪಸರಿಸಿ - ಧನ್ಯವಾದ

ಕೊರೋನಾ ವೈರಸ್‌ ಅಂಕಿ ಅಂಶ, ಲಸಿಕೆ ಅಭಿಯಾನ ಹಾಗೂ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ