ಕೆಜಿಎಫ್ ಸಿನಿಮಾದಿಂದ ಪ್ರೇರಣೆಗೊಂಡು ಕೊಲೆ ಮಾಡುತ್ತಿದ್ದ ಸೀರಿಯಲ್ ಕಿಲ್ಲರ್‌ಗೆ ಜೀವಾವಧಿ ಶಿಕ್ಷೆ
ಕೆಜಿಎಫ್ ಸಿನಿಮಾದಿಂದ ಪ್ರೇರಣೆಗೊಂಡು ಮಲಗಿದ್ದ ಸೆಕ್ಯೂರಿಟಿ ಗಾರ್ಡ್‌ಗಳು ಸೇರಿದಂತೆ ಅಮಾಯಕರ ತಲೆ ಒಡೆದು ವಿಕ್ಟರಿ ಸಿಂಬಲ್ ತೋರಿಸುತ್ತಿದ್ದ ವಿಕೃತ ಮನಸ್ಸಿನ ಸೀರಿಯಲ್ ಕಿಲ್ಲರ್‌ಗೆ ಈಗ ಜೀವಾವಧಿ ಶಿಕ್ಷೆಯಾಗಿದೆ.
ಭೋಪಾಲ್ : ಕೆಜಿಎಫ್ ಸಿನಿಮಾದಿಂದ ಪ್ರೇರಣೆಗೊಂಡು ಮಲಗಿದ್ದ ಸೆಕ್ಯೂರಿಟಿ ಗಾರ್ಡ್‌ಗಳು ಸೇರಿದಂತೆ ಅಮಾಯಕರ ತಲೆ ಒಡೆದು ವಿಕ್ಟರಿ ಸಿಂಬಲ್ ತೋರಿಸುತ್ತಿದ್ದ ವಿಕೃತ ಮನಸ್ಸಿನ ಸೀರಿಯಲ್ ಕಿಲ್ಲರ್‌ಗೆ ಈಗ ಜೀವಾವಧಿ ಶಿಕ್ಷೆಯಾಗಿದೆ. 22 ವರ್ಷದ ಶಿವಪ್ರಸಾದ್ ಧುರ್ವೆ ಅಲಿಯಾಸ್ ಹಲ್ಕು ಧುರ್ವೆ ಜೀವಾವಧಿ ಶಿಕ್ಷೆಗೆ ಒಳಗಾದ ಸರಣಿ ಹಂತಕ, 2022ರಲ್ಲಿ ಈತ ಮಧ್ಯಪ್ರದೇಶದ ಸಾಗರ್ ಹಾಗೂ ಭೋಪಾಲ್‌ನಲ್ಲಿ ಮಲಗಿದ್ದ ಭದ್ರತಾ ಸಿಬ್ಬಂದಿಯ ತಲೆ ಒಡೆದು ಹತ್ಯೆ ಮಾಡಿದ್ದ.
ಜಗತ್ತನ್ನು ಅರಿಯದ ಮುಗ್ಧ ಮಗು ಹಾಗೂ ಮಲಗಿದ್ದ ವ್ಯಕ್ತಿ ಈ ಪ್ರಕರಣದಲ್ಲಿ ಸಂತ್ರಸ್ತರಾಗಿದ್ದು, ಈ ರೀತಿಯ ಅಪರಾಧಗಳ ತಡೆಯಲು ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ತೀರ್ಪಿನ ಸಂದರ್ಭದಲ್ಲಿ ಸಾಗರದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮತ್ತು ವಿಶೇಷ ನ್ಯಾಯಾಧೀಶ ಪ್ರಶಾಂತ್ ಸಕ್ಸೇನಾ ಹೇಳಿದ್ದಾರೆ, ಕೇವಲ 22 ವರ್ಷದ ಧುರ್ವೆ 4 ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ.
Murder in Aurangabad : ಅಕ್ಕನ ತಲೆ ಕಡಿದು ಅಮ್ಮನೊಂದಿಗೆ ಸೆಲ್ಫಿ ತೆಗೆದ 17ರ ತರುಣ
2022ರ ಆಗಸ್ಟ್ 29 ರಂದು ಸಾಗರದ ಕಲಾ ಮತ್ತು ವಾಣಿಜ್ಯ ಕಾಲೇಜಿನ ಭದ್ರತಾ ಸಿಬ್ಬಂದಿ ಶಂಭುದಯಾಳ್ ದುಬೆ ಅವರ ಬರ್ಬರ ಹತ್ಯೆ ನಡೆದಿತ್ತು. ಆರೋಪಿ ಶಿವಪ್ರಸಾದ್ ಧುರ್ವೆ, ಕಲ್ಲು ಎತ್ತಿ ಹಾಕಿ ಮಲಗಿದ್ದ ಶಂಭುದಯಾಳ್ ಹತ್ಯೆ ಮಾಡಿದ್ದ. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಕೊಲೆಯಾದ ಶಂಭುದಯಾಳ್ ಪುತ್ರ ರಾಹುಲ್ದುಬೆ ಹಾಗೂ ಮತ್ತೊಬ್ಬ ಭದ್ರತಾ ಸಿಬ್ಬಂದಿ ಜಗದೀಶ್ ರಕ್ವಾರ್ ಅವರ ಸಾಕ್ಷಿ ಹೇಳಿಕೆ ಆಧರಿಸಿ ಹಾಗೂ ಕೊಲೆಗೆ ಬಳಸಿದ ಆಯುಧ, ಕದ್ದ ವಸ್ತುಗಳು, ಫೋನ್ ಕರೆ ದಾಖಲೆಗಳು ಎಲ್ಲ ಮಾಹಿತಿಯನ್ನು ಆಧರಿಸಿ ಸಾಗರದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು, ಕೊಲೆ ಕಳ್ಳತನ ಹಾಗೂ ಸಾಕ್ಷಿ ವಿರೂಪಗೊಳಿಸಿದ್ದಕ್ಕಾಗಿ ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದಾರೆ.
ಮಲಗಿದ್ದವರ ತಲೆ ಒಡೆಯುವುದನ್ನೇ ಚಾಳಿಯಾಗಿಸಿಕೊಂಡಿದ್ದ ಈ ಸೀರಿಯಲ್ ಕಿಲ್ಲರ್ ಜೈಲಿನಲ್ಲೂ ಸಹ ಕೈದಿಗಳಿಗೆ ನಿದ್ದೆ ಮಾಡಲು ಬಿಡುತ್ತಿರಲಿಲ್ಲ, ನಿದ್ದೆಯಲ್ಲಿಯೇ ಧ್ರವ ಐವರನ್ನು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ವಿಚಾರ ತಿಳಿದ ಸಹ ಕೈದಿಗಳು ನಿದ್ದೆ ಮಾಡಲು ಭಯಪಡುತ್ತಿದ್ದರು. ಹೀಗಾಗಿ ಧುರ್ವೆಯನ್ನು ಇತರ ಕೈದಿಗಳ ಜೊತೆ ಬಿಡದೆ ಸಿಂಗಲ್ ಸೆಲ್‌ನಲ್ಲಿ ಇರಿಸಿದ್ದರು. ಬಂಧನಕ್ಕೂ ಮೊದಲು ವಾರದ ಕಾಲ ಸರಣಿ ಹತ್ಯೆ ಮಾಡುತ್ತಾ ಸಾಗರದ ಜನ ನಿದ್ದೆ ಕೆಡಿಸಿದ್ದ, ಒಬ್ಬರ ನಂತರ ಒಬ್ಬರಂತೆ ಭದ್ರತಾ ಸಿಬ್ಬಂದಿಯ ಹತ್ಯೆ ಮಾಡಿದ್ದ. ಈತನಿಗಾಗಿ ನಗರದಲ್ಲಿ ಪೊಲೀಸರು ಗಸ್ತು ತಿರುಗಿ ರಾತ್ರಿಯಿಡೀ ಹುಡುಕಾಟ ನಡೆಸಿದ್ದರು, ಅಷ್ಟರಲ್ಲಿ ಆತ ಭೋಪಾಲ್‌ಗೆ ಎಸ್ಕೇಪ್ ಆಗಿದ್ದ.
ಅಂತಿಮವಾಗಿ ಆತನನ್ನು ಭೋಪಾಲ್‌ನಲ್ಲಿ ಬಂಧಿಸಲಾಯ್ತು. ಶಾಂತವಾಗಿ ತನ್ನಷ್ಟಕ್ಕೆ ತಾನು ಮಲಗಿರುತ್ತಿದ್ದ ಮುಗ್ಧ ಜನರನ್ನು ಈತ ಭೀಕರವಾಗಿ ತಲೆ ಒಡೆದೇ ಕೊಲೆ ಮಾಡ್ತಿದ್ದ. ಈತ ಜೈಲಿಗೆ ಬಂದಾಗ ಈತನ ವಿಚಾರ ತಿಳಿದು ಇತರ ಕೈದಿಗಳು ಜೈಲಿನ ಸಿಬ್ಬಂದಿ ಕೂಡ ಭಯಗೊಂಡಿದ್ದರು.
ಅಕ್ಷಯ್ ಚಿತ್ರ ಬಳ್ಳಾರಿ ಪೊಲೀಸರಿಗೆ ಸ್ಫೂರ್ತಿ! ಏನ್ಮಾಡಿದ್ರು ನೋಡಿ!
ಯಾವುದೇ ಕಾರಣವಿಲ್ಲದೇ ಈತ ಜನರನ್ನು ಕೊಲೆ ಮಾಡುತ್ತಿದ್ದಿದ್ದರಿಂದ ಈತನ ಪ್ರಕರಣ ಸಂಪೂರ್ಣವಾಗಿ ಇತರ ಕೊಲೆ ಪ್ರಕರಣಗಳಿಗಿಂತ ವಿಭಿನ್ನವಾಗಿತ್ತು. ತಪ್ಪೊಪ್ಪಿಗೆ ವೆಳೆ ಆತ ಫೇಮಸ್ ಆಗುವುದಕ್ಕೆ ಕೊಲೆ ಮಾಡಿದೆ ಎಂದಿದ್ದ. ಅಲ್ಲದೇ ಸಾಗರ ಪೊಲೀಸರ ತಂಡ ಆತನನ್ನು ಮರಳಿ ಕರೆತಂದಾಗ ನಗತ್ತಾ ಇಂದು ರಾತ್ರಿ ನಾನು ಇನ್ನೊಬ್ಬನನ್ನು ಕೊಲೆ ಮಾಡುವೆ ಎಂದಿದ್ದ. ಅಲ್ಲದೇ ಬಂಧಿಸಿ ಕೋರ್ಟ್‌ಗೆ ಕರೆದೊಯ್ಯುವ ವೇಳೆ ನಗುತ್ತಾ ವಿಕ್ಟರಿ ಸಿಂಬಲ್ ತೋರಿಸಿ ಪೊಲೀಸರನ್ನೇ ಬೆಚ್ಚಿ ಬೀಳಿಸಿದ್ದ, ಜೊತೆಗೆ ಈತ ಕೆಜಿಎಫ್ 2 ನ ರಾಕಿ ಭಾಯ್‌ನ ಪಾತ್ರದಿಂದ ಪ್ರೇರೇಪಣೆ ಗೊಂಡಿದ್ದೇನೆ ಎಂದಿದ್ದ ಈತ ಪೊಲೀಸರು ನನ್ನ ಮುಂದಿನ ಟಾರ್ಗೆಟ್ ಎಂದಿದ್ದ.