ಬಂಧಿತ ಅಲ್‌ಖೈದಾ ಉಗ್ರನ ಮನೆಯಲ್ಲಿ ರಹಸ್ಯ ಚೇಂಬರ್!
ಎನ್‌ಐಎ ಬಲೆಗೆ ಬಿದ್ದಿರುವ 9 ಶಂಕಿತ ಅಲ್‌ಖೈದಾ ಉಗ್ರರು| ಉಗ್ರರ ಪೈಕಿ ಒಬ್ಬನಾದ ಅಬು ಸೂಫಿಯಾನ್ ಎಂಬಾತನ ಮನೆಯಲ್ಲಿ ರಹಸ್ಯ ಚೇಂಬರ್| ರಾಣಿನಗರ್ ಪ್ರದೇಶದಲ್ಲಿರುವ ಉಗ್ರನ ಮನೆಯ ಮೇಲೆ ಎನ್‌ಐಎ ಅಧಿಕಾರಿಗಳ ದಾಳಿ
ಬಹರಾಂಪುರ (ಸೆ.21): ಶುಕ್ರವಾರ ರಾತ್ರಿ ಎನ್‌ಐಎ ಬಲೆಗೆ ಬಿದ್ದಿರುವ 9 ಶಂಕಿತ ಅಲ್‌ಖೈದಾ ಉಗ್ರರ ಪೈಕಿ ಒಬ್ಬನಾದ ಅಬು ಸೂಫಿಯಾನ್ ಎಂಬಾತನ ಮನೆಯಲ್ಲಿ ರಹಸ್ಯ ಚೇಂಬರ್ ಪತ್ತೆಯಾಗಿದೆ.
ರಾಣಿನಗರ್ ಪ್ರದೇಶದಲ್ಲಿರುವ ಉಗ್ರನ ಮನೆಯ ಮೇಲೆ ಎನ್‌ಐಎ ಅಧಿಕಾರಿಗಳು ಮನೆಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ 10 ಅಡಿ ಉದ್ದ ಮತ್ತು 7 ಅಡಿ ಅಗಲದ ನೆಲಮಾಳಿಗೆ ಪತ್ತೆ ಆಗಿದೆ. ದಾಳಿಯ ವೇಳೆ ಹಲವು ಎಲೆಕ್ಟ್ರಿಕ್ ಗ್ಯಾಜೆಟ್‌ಗಳು ಕೂಡ ಪತ್ತೆ ಆಗಿವೆ.
ಭಟ್ಕಳ ಉಗ್ರ ರಿಯಾಜ್‌ಗೆ ಪಾಕ್‌ನಿಂದ ವಿಐಪಿ ಭದ್ರತೆ!
ವಿಚಾರಣೆಯ ವೇಳೆ ಸೂಫಿಯಾನ್ ಮನೆಯ ಬಳಿ ಚೇಂಬರ್ ಅನ್ನು ನಿರ್ಮಿಸಿದ್ದ ಸಂಗತಿಯನ್ನು ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲಿ 9 ಅಲ್‌ಖೈದಾ ಉಗ್ರರನ್ನು ಎನ್‌ಐಎ ಬಂಧಿಸಿತ್ತು.
9 ಮಂದಿಯನ್ನು ಬಂಧಿಸಲು ಸೆ.11ರಿಂದಲೇ ಎನ್‌ಐಎ ಹಾಗೂ ಇನ್ನಿತರೆ ಕೇಂದ್ರೀಯ ತನಿಖಾ ಸಂಸ್ಥೆಗಳು ಕಾರ್ಯಾಚರಣೆ ಆರಂಭಿಸಿದ್ದವು. ಸೆ.11ರಂದು ಎನ್‌ಎಐ ಈ ಕುರಿತಂತೆ ಪ್ರಕರಣವನ್ನೂ ದಾಖಲಿಸಿತ್ತು.
ಸ್ಫೋಟಕ ವಶ:
ಪಟಾಕಿಯಲ್ಲಿರುವ ಪೊಟಾಶಿಯಂ ಬಳಸಿ ಸುಧಾರಿತ ಸ್ಪೋಟಕ (ಐಇಡಿ) ತಯಾರಿಸಲು ಈ ಉಗ್ರರು ಸಿದ್ಧರಾಗಿದ್ದರು. ಬಂಧಿತರಿಂದ ಸ್ವಿಚ್, ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ ಡಿಜಿಟಲ್ ಉಪಕರಣಗಳು, ದಾಖಲೆಗಳು, ಜಿಹಾದಿ ಸಾಹಿತ್ಯ, ಹರಿತವಾದ ಶಸ್ತಾ್ರಸ್ತ್ರ, ನಾಡ ಬಂದೂಕು, ದೇಶೀಯ ರಕ್ಷಾ ಕವಚ, ಮನೆಯಲ್ಲೇ ಕುಳಿತು ಸ್ಪೋಟಕ ತಯಾರಿಸುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.
ದೇಣಿಗೆ ಸಂಗ್ರಹ:
ಬಂಧಿತರು ಸ್ಥಳೀಯವಾಗಿ ದೇಣಿಗೆ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದರು. ಜೊತೆಗೆ ಪಾಕಿಸ್ತಾನದಲ್ಲಿರುವ ಅಲ್‌ಖೈದಾ ಉಗ್ರರು ಶೀಘ್ರವೇ ಇವರಿಗೆ ಶಸ್ತ್ರಾಸ್ತ್ರ ಪೂರೈಸುವ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಕೆಲವು ಸದಸ್ಯರು ಶಸ್ತಾ್ರಸ್ತ್ರ, ಸ್ಪೋಟಕ ಖರೀದಿಗಾಗಿ ದೆಹಲಿಗೆ ತೆರಳುವ ಚಿಂತನೆಯಲ್ಲಿದ್ದರು ಎಂದು ತಿಳಿದುಬಂದಿದೆ.
ಪುಲ್ವಾಮ ಮಾದರಿಯಲ್ಲಿ ಮತ್ತೊಂದು ದಾಳಿ ಸಂಚು: ಹೈವೇ ಪಕ್ಕದಲ್ಲಿ 52 ಕೆಜಿ ಸ್ಫೋಟಕ
ಆನ್‌ಲೈನ್‌ನಲ್ಲಿ ಪಾಕ್‌ನಿಂದ ಬ್ರೈನ್‌ವಾಶ್
ಬಂಧಿತ ವ್ಯಕ್ತಿಗಳನ್ನು ಪಾಕಿಸ್ತಾನದ ಅಲ್‌ಖೈದಾ ಸಂಘಟನೆಯು, ಸಾಮಾಜಿಕ ಜಾಲತಾಣ ಬಳಸಿ ಮೂಲಭೂತವಾದಿಗಳನ್ನಾಗಿ ಪರಿವರ್ತನೆ ಮಾಡಿತ್ತು. ಬೆಂಗಳೂರು, ದೆಹಲಿ, ಕೇರಳದ ಹಲವು ಸ್ಥಳಗಳ ಮೇಲೆ ದಾಳಿ ನಡೆಸಲು ಇವರನ್ನು ಪ್ರೇರೇಪಿಸಲಾಗಿತ್ತು. ಕೆಲ ಸಮಯದ ಹಿಂದೆಯೇ ದೇಶಾದ್ಯಂತ ದಾಳಿಗೆ ಉದ್ದೇಶಿಸಲಾಗಿತ್ತು. ಆದರೆ ಲಾಕ್ಡೌನ್‌ನಿಂದಾಗಿ ದಾಳಿಯನ್ನು ಮುಂದೂಡಲಾಗಿತ್ತು ಇದಲ್ಲದೆ ಮುಂಬರುವ ಬಿಹಾರ ಚುನಾವಣೆ ವೇಳೆಯೂ ವಿಧ್ವಂಸಕ ಕೃತ್ಯದ ಉದ್ದೇಶ ಉಗ್ರರಿಗಿತ್ತು. ಈ ಬಂಧನ ಕಾರ್ಯಾಚರಣೆಯೊಂದಿಗೆ ಬೃಹತ್ ದಾಳಿ ಸಂಚು ವಿಫಲವಾಗಿದೆ.