ನವದೆಹಲಿ(ನ.05): ಫ್ರಾನ್ಸ್‌ ನಿರ್ಮಿತ ಇನ್ನೂ ಮೂರು ಅತ್ಯಾಧುನಿಕ ರಫೇಲ್‌ ಯುದ್ಧ ವಿಮಾನಗಳು ಬುಧವಾರ ಆಗಮಿಸಿವೆ. ಫ್ರಾನ್ಸ್‌ನ ಇಸ್ಟೆ್ರಸ್‌ ವಾಯುನೆಲೆಯಿಂದ ಪಯಣ ಆರಂಭಿಸಿದ ಈ ಮೂರು ಯುದ್ಧ ವಿಮಾನಗಳು ಎಲ್ಲೂ ನಿಲುಗಡೆಯಾಗದೆ ದಾಖಲೆಯ 6852 ಕಿ.ಮೀ(3700 ನಾಟಿಕಲ್‌ ಮೈಲ್‌) ಕ್ರಮಿಸಿ ಭಾರತದ ನೆಲದಲ್ಲಿ ಲ್ಯಾಂಡ್‌ ಆಗಿವೆ.

ಇದರೊಂದಿಗೆ ಭಾರತ ಖರೀದಿಸಿದ್ದ 36 ವಿಮಾನಗಳ ಪೈಕಿ 8 ವಿಮಾನಗಳು ಭಾರತದ ಕೈಸೇರಿದಂತೆ ಆಗಿದೆ. ಕೆಲ ತಿಂಗಳ ಹಿಂದಷ್ಟೇ ಮೊದಲ ಹಂತದಲ್ಲಿ 5 ವಿಮಾನಗಳು ಭಾರತಕ್ಕೆ ಹಸ್ತಾಂತರವಾಗಿದ್ದವು. ಜೊತೆಗೆ ಈ ಪೈಕಿ ಕೆಲ ವಿಮಾನಗಳನ್ನು ಈಗಾಗಲೇ ಗಡಿ ಕ್ಯಾತೆ ತೆಗೆಯುತ್ತಿರುವ ಚೀನಾಕ್ಕೆ ಎಚ್ಚರಿಕೆ ನೀಡಲು ಲಡಾಖ್‌ ಗಡಿಯಲ್ಲಿ ನಿಯೋಜಿಸಲಾಗಿದೆ.

ಭಾರತ 2016ರಲ್ಲಿ 59,000 ಕೋಟಿ ರು. ನೀಡಿ ಒಟ್ಟು 36 ರಫೇಲ್‌ ಯುದ್ಧವಿಮಾನಗಳನ್ನು ಖರೀದಿಸಿದೆ. ಅವುಗಳನ್ನು ಹಂತಹಂತವಾಗಿ ಫ್ರಾನ್ಸ್‌ ಸರ್ಕಾರ ಭಾರತಕ್ಕೆ ಹಸ್ತಾಂತರಿಸುತ್ತಿದೆ.