ವಾರಾಣಸಿ[ಫೆ.17]: ದೇವರಿಗೂ ರೈಲಿನಲ್ಲಿ ಸೀಟು ಮೀಸಲಾ? ಹೌದು, ಭಾನುವಾರ ಪ್ರಧಾನಿ ಮೋದಿ ಅವರಿಂದ ಚಾಲನೆ ಪಡೆಯಲ್ಪಟ್ಟಮಹಾಕಾಲ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಒಂದು ಸೀಟನ್ನು ಈಶ್ವರನಿಗೆ ಮೀಸಲಿಡಲಾಗಿತ್ತು.

ಜ್ಯೋತಿರ್ಲಿಂಗ ಧಾರ್ಮಿಕ ತಾಣಗಳಾದ ಉತ್ತರಪ್ರದೇಶದ ವಾರಾಣಸಿ, ಮಧ್ಯಪ್ರದೇಶದ ಉಜ್ಜಯಿನಿ ಮತ್ತು ಓಂಕಾರೇಶ್ವರ ನಡುವೆ ಸಂಪರ್ಕ ಕಲ್ಪಿಸುವ ಮಹಾ ಕಾಲ್‌ ಎಕ್ಸ್‌ಪ್ರೆಸ್‌ ಖಾಸಗಿ ರೈಲಿನ ಕೋಚ್‌ ನಂ. ಬಿ5ರ ಸೀಟು ಸಮಖ್ಯೆ 64 ಅನ್ನು ಈಶ್ವರನಿಗೆ ಸದಾ ಕಾಲ ಕಾಯ್ದಿರಿಸಲಾಗಿತ್ತು.

ಈ ಸೀಟಿನ ಮೇಲೇ ದೇಗುಲದ ಚಿತ್ರವನ್ನು ರಚಿಸುವ ಮೂಲಕ, ಜನರಲ್ಲಿ ಸೀಟಿನ ಕುರಿತು ಅರಿವು ಮೂಡಿಸಲಾಗಿದೆ.